About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಇಂಗ್ಲೆಂಡ್ 287ಕ್ಕೆ ಆಲ್‌ಔಟ್‌

ಬರ್ಮಿಂಗ್‍ಹ್ಯಾಮ್: ಭಾರತ ಇಂಗ್ಲೆಂಡ್ ನಡುವಿನ ಐತಿಹಾಸಿಕ ಪ್ರಥಮ ಟೆಸ್ಟ್ ಪಂದ್ಯದಲ್ಲಿಇಂಗ್ಲೆಂಡ್ ತಂಡ 287 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದು ಕೊಂಡಿದೆ.

ಮೊದಲ ದಿನದಾದ್ಯಂತ 9 ವಿಕೆಟ್ ಕಳೆದುಕೊಂಡು 285 ರನ್ ಗಳಿಸಿದ್ದ ಇಂಗ್ಲೆಂಡ್ ಎರಡನೇ ದಿನದಾರಂಭದಲ್ಲಿ ಕೇವಲ 2 ರನ್ ಸೇರಿಸಿ ತನ್ನ ಮೊದಲ ಇನ್ನಿಂಗ್ಸ್ ಮುಕ್ತಾಯಗೊಳಿಸಿತು. 24 ರನ್ ಗಳಿಸಿದ ಸ್ಯಾಮ್ ರ‍್ರನ್ ಕೊನೆಯವರಾಗಿ ಪೆವಿಲಿಯನ್ ಸೇರಿದರು. ಈ ವಿಕೆಟ್ ಮೊಹಮ್ಮದ್ ಶಮಿ ಪಾಲಯಿತು.

ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಎದುರಾಳಿ ತಂಡದ 4 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಅಪರೂಪದ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ವೇಳೆ ಅಶ್ವಿನ್ ಇಂಗ್ಲೆಂಡ್ ತಂಡದ ಕುಕ್, ಬೆನ್ ಸ್ಟೋಕ್ಸ್, ಜೊಸ್ ಬಟ್ಲರ್, ಸ್ಟುವರ್ಟ್ ಬ್ರಾಡ್ ರನ್ನು ಔಟ್ ಮಾಡುವ ಮೂಲಕ ನಾಲ್ಕು ವಿಕೆಟ್ ಪಡೆದರು. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ದಿನವೇ 4 ವಿಕೆಟ್ ಪಡೆದ ಮೊದಲ ಟೀಂ ಇಂಡಿಯಾದ ಸ್ಪಿನ್ ಬೌಲರ್ ಎಂಬ ಹೆಗ್ಗಳಿಕೆ ಪಡೆದರು.

ಅಲ್ಲದೇ ವಿದೇಶಿ ನೆಲದಲ್ಲಿ ಈ ಸಾಧನೆ ಮಾಡಿದ 4ನೇ ಆಟಗಾರ ಎನಿಸಿಕೊಂಡರು. ಈ ಹಿಂದೆ ಟೀಂ ಇಂಡಿಯಾ ಪರ ಸ್ಪಿನ್ನರ್ ಚಂದ್ರಶೇಖರ್ (6/94), ಬಿಷನ್ ಸಿಂಗ್ ಬೇಡಿ (5/55), ಅನಿಲ್ ಕುಂಬ್ಳೆ (5/84) ವಿದೇಶಿ ನೆಲದಲ್ಲಿ ಈ ಸಾಧನೆ ಮಾಡಿದ್ದರು.

ಕುಕ್‍ಗೆ ಕಿಕ್‌ ಕೊಟ್ಟ ಅಶ್ವಿನ್: ಪಂದ್ಯದ ವಿಶೇಷವಾಗಿ ಅಶ್ವಿನ್ ಇಂಗ್ಲೆಂಡ್ ತಂಡದ ಕುಕ್ ರನ್ನು ತಮ್ಮ ವೃತ್ತಿ ಜೀವನಲ್ಲಿ 8 ಬಾರಿಗೆ ಬಲಿ ಪಡೆದರು. ಇದರೊಂದಿಗೆ ಅಶ್ವಿನ್ ಬೌಲಿಂಗ್ ನಲ್ಲಿ ಹೆಚ್ಚು ಬಾರಿ ಔಟಾದ 2ನೇ ಆಟಗಾರ ಎನಿಸಿಕೊಂಡರು. ಅಸೀಸ್ ಆಟಗಾರ ಡೆವಿಡ್ ವಾರ್ನರ್ 9 ಬಾರಿ ಅಶ್ವಿನ್‍ಗೆ ಬಲಿಯಾಗಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
Tags

Related Articles

Leave a Reply

Your email address will not be published. Required fields are marked *

Language
Close