About Us Advertise with us Be a Reporter E-Paper

ಅಂಕಣಗಳು

ಸಾಹುಕಾರರಿಗೆ ಇರುವ ಒಂದು ದೊಡ್ಡ ಸಮಸ್ಯೆ…!

- ಎಸ್. ಷಡಕ್ಷರಿ

ಸಾಹುಕಾರರಿಗೆ ಸಮಸ್ಯೆಗಳು ಕಡಿಮೆ ಇರುತ್ತವೆ ಎಂದು ಎಲ್ಲರೂ ಭಾವಿಸುತ್ತಾರೆ ಅಲ್ಲವೇ? ಆದರೆ ಸಾಹುಕಾರರೊಬ್ಬರು ಯಾವಾಗಲೂ ‘ಸಾಹುಕಾರರಾದವರಿಗೆ ತಮ್ಮ ನಂತರ ಸಾಹುಕಾರಿಕೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವ ಸಾಮರ್ಥ್ಯ ತಮ್ಮ ಮಕ್ಕಳಿಗಿದೆಯೇ ಎನ್ನುವುದೇ ಅವರ ದೊಡ್ಡ ಸಮಸ್ಯೆ’ ಎಂದು ಹೇಳುತ್ತಿದ್ದರು. ಇದೇ ಮಾತಿಗೆ ಸೂಕ್ತ ಎನಿಸಬಹುದಾದ ಮಕ್ಕಳ ಕತೆಯೊಂದು ಇಲ್ಲಿದೆ.

ಒಂದೂರಿನಲ್ಲಿ ಒಬ್ಬ ಸಿರಿವಂತರಿದ್ದರಂತೆ. ಅವರಿಗೆ ಮೂರು ಜನ ಮಕ್ಕಳು. ತಮ್ಮ ನಂತರ ಸಿರಿವಂತಿಕೆಯನ್ನು ಉಳಿಸಿಕೊಳ್ಳಲು ಮೂವರಲ್ಲಿ ಯಾರು ಯೋಗ್ಯ ಎಂದು ಕಂಡುಕೊಳ್ಳಬೇಕಿತ್ತು. ಮೂವರು ಮಕ್ಕಳನ್ನು ಕರೆದು ತಲಾ ಒಂದು ನೂರು ರುಪಾಯಿ ಕೊಟ್ಟು, ಈ ಹಣದಲ್ಲಿ ನಿಮ್ಮ ನಿಮ್ಮ ಕೋಣೆಗಳನ್ನು ಸಂಪೂರ್ಣವಾಗಿ ತುಂಬಿಸುವಂಥದ್ದು ಏನನ್ನಾದರೂ ತೆಗೆದುಕೊಂಡು ಬನ್ನಿ ಎಂದರು.

ಮೊದಲನೆಯವನು ತನ್ನ ಗೆಳೆಯರಲ್ಲಿ ವಿಚಾರಿಸಿದ. ಕೋಣೆ ತುಂಬುವಂಥ ವಸ್ತು ನೂರು ರುಪಾಯಿಗೆ ಏನೂ ಸಿಗುವುದಿಲ್ಲ ಎಂದು ಎಲ್ಲರೂ ಹೇಳಿಬಿಟ್ಟರು. ಕೊನೆಗೊಬ್ಬ ಗೆಳೆಯನ ಸಲಹೆಯಂತೆ ಪುರಸಭೆಯವರಿಂದ ಒಂದು ಗಾಡಿ ಕಸವನ್ನು ಕೊಂಡು ತಂದು ಕೋಣೆಯಲ್ಲಿನ ದುರ್ವಾಸನೆಯಿಂದಾಗಿ ಸಿಟ್ಟುಗೊಂಡರು. ಸಾವಿರ ರೂಪಾಯಿ ಖರ್ಚು ಮಾಡಿ ಕಸವನ್ನೆಲ್ಲ ಹೊರಗೆ ಸಾಗಿಸಿ ಮನೆಯನ್ನು ಶುಭ್ರಗೊಳಿಸಿದರು. ಮಗನನ್ನು ಕರೆದು ಬೈಯ್ದರು. ಆತ ’ನೂರು ರುಪಾಯಿಗೆ ಕಸವಲ್ಲದೆ ಮತ್ತೇನು ಸಿಗುತ್ತದೆ?’ ಎಂದು ಮರು ಪ್ರಶ್ನಿಸಿದ.

ಎರಡನೆಯ ಮಗ ಊರಲ್ಲೆಲ್ಲ ಸುತ್ತಾಡಿ ನೂರು ರೂಪಾಯಿಗೆ ಮೂರ್ನಾಲ್ಕು ಗಾಡಿಯಷ್ಟು ಹುಲ್ಲು ತಂದು ತುಂಬಿಸಿದ. ಸಂಜೆ ಮನೆಗೆ ಮರಳಿದ ಸಾಹುಕಾರರು ಕೋಣೆಯಲ್ಲೆಲ್ಲ ತುಂಬಿ ಹೋಗಿದ್ದ ಹುಲ್ಲು ಕಂಡು ಸಿಟ್ಟಿನಿಂದ ಹಲ್ಲು ಕಡಿದರು. ಹಣ ಖರ್ಚುಮಾಡಿ ಹೊರಗೆ ಹಾಕಿದರು. ಮಗನನ್ನು ಬೈಯ್ದಾಗ ಆತನೂ ’ನೂರು ರುಪಾಯಿಯಷ್ಟು ಕಡಿಮೆ ಹಣಕ್ಕೆ ಹುಲ್ಲಲ್ಲದೆ ಕೋಣೆ ತುಂಬುವಷ್ಟು ಮತ್ತೇನು ಸಿಗುತ್ತದೆ? ಎಂದು ಪ್ರಶ್ನಿಸಿದ.

ಮೂರನೆಯ ಮಗನ ಸರದಿ, ಆತ ಒಂದು ರೂಪಾಯಿ ಕೊಟ್ಟು ಧೂಪದ ಬತ್ತಿ ತಂದ. ಅದನ್ನು ಹೊತ್ತಿಸಿಟ್ಟ. ತಂದೆ ಬಂದಾಗ ಕೋಣೆಯಷ್ಟೆ ಅಲ್ಲ, ಮನೆಯಲ್ಲೆಲ್ಲ ಸುವಾಸನೆ ತುಂಬಿ ತುಳುಕುತ್ತಿತ್ತು. ತಂದೆಯ ಮನಸ್ಸು ಪ್ರಫುಲ್ಲವಾಯಿತು. ಮೂರನೆಯ ಮಗ ‘ಅಪ್ಪಾ! ಕೋಣೆಯನ್ನು ತುಂಬಿಸಲು ಒಂದು ರೂಪಾಯಿಯ ಧೂಪದ ಕಡ್ಡಿ ಸಾಕಾಯಿತು. ತೊಂಬತ್ತೊಂಬತ್ತು ರೂಪಾಯಿಗಳನ್ನು ನಿಮಗೇ ಹಿಂತಿರುಗಿಸುತ್ತಿದ್ದೇನೆ’ ಎಂದ. ಸಾಹುಕಾರರು ಯಾರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದರು ಎಂಬುದು ನಿಮಗೀಗಾಗಲೇ ಗೊತ್ತಾಗಿರಬಹುದು! ನಿಮ್ಮ ಊಹೆ ಸರಿ! ಸಿರಿವಂತರು ಮೂರನೆಯ ಮಗನನ್ನೇ ಉತ್ತರಾಧಿಕಾರಿಯಾಗಿ ನೇಮಿಸಿದರು.

ನಮಗೆಲ್ಲ ಅಪರಿಮಿತ ಶಕ್ತಿ ಸಾಮರ್ಥ್ಯಗಳು ಸಿಕ್ಕಿವೆ. ನಮಗೆ ಸಿಕ್ಕಿದ್ದು ಇಷ್ಟೇನಾ ಎಂದು ಕೊರಗುತ್ತ ಕೂರಬಹುದು. ಅದನ್ನುಪಯೋಗಿಸಿ ನಮ್ಮ ಪ್ರಪಂಚದಲ್ಲಿ ಕಸ ತುಂಬಿಸಬಹುದು. ಎಲ್ಲರೂ ಬೇಸರಿಸಿಕೊಳ್ಳುವಂತೆ ಮಾಡಬಹುದು. ಅಥವಾ ಹುಲ್ಲು ತುಂಬಿಸಿ ಯಾರಿಗೂ ಉಪಯೋಗವಿಲ್ಲದಂತೆ ಬಾಳಬಹುದು ಅಥವಾ ನಾವಿರುವ ಪರಿಸರವನ್ನು ಮಾಡಿ ನಾವೂ ಮತ್ತು ನಮ್ಮೊಂದಿಗೆ ಎಲ್ಲರೂ ಆನಂದದಿಂದ ಬದುಕುವಂತೆ ಮಾಡಬಹುದು. ಅಂತಹ ಧೂಪದ ಬತ್ತಿ ಯಾವುದು ಗೊತ್ತೇ? ನಗುನಗುತ್ತಾ ಇರುವುದು ಒಳ್ಳೆಯ ಮಾತುಗಳನ್ನಾಡುವುದು, ಎಲ್ಲರಿಗೂ ಶುಭವನ್ನೇ ಹಾರೈಸುವುದು, ಸಾಧ್ಯವಿದ್ದರೆ ಮತ್ತೊಬ್ಬರಿಗೆ ಸಹಾಯ ಮಾಡುವುದು ಮುಂತಾದವು. ಏನೂ ಖರ್ಚಿಲ್ಲದೆ ನಮ್ಮ ಬದುಕನ್ನು ತುಂಬಿಸಿಕೊಳ್ಳುವ, ಪರಿಸರವನ್ನು ಶುದ್ಧಿಯಾಗಿಟ್ಟುಕೊಳ್ಳುವ ವಿಧಾನಗಳು. ಹಾಗೆ ಮಾಡಿದಾಗ ನಾವು ಬದುಕಿನ ಸಿರಿವಂತಿಕೆಗೆ ಅರ್ಹ ಉತ್ತರಾಧಿಕಾರಿಗಳಾಗುತ್ತೇವೆ. ಅಲ್ಲವೇ?

ಮೇಲಿನ ಕತೆಯಲ್ಲಿ ಉತ್ಪ್ರೇಕ್ಷೆ ಇರಬಹುದೇ? ಆದರೆ ಅದರ ತತ್ವದಲ್ಲಿ ಸತ್ವ

Tags

Related Articles

Leave a Reply

Your email address will not be published. Required fields are marked *

Language
Close