About Us Advertise with us Be a Reporter E-Paper

Breaking Newsಕ್ರೀಡೆ

556 ರನ್‌‌‌ ಸಿಡಿಸಿದ 14 ರ ಪೋರ

ದೆಹಲಿ: ಎರಡು ದಿನಗಳ ಪಂದ್ಯದಲ್ಲಿ 14 ವರ್ಷ್‌ದ ಬಾಲಕನೊಬ್ಬ 556 ರನ್ ಸಿಡಿಸುವ ಮೂಲಕ ದೇಶದ ಗಮನ ಸೆಳೆದಿದ್ದಾನೆ.

ವಡೋದರ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಶ್ರೀ ಗಾಯಕ್ವಾಡ 14 ವಯೋಮಿತಿ ಟೂರ್ನಿಯಲ್ಲಿ ಮಹಿಂದರ್ ಲಾಲ ಅಮರ್‌ನಾಥ್ ಕ್ರಿಕೆಟ್ ಅಕಾಡೆಮಿ ತಂಡದ ಪ್ರಿಯಾಂಶು ಮೊಲಿಯಾ, ಯೋಗಿ ಕ್ರಿಕೆಟ್ ಅಕಾಡೆಮಿ ವಿರುದ್ಧ ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ 319 ಎಸೆತಗಳಿಗೆ 556 ರನ್ ವೈಯಕ್ತಿಕ ರನ್ ಗಳಿಸಿದರು.

ಇದರ ಫಲವಾಗಿ ಮಹಿಂದರ್ ಲಾಲ ತಂಡ ಮೊದಲ ಇನಿಂಗ್‌ಸ್ನಲ್ಲಿ ನಾಲ್ಕು ವಿಕೆಟ್‌‌ ಕಳೆದುಕೊಂಡು 826 ಬೃಹತ್ ರನ್ ಗಳಿಸಿತ್ತು. ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಯೋಗಿ ಕ್ರಿಕೆಟ್ ಅಕಾಡೆಮಿ ತಂಡ ಕೇವಲ 54 ರನ್‌ಗೆ ಸರ್ವಪತನ ಕಂಡಿತ್ತು. ಇದರಲ್ಲಿ ಪ್ರಿಯಾಂಶು ಆಪ್ ಸ್ಪಿನ್ ಮೂಲಕ ನಾಲ್ಕು ವಿಕೆಟ್ ಪಡೆದಿದ್ದರು. ಎರಡನೇ ಇನಿಂಗ್‌ಸ್ನಲ್ಲಿ ಯೋಗಿ ಕ್ರಿಕೆಟ್ ಅಕಾಡೆಮಿ ತಂಡ ಕೇವಲ 84 ರನ್‌ಗಳಿಗೆ ಆಲ್‌ಔಟ್ ಆಯಿತು. ಮಹಿಂದರ್ ಲಾಲ ಅಮರನಾಥ್ ತಂಡ ಇನಿಂಗ್‌ಸ್ ಹಾಗೂ 689 ರನ್‌ಗಳ ಭರ್ಜರಿ ಜಯ ಸಾಧಿಸಿತು.

Tags

Related Articles

Leave a Reply

Your email address will not be published. Required fields are marked *

Language
Close