Breaking Newsದೇಶಪ್ರಚಲಿತ
ಟ್ರಕ್, ಕಾರ್ ನಡುವೆ ಮುಖಾ ಮುಖಿ ಡಿಕ್ಕಿ 6 ಮಂದಿ ಸಾವು

ಮಹಾರಾಷ್ಟ್ರ: ಟ್ರಕ್ ಹಾಗೂ ಕಾರ್ ನಡುವೆ ಮುಖಾ ಮುಖಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿದ್ದು, ಇಬ್ಬರು ಗಾಂಭಿರವಾಗಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ಹಿಂಗೊಲಿಯಲ್ಲಿ ನಡೆದಿದೆ.
ಘಟನೆಯು ಗುರುವಾರ ರಾತ್ರಿ ಹಿಂಗೊಲಯ ವಾಶಿಮ್ ಹೆದ್ದಾರಿಯಲ್ಲಿ ನಡೆದಿದೆ. ಘಟನೆ ತಿಳಿದ ತಕ್ಷಣ ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ಶುಕ್ರವಾರ ಬೆಳಗ್ಗೆ ಸಂಚಾರಿ ದಟ್ಟಣೆಗೆ ಕಾರಣವಾಗಿತ್ತು.
ಸದ್ಯ ಘಟನೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.