About Us Advertise with us Be a Reporter E-Paper

Breaking Newsದೇಶಪ್ರಚಲಿತ

ಉಗ್ರರಿಂದ ಮೂವರು ಪೊಲೀಸರ ಹತ್ಯೆ: ಆರು ಮಂದಿ ವಿಡಿಯೋ ಮೂಲಕ ರಾಜೀನಾಮೆ..!?

ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಮೂವರು ಪೊಲೀಸ್​ ಅಧಿಕಾರಿಗಳನ್ನು ಅಪಹರಿಸಿ ಹತ್ಯೆ ಮಾಡಿದ್ದ ಹಿಜ್ಬುಲ್‌ ಮುಜಾಹಿದ್ದೀನ್‌ ವಿಡಿಯೋ ಒಂದನ್ನು ಪೋಸ್ಟ್‌ ಮಾಡಿದ್ದ ಬೆನ್ನಲ್ಲೇ ಆರು ಮಂದಿ ಪೊಲೀಸರು ವಿಡಿಯೋ ಮೂಲಕವೇ ತಮ್ಮ ರಾಜೀನಾಮೆಯನ್ನು ಘೋಷಿಸಿದ್ದಾರೆ.

ಶುಕ್ರವಾರ ಮುಂಜಾನೆ ಮೂವರು ವಿಶೇಷ ಪೊಲೀಸ್‌ ಅಧಿಕಾರಿಗಳು ಮತ್ತು ಓರ್ವ ಪೊಲೀಸ್‌ ಪೇದೆಯನ್ನು ಶೋಫಿಯಾನ್‌ನ ಅವರ ಮನೆಗಳಿಂದ ಉಗ್ರರು ಅಪಹರಿಸಿದ್ದ ಬಳಿಕ ಗುಂಡು ಹಾರಿಸಿ ಹತ್ಯೆ ಮಾಡಿ ಮೂವರ ಮೃತದೇಹಗಳನ್ನು ಬಿಸಾಡಿದ್ದರು. ಈ ಹತ್ಯೆ ಪೊಲೀಸರಲ್ಲಿ ಭೀತಿಗೆ ಕಾರಣವಾಗಿದ್ದು, ಕನಿಷ್ಠ ಆರು ಮಂದಿ ಪೊಲೀಸರು ವಿಡಿಯೋ ಸಂದೇಶಗಳನ್ನು ಬಿಡುಗಡೆ ಮಾಡಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ಉಗ್ರರು ಮೂವರು ಪೊಲೀಸ್‌ ಅಧಿಕಾರಿಗಳನ್ನು ಕೊಂದಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇದುವರೆಗೂ ಯಾವುದೇ ಪೊಲೀಸ್‌ ಅಧಿಕಾರಿಗಳು ರಾಜೀನಾಮೆಯನ್ನು ನೀಡಿಲ್ಲ. ಇಲ್ಲಿನ ವಿಶೇಷ ಪೊಲೀಸ್‌ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ವರದಿಗಳು ಸುಳ್ಳು ಮತ್ತು ಪ್ರೇರೇಪಿತವಾಗಿವೆ ಎಂದು ರಾಜ್ಯ ಪೊಲೀಸ್‌ ದೃಢಪಡಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯವು ತಿಳಿಸಿದೆ.

ನನ್ನ ಹೆಸರು ಇರ್ಶಾದ್‌ ಅಹ್ಮದ್‌ ಬಾಬಾ. ನಾನು ಪೊಲೀಸ್‌ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಮೂಲಕ ನಾನು ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ ಎಂದು ಪೇದೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಅಂತಯೇ ಮತ್ತೊಬ್ಬ ಎಸ್‌ಪಿಒ ತಾಜಲ್ಲ ಹುಸೇನ್‌ ಲೋನ್‌, ಪೊಲೀಸ್‌ ಇಲಾಖೆಗೆ ಸೆಪ್ಟೆಂಬರ್‌ 17ರಂದೇ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ನನ್ನ ಹೆಸರು ನವಾಜ್‌ ಅಹ್ಮದ್‌ ಲೋನೆ, ಕುಲ್ಗಾಮ್‌ ನಿವಾಸಿ. ವಿಶೇಷ ಪೊಲೀಸ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ನಾನು ಸ್ವಯಿಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಮತ್ತೊಬ್ಬ ಪೊಲೀಸ್‌ ಅಧಿಕಾರಿ, ನನ್ನ ಹೆಸರು ಶಬೀರ್‌ ಅಹ್ಮದ್‌ ಥೋಕರ್‌, ಕಳೆದ ಎಂಟು ವರ್ಷಗಳಿಂದ ವಿಶೇಷ ಪೊಲೀಸ್‌ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದೆ. ಇಂದಿನಿಂದ ನನಗೂ ಪೊಲೀಸ್‌ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಎಂದು ಎಲ್ಲರಿಗೂ ವಿಡಿಯೋ ಮೂಲಕ ತಿಳಿಸುತ್ತಿದ್ದೇನೇ ಎಂದು ಹೇಳಿದ್ದಾರೆ.

ಮಂಗಳವಾರವಷ್ಟೇ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯು ಭದ್ರತಾ ಪಡೆಗೆ ಬೆದರಿಕೆ ಒಡ್ಡಿ ವಿಡಿಯೋವನ್ನು ಪೋಸ್ಟ್‌ ಮಾಡಿತ್ತು. ಅದರಲ್ಲೂ ರಾಜ್ಯದ ವಿಶೇಷ ಪೊಲೀಸ್‌ ಅಧಿಕಾರಿಗಳು ಇನ್ನು ನಾಲ್ಕು ದಿನಗಳಲ್ಲಿ ರಾಜೀನಾಮೆ ನೀಡಿ ಇಲ್ಲವಾದರೆ ಸಾಯಲು ರೆಡಿಯಾಗಿ ಎಂದು ಹೇಳಿದ್ದರು. ಅಲ್ಲದೆ, ನಿಮ್ಮ ಕೆಲಸಗಳನ್ನು ಬಿಟ್ಟು ಸಾಕ್ಷಿಯಾಗಿ ತಮ್ಮ ರಾಜೀನಾಮೆಯ ವಿಡಿಯೋಗಳನ್ನು ಅಂತರ್ಜಾಲದಲ್ಲಿ ಅಪ್‌ಲೋಡ್‌ ಮಾಡಿ. ಇಲ್ಲದಿದ್ದರೆ ನಿಮ್ಮ ಕುಟುಂಬದವರನ್ನು ಕೂಡ ಕೊಲ್ಲುವುದಾಗಿ ಬೆದರಿಕೆ ಒಡ್ಡಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Tags

Related Articles

Leave a Reply

Your email address will not be published. Required fields are marked *

Language
Close