About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜ. 4, 5, 6

ಧಾರವಾಡ: ಜ.4, 5 ಹಾಗೂ 6ರಂದು ಧಾರವಾಡದಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ 15 ವಿವಿಧ ಉಪಸಮಿತಿಗಳನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

ಜಿಪಂ ಭವನದಲ್ಲಿ ಸಮಿತಿ ರಚನೆ ಸಂಬಂಧ ಮಂಗಳವಾರ ಸಭೆ ನಡೆಸಿ ಮಾತನಾಡಿ, ಚುನಾಯಿತ ಪ್ರತಿನಿಧಿಗಳು, ಕಸಾಪ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಸಮಿತಿಯಲ್ಲಿದ್ದಾರೆ. ನ.17ರೊಳಗಾಗಿ ಉಪಸಮಿತಿಗಳು ಸಭೆ ನಡೆಸಿ ನಡಾವಳಿಗಳನ್ನು ಸಲ್ಲಿಸಬೇಕು. ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶೀಘ್ರವೇ ಮತ್ತೊಂದು ಸಭೆ ನಡೆಸಲಾಗುವುದು ಎಂದು ಹೇಳಿದರು.

ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಸಿ.ಸತೀಶ, ಎಸ್ಪಿ ಜಿ. ಸಂಗೀತಾ, ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಮಹೇಶ್ ಕುಮಾರ, ಎಸ್.ಜಿ. ಕೊರವರ, ಮಹಮ್ಮದ್ ಜುಬೇರ್, ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸ್ವಾಗತ ಸಮಿತಿ
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಗೌರವಾಧ್ಯಕ್ಷರು,
ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅಧ್ಯಕ್ಷರು
ಜಿಲ್ಲಾಧಿಕಾರಿ ದೀಪಾ ಕಾರ್ಯಾಧ್ಯಕ್ಷರು.

ವಸತಿ ಮತ್ತು ಸಾರಿಗೆ ಸಮಿತಿ
ಕಾರ್ಯಾಧ್ಯಕ್ಷರು- ಅಪರ ಜಿಲ್ಲಾಧಿಕಾರಿ.

ಆಹಾರ ಸಮಿತಿ
ಕಾರ್ಯಾಧ್ಯಕ್ಷರು- ಆಯುಕ್ತರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ.

ಸ್ವಚ್ಛತಾ ಮತ್ತು ನೈರ್ಮಲ್ಯತೆ ಸಮಿತಿ
ಕಾರ್ಯಾಧ್ಯಕ್ಷರು- ಉಪ ಆಯುಕ್ತರು, ಕಂದಾಯ ವಿಭಾಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ.

ಮೆರವಣಿಗೆ ಸಮಿತಿ
ಕಾರ್ಯಾಧ್ಯಕ್ಷರು- ಉಪ ಪೊಲೀಸ್ ಆಯುಕ್ತರು, ಅಪರಾಧ ಮತ್ತು ಸಾರಿಗೆ, ಹುಬ್ಬಳ್ಳಿ-ಧಾರವಾಡ ಮಹಾನಗರ.

ಸಾಂಸ್ಕೃತಿಕ ಕಾರ್ಯಕ್ರಮ ಕಾರ್ಯಕಾರಿ ಸಮಿತಿ
ಕಾರ್ಯಾಧ್ಯಕ್ಷರು- ಅಬಕಾರಿ ಅಧೀಕ್ಷಕರು ಧಾರವಾಡ.

ವೇದಿಕೆಯ ಕಾರ್ಯಕಾರಿ ಸಮಿತಿ
ಅಭಿಯಂತರರು, ಲೋಕೋಪಯೋಗಿ ಇಲಾಖೆ.

ಆರೋಗ್ಯ ಸಮಿತಿ
ಕಾರ್ಯಾಧ್ಯಕ್ಷರು- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು.

ಪ್ರಚಾರ ಸಮಿತಿ
ಕಾರ್ಯಾಧ್ಯಕ್ಷರು-ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ.

ನೋಂದಣಿ ಸಮಿತಿ
ಕಾರ್ಯಾಧ್ಯಕ್ಷರು-ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ.

ವಾಣಿಜ್ಯ ಮಳಿಗೆ ಸಮಿತಿ
ಕಾರ್ಯಾಧ್ಯಕ್ಷರು-ಮುಖ್ಯ ಆಡಳಿತಾಧಿಕಾರಿಗಳು, ಕಿಮ್ಸ್, ಹುಬ್ಬಳ್ಳಿ.

ಅಲಂಕಾರ ಸಮಿತಿ
ಕಾರ್ಯಾಧ್ಯಕ್ಷರು-ಅಧೀಕ್ಷಕ ಅಭಿಯಂತರರು, ಹೆಸ್ಕಾಂ, ಹುಬ್ಬಳ್ಳಿ.

ಮಹಿಳಾ ಸಮಿತಿ
ಕಾರ್ಯಾಧ್ಯಕ್ಷರು-ಉಪ ನಿಬಂಧಕರು, ಸಹಕಾರ ಸಂಘಗಳು, ಧಾರವಾಡ.

ಪುಸ್ತಕ ಮತ್ತು ಮಾರಾಟ ಮಳಿಗೆ ಸಮಿತಿ
ಕಾರ್ಯಾಧ್ಯಕ್ಷರು-ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ರಾಯಾ ಪುರ, ಧಾರವಾಡ.

ಸ್ವಯಂ ಸೇವಕರ ಉಸ್ತುವಾರಿ ಸಮಿತಿ
ಕಾರ್ಯಾಧ್ಯಕ್ಷರು-ಕುಲಸಚಿವರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

Tags

Related Articles

Leave a Reply

Your email address will not be published. Required fields are marked *

Language
Close