ಮೊದಲನೇ ಏಕದಿನ ಪಂದ್ಯ; ಭಾರತದ ವಿರುದ್ದ ಆಸೀಸ್ ಗೆ ೫ ವಿಕೆಟ್‌ಗಳ ಜಯ

Posted In : ಕ್ರೀಡೆ

ವ್ಯರ್ಥವಾದ ರೋಹಿತ್ ಶತಕ, ಭಾರತ ವಿರುದ್ಧ ನಡೆದ ಮೊದಲ ಏಕದಿನದ ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್‍ಗಳ ಜಯ ಸಾದಿಸಿದೆ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ರೋಹಿತ್ ಶರ್ಮಾ ಅಜೇಯ ಶತಕ, ವಿರಾಟ್ ಕೊಹ್ಲಿಯ ಅರ್ಧಶತಕದಿಂದಾಗಿ 50 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 309 ರನ್ ಗಳಿಸಿತು. ಭಾರತದ  ಗುರಿಯನ್ನು ಸವಾಲಾಗಿ ಸ್ವೀಕರಿಸಿದ ಆಸ್ಟ್ರೇಲಿಯಾ ಆರಂಭದಲ್ಲಿ ಎರಡು ವಿಕೆಟ್ ಉರುಳಿದರೂ ನಾಯಕ ಸ್ವೀವನ್ ಸ್ಮಿತ್ ಮತ್ತು ಜಾರ್ಜ್ ಬೈಲಿ ಅವರ ಆಕರ್ಷಕ ಶತಕ ಸಿಡಿಸುವ ಮೂಲಕ 49.2 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 310 ರನ್‍ಗಳಿಸಿ ಗೆಲುವಿನ ನಗೆ ಬೀರಿತು.

ಭಾರತದ ವಿರುದ್ದ ಸ್ವೀವನ್ ಸ್ಮಿತ್ 149 ರನ್( 135 ಎಸೆತ,11 ಬೌಂಡರಿ, 2ಸಿಕ್ಸರ್)ಗಳಿಸಿದರೆ ಜಾರ್ಜ್ ಬೈಲಿ 112 ರನ್(120 ಎಸೆತ, 7 ಬೌಂಡರಿ, 2 ಸಿಕ್ಸರ್) ಸಿಡಿಸಿದರು. ಭಾರತದ ಪರವಾಗಿ ಬರಿಂದರ್ ಸ್ರನ್ 2 ವಿಕೆಟ್ ಪಡೆದರೆ, ಅಶ್ವಿನ್ 2 ವಿಕೆಟ್ ಪಡೆದರು.

ಆಸ್ಟ್ರೇಲಿಯಾ ವಿರುದ್ಧ ರೋಹಿತ್ 3ನೇ ಶತಕ: ಭಾರತ 36 ರನ್ಗಳಿಗೆ ತನ್ನ ೨ ವಿಕೆಟ್ಗಳನ್ನ ಕಳೆದುಕೊಂಡ ಸಂದರ್ಭದಲ್ಲಿ  ವಿರಾಟ್ ಕೊಹ್ಲಿ ಜೊತೆಗೆ ಇನ್ನಿಂಗ್ಸ್ ಕಟ್ಟಿದ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ಬಾಳ್ವೆಯ 9 ಶತಕಗಳಿಸಿದರು. 122 ಎಸೆತಗಳಲ್ಲಿ ಶತಕ ಸಿಡಿಸಿದ ರೋಹಿತ್ ಶರ್ಮಾ ಅಂತಿಮವಾಗಿ ಔಟಾಗದೇ 171 ರನ್(163 ಎಸೆತ, 13 ಬೌಂಡರಿ, 7 ಸಿಕ್ಸರ್) ಸಿಡಿಸಿದರು. 

ರೋಹಿತ್ ಶರ್ಮಾಗೆ ಸಾಥ್ ನೀಡಿದ ಕೊಹ್ಲಿ 91 ರನ್( 97 ಎಸೆತ, 9 ಬೌಂಡರಿ, 1 ಸಿಕ್ಸರ್) ಗಳಿಸಿದ್ದಾಗ ಫಾಲ್ಕುನರ್‍ಗೆ ಬೌಲಿಂಗ್‍ನಲ್ಲಿ ಫಿಂಚ್‍ಗೆ ಕ್ಯಾಚ್ ನೀಡಿ ಔಟಾದರು. ಆಸ್ಟ್ರೇಲಿಯಾ ಪರವಾಗಿ ಫಾಲ್ಕೂನರ್ 2 ವಿಕೆಟ್ ಪಡೆದರೆ, ಹ್ಯಾಝಲ್‍ವುಡ್ 1 ವಿಕೆಟ್ ಪಡೆದರು.

Leave a Reply

Your email address will not be published. Required fields are marked *

twelve − 6 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Friday, 20.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಪಂಚಮಿ, ಶುಕ್ರವಾರ, ನಿತ್ಯನಕ್ಷತ್ರ-ಮೃಗಶಿರಾ, ಯೋಗ-ಶೋಭನ, ಕರಣ-ಬವ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 20.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಪಂಚಮಿ, ಶುಕ್ರವಾರ, ನಿತ್ಯನಕ್ಷತ್ರ-ಮೃಗಶಿರಾ, ಯೋಗ-ಶೋಭನ, ಕರಣ-ಬವ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top