About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಕೇವಲ 500 ರೂಪಾಯಿ ಸಾಲ ವಾಪಾಸ್‌ ನೀಡದಿದ್ದಕ್ಕೆ ಸ್ನೇಹಿತನ ಪತ್ನಿಯನ್ನೇ ಮದುವೆಯಾದ ಭೂಪ…!

ಬೆಳಗಾವಿ: 500 ರೂಪಾಯಿ ಸಾಲ ವಾಪಾಸ್‌ ನೀಡಲಿಲ್ಲ ಎಂದು ಸ್ನೇಹಿತನ ಪತ್ನಿಯನ್ನೆ ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಗೋಕಾಕ ತಾಲೂಕಿನ ಮಿಡಕನಟ್ಟಿ ಗ್ರಾಮದ ರಮೇಶ ಹುಕ್ಕೇರಿ ಎಂಬಾತ ಈ ಕೃತ್ಯ ಎಸಗಿದ್ದು, ಈತ ಬೈಲಹೊಂಗಲ ತಾಲೂಕಿನ ಮುರುಕಿಬಾವಿ ಗ್ರಾಮದ ಬಸವರಾಜ ಕೋನನ್ನವರ ಎಂಬಾತನ ಪತ್ನಿ ಪಾರ್ವತಿಯನ್ನು ಬುಟ್ಟಿಗೆ ಹಾಕಿಕೊಂಡು ವಿವಾಹವಾಗಿದ್ದಾನೆ.

ರಮೇಶಗೆ ಈಗಾಗಲೇ ವಿವಾಹವಾಗಿದ್ದು, ಈತ ಪತ್ನಿಯನ್ನು ತವರು ಮನೆಗೆ ಕಳುಹಿಸಿ ಪಾರ್ವತಿ ಜತೆ ಸಂಸಾರ ಮಾಡುತ್ತಿದ್ದಾನೆ. ಪತ್ನಿ ಕಾಣೆಯಾಗಿರುವ ಬಗ್ಗೆ ದೂರು ಕೊಡಲು ಮುಂದಾದರೂ ಪೊಲೀಸರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಬಸವರಾಜ ಆರೋಪಿಸಿದ್ದಾರೆ. ರಮೇಶ ಮತ್ತು ಬಸವರಾಜ ಈ ಮೊದಲು ಬೆಳಗಾವಿಯಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ಪರಿಚಯವಾಗಿತ್ತು. ರಮೇಶನಿಗೆ ಬಸವರಾಜ ಪತ್ನಿಯ ಪರಿಚಯವೂ ಇದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಆಗಿತ್ತು.

ಹಣದ ಅವಶ್ಯಕತೆ ಎದುರಾದಾಗ ಬಸವರಾಜ ರಮೇಶನ ಬಳಿ 500 ರು. ಸಾಲ ಪಡೆದಿದ್ದನ್ನು ಕೊಡಲು ವಿಳಂಬವಾಗಿದೆ. ಇದೇ ಕಾರಣಕ್ಕೆ ರಮೇಶ ಪಾರ್ವತಿಯನ್ನು ಕರೆದೊಯ್ದಿದ್ದು, ಈ ಬಗ್ಗೆ ಪ್ರಶ್ನಿಸಿದರೆ ನನಗೂ ಬೆದರಿಕೆ ಹಾಕುತ್ತಿದ್ದಾನೆ ಎಂದು ಬಸವರಾಜ ಆರೋಪಿಸಿದ್ದಾರೆ.

ರಮೇಶನಿಗೂ ಈ ಮೊದಲು ವಿವಾಹವಾಗಿದ್ದು, ಪತ್ನಿ ಮೇಲೆ ದೈಹಿಕ ದೌರ್ಜನ್ಯ ನಡೆಸಿ ತವರು ಮನೆಗೆ ಕಳುಹಿಸಿದ್ದ. ಬಳಿಕ ಪಾರ್ವತಿಯೊಂದಿಗೆ ವಿವಾಹವಾಗಿದ್ದಾನೆ. ಬಸವರಾಜ, ಪಾರ್ವತಿ 2011ರಲ್ಲಿ ಮದುವೆಯಾಗಿದ್ದು, ಮೂರು ವರ್ಷದ ಹೆಣ್ಣು ಮಗುವಿದೆ. ಬಸವರಾಜ ಹಲವು ಸಲ ಫೋನ್ ಮಾಡಿ ಬರುವಂತೆ ಕೊರಿದರೂ ನಿರಾಕರಿಸುತ್ತಿದ್ದಾಳೆ. ಪಾರ್ವತಿ ಮತ್ತೊಮ್ಮೆ ಗಂರ್ಭಿಣಿಯಾಗಿದ್ದು, ಬಸವರಾಜನಿಗೆ ವಿಚ್ಛೇದನ ಕೊಡದೇ ರಮೇಶನೊಂದಿಗೆ ವಿವಾಹವಾಗಿ ಸಂಸಾರ ಮಾಡುತ್ತಿದ್ದಾಳೆ. ರಮೇಶ ನನ್ನ ಪತ್ನಿಯ ಮುಂದೆ ನನ್ನ ಬಗ್ಗೆ ಸುಳ್ಳು ಆರೋಪ ಮಾಡಿ ಕರೆದೊಯ್ದಿದ್ದಾನೆ ಎಂದು ಬಸವರಾಜ ಆರೋಪಿಸಿದ್ದಾನೆ.

Tags

Related Articles

Leave a Reply

Your email address will not be published. Required fields are marked *

Language
Close