About Us Advertise with us Be a Reporter E-Paper

ಗೆಜೆಟಿಯರ್

ಬರ್ತಾ ಇದೆ ಬರ್ಡೀ.. ಓಲಾ-ಊಬರ್‌ಗೆ ಹೊಸ ಸ್ಪರ್ಧಿ!

- ಪ್ರದೀಪ್ ಬಡೆಕ್ಕಿಲ

ದೇಶದಾದ್ಯಂತ ಓಲಾ-ಊಬರ್‌ನದೆ ಹವಾ. ಒಂದೆಡೆ ವಿಶ್ವದೆಲ್ಲೆಡೆ ಮಾನ್ಯತೆ ಪಡೆದು ಹಲವು ಶತಕೋಟಿ ವ್ಯವಹಾರ ಮಾಡುತ್ತಿರುವ ಊಬರ್, ಇನ್ನೊಂದೆಡೆ ಭಾರತದಲ್ಲೇ ಹುಟ್ಟಿ, ಇಲ್ಲೇ ಬೆಳೆದು ನಿಂತಿರುವ ನಮ್ಮದೇ ಅನಿಸಿಕೊಂಡಿರುವ ಓಲಾ. ಭಾರತದ ಮಂದಿ ಸ್ವಂತ ಇಲ್ಲದಿದ್ದರೂ ಎಲ್ಲಿಂದ ಎಲ್ಲಿಗೂ ಪ್ರಯಾಣ ಮಾಡುವುದಕ್ಕೇ ಥಟ್ಟಂತ ತಮ್ಮ ಫೋನಿಂದಾನೇ ಕಾರ್ ಬುಕ್ ಮಾಡುವುದಕ್ಕೆಂದೇ ಇರುವ ಈ ಎರಡು ಪ್ರಮುಖ ಕಂಪೆನಿಗಳ ಸೇವೆಗೆ ಒಗ್ಗಿ ಹೋಗಿದ್ದಾರೆ.
ಇವರಿಗೆ ಸೆಡ್ಡು ಹೊಡೆಯಲು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ಕಂಪೆನಿಗಳು ಅಲ್ಲಲ್ಲಿ ಆಗಾಗ ತಮ್ಮ ಕೈಲಾಗುವ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಒಂದೆಡೆ ಈ ಹಿಂದಿನಿಂದಲೇ ನಡೆಸುತ್ತಿದ್ದ ಮೇರು ಇದ್ದೂ ಇಲ್ಲದಂತಿದ್ದರೆ, ಏರ್‌ಪೋರ್ಟ್‌ಗಳಿಗೇ ಟ್ಯಾಕ್ಸಿ ಸೇವೆ ಕೊಡುತ್ತಿರುವ ಕೆಲ ಕಂಪೆನಿಗಳು ದೇಶಾದ್ಯಂತ ಆದರೆ ಸಾಫ್‌ಟ್ಬ್ಯಾಂಕ್ ಅನ್ನುವ ವಿದೇಶಿ ಸಂಸ್ಥೆಯಿಂದ ಫಂಡಿಂಗ್ ಪಡೆದಿರುವ ಓಲಾ ಹಾಗೂ ಊಬರ್ ಇವರೆಲ್ಲರನ್ನೂ ಮಣ್ಣುಮುಕ್ಕಿಸುವ ಮಟ್ಟಿಗೆ ಬೆಳೆದುನಿಂತಿದೆ.

ಆದರೂ ಇಲ್ಲೊಂದು ಕಂಪೆನಿ ತಾನು ಈ ಎರಡು ಕಂಪೆನಿಗಳಿಗೆ ಟಫ್ ಫೈಟ್ ನೀಡುತ್ತೇನೆ ಅಂದಿದೆ. ಇದರ ಹೆಸರು ಬರ್ಡೀ. ಹಾಗೂ ಇದು ದೆಹಲಿಯಲ್ಲಿ ತನ್ನ ಸೇವೆಯನ್ನು ಇನ್ನೇನು ಆರಂಭ ಮಾಡಲಿದೆ ಹಾಗೂ ಆರಂಭದಲ್ಲೇ 12 ಸಾವಿರ ಕ್ಯಾಬ್ ಡ್ರೆವರ್‌ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡೇ ತಾನು ರೋಡಿಗಿಳಿಯುತ್ತಿದ್ದೇನೆ ಎಂದಿದೆ. ಒಂದೆಡೆಯಲ್ಲಿ ಕಮಿಶನ್ ನೀಡುವ ಮೂಲಕ ಈ ಕ್ಯಾಬ್‌ಗಳನ್ನು ತಮ್ಮ ಹೆಸರಿನಲ್ಲಿ ಓಡಿಸುತ್ತಿವೆ ಹಾಗೂ ಅದು ತುಂಬಾ ಸಂಕೀರ್ಣ ವ್ಯವಸ್ಥೆಯಾಗಿದ್ದು ನಾವೂ ಆಗಾಗ ಬೇರೆ ಬೇರೆಡೆಗಳಲ್ಲಿ ಇದರ ವಿರುದ್ಧ ಹೋರಾಟಗಳು ನಡೆದಿದ್ದನ್ನೂ ನೋಡಿದ್ದೇವೆ. ಆದರೆ ಬರ್ಡೀ ಕ್ಯಾಬ್ ಡ್ರೆûವರ್‌ಗಳಿಗೆ ಸೇವೆ ನೀಡುವುದು ಮಾತ್ರ ಹಾಗೂ ಅದಕ್ಕೆ ತಿಂಗಳಿಗೆ ತಲಾ 2 ಸಾವಿರ ರೂಪಾಯಿ ಚಾರ್ಜ್ ಮಾಡುವುದು ಬಿಟ್ಟರೆ ಬೇರೆ ರೀತಿಯ ತಲೆ ತಿನ್ನುವ ಲೆಕ್ಕಾಚಾರಗಳಿರುವುದಿಲ್ಲವಂತೆ. ಓಲಾ-ಊಬರ್ ನೀಡದ ಪಾರದರ್ಶಕತೆ ನಮ್ಮಲ್ಲಿದೆ ಎನ್ನುವ ತನಗೆ ಇನ್ನೇನು ಫಂಡಿಂಗ್ ಕೂಡ ಸಿಗಲಿದೆ ಎಂದಿದ್ದರೂ ಅದರ ವಿವರ ನೀಡಿಲ್ಲ.

ಇದರೊಂದಿಗೆ ಶೀಘ್ರದಲ್ಲೇ ಬರ್ಡೀ ಕಾರ್ ರಿಪೇರಿ ಸೇವೆಯನ್ನೂ ನೀಡಲಿದೆಯಂತೆ. ಆದರೆ ಸಧ್ಯಕ್ಕೆ ಈ ಟ್ಯಾಕ್ಸಿ ಬುಕಿಂಗ್ ಸೇವೆಯಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆಯಂತೆ. ಎಮರ್ಜೆನ್ಸಿ ಬಟನ್ ಒಂದನ್ನು ಒತ್ತಿದ ತಕ್ಷಣ ಗ್ರಾಹಕರಿಗೆ ಕರೆ ಬರುತ್ತದೆ, ಅದನ್ನು ಅವರು ಸ್ವೀಕರಿಸದಿದ್ದರೆ ಅವರ ಜಿಪಿಎಸ್ ಲೊಕೇಶನ್‌ಗೆ ಸಹಾಯವನ್ನು ತಲುಪಿಸುತ್ತಾರಂತೆ.
ಸರ್ಜ್ ಪ್ರೆûಸಿಂಗ್ ಇಲ್ಲದೇ ಕಿಲೋಮೀಟರ್‌ಗೆ 6 ರೂಪಾಯಿಯಿಂದ ಆರಂಭವಾಗುವ ಈ ಸರ್ವಿಸ್ ಓಲಾ-ಊಬರ್‌ಗೆ ಸಮಾನಾಗಿ ಬೆಳೆದರೆ ಗ್ರಾಹಕರಿಗೆ ಉತ್ತಮ ಸೇವೆ ಸಿಗುವ ಸಾಧ್ಯತೆ ತೋರುತ್ತಿದೆ.

ಸೆಲೆರಿಯೋಗೆ ಛಳಿ ಹಿಡಿಸಿದೆ ಸ್ಯಾಂಟ್ರೋ!
ಮಾರುತಿ, ಭಾರತದಲ್ಲಿ ಅತಿ ಹೆಚ್ಚು ಕಾರ್ ಮಾರಾಟ ಮಾಡುವ ಕಂಪೆನಿ. ಹಾಗೂ ಮಾರುತಿಯ ಸೆಲೆರಿಯೋ ಮತ್ತು ವ್ಯಾಗನ್ ಆರ್‌ಗೆ ಸೆಡ್ಡು ಹೊಡೆಯುವುದಕ್ಕೆಂದೇ ಒಂದೆಡೆ ರೆನೋ ಕ್ವಿಡ್ ಹೊಸ ರೂಪದಲ್ಲಿ ಲಾಂಚ್ ಆಯಿತು, ಇನ್ನೊಂದೆಡೆ ಹೊಸ ರೂಪದ ಟಾಟಾ ಟಿಯಾಗೋ ಕೂಡ ಇತ್ತೀಚೆಗೆ ಮಾರುಕಟ್ಟೆಗೆ ದಾಳಿಯಿಟ್ಟಿತು.
ಆದರೆ ಈಗ ನಿಜವಾಗಿಯೂ ನಿದ್ದೆಗೆಡಿಸಿರುವುದು ಹೊಸ ಸ್ಯಾಂಟ್ರೋ. ಸೆಪ್ಟೆಂಬರ್ ತಿಂಗಳಲ್ಲಿ ಈ ಸೆಗ್‌ಮೆಂಟ್‌ನ ರಾಜನಾಗಿ ಮತ್ತೆ ಸೆಲೆರಿಯೋ ಮೆರೆದು 9000ದ ಆಸುಪಾಸು ಸಂಖ್ಯೆಯಲ್ಲಿ ಮಾರಾಟಗೊಂಡಿದ್ದರೂ ಕಳೆದ ತಿಂಗಳು ಬಿಡುಗಡೆಯಾದ ಸ್ಯಾಂಟ್ರೋ ಬಿಡುಗಡೆಗೂ ಮುನ್ನ ಒಳ್ಳೆ ಸುದ್ದಿ ಹಾಗೂ ಸದ್ದು ಮಾಡಿದೆ. ಬುಕಿಂಗ್ ಓಪನ್ ಆದ 22 ದಿನಗಳಲ್ಲಿ 28000 ಬುಕಿಂಗ್ ಕಂಡಿರುವ ಸ್ಯಾಂಟ್ರೋ ಸೆಲೆರಿಯೋದ ಚಕ್ರಾಧಿಪತ್ಯವನ್ನು ತಾನು ಕಸಿದುಕೊಳ್ಳುವ ಸಾಧ್ಯತೆ ದಟ್ಟವಾಗಿ ಕಾಣ್ತಾ ಇದೆ.

ಒಂದೆಡೆಯಲ್ಲಿ ಸೆಲೆರಿಯೋ ತುಂಬಾ ಹಳೆಯ ಮಾಡೆಲ್ ವ್ಯಾಗನ್ ಆರ್ ಕೂಡ ಅದೇ ಸಾಲಿನಲ್ಲಿದೆ. ಎರಡೂ ಕಾರ್‌ಗಳ ಹೊಸ ವರ್ಶನ್, ಹೊಸ ಫೀಚರ್‌ಗಳ ಜೊತೆ ಬರದಿದ್ರೆ ಮಾರುತಿಗೆ ಕಷ್ಟವೆನಿಸಲಿದೆ. ಇದಕ್ಕೆ ಮುಖ್ಯ ಕಾರಣ ಸ್ಯಾಂಟ್ರೋ ನೀಡುತ್ತಿರುವ ಫೀಚರ್‌ಸ್. ಟಿಯಾಗೋ ಕೂಡ ಅದೇ ರೀತಿಯಲ್ಲಿ ಫೀಚರ್‌ಗಳನ್ನು ನೀಡುತ್ತಿದೆ. ಹಾಗೂ ಸೆಲೆರಿಯೋ 4.21 ಲಕ್ಷ ಆರಂಭಿಕ ಬೆಲೆಯಿಂದ 5.40 ಲಕ್ಷದವರೆಗಿದ್ದರೆ ಸ್ಯಾಂಟ್ರೋ ಮೊದಲ 50 ಸಾವಿರ ಕಾರ್‌ಗಳನ್ನು ಕೇವಲ 3.89 ಲಕ್ಷದ ಆರಂಭಿಕ ಬೆಲೆಯಿಂದ ಮಾರಾಟಕ್ಕೆ ತಂದಿದೆ.

ಹೀಗಾಗಿ ಒಂದೆಡೆ ದೃಷ್ಟಿ, ಇನ್ನೊಂದೆಡೆ ಬೆಲೆ, ಎರಡರಲ್ಲೂ ಹಿಂದಿದ್ದು ಸೆಲೆರಿಯೋ ಹೊಸ ವರ್ಶನ್ ಬರದೇ ಮಾರುತಿಗೆ ಬೇರೆ ದಾರಿ ಇಲ್ಲ. ಈಗ ಬರುತ್ತಿರುವ ಮಾಹಿತಿ ಪ್ರಕಾರ ಮಾರುತಿ ಹೊಸ ವರ್ಶನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.
ಹೊಸ ಸ್ಪೋರ್ಟೀ ಹೊರಮೈ ಹಾಗೂ ಒಳಮೈ ಹೊಂದಲಿರುವ ಸೆಲೆರಿಯೋ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಅನ್ನು ಕೂಡ ನೀಡಲಿದೆ. ಇಂಜಿನ್‌ನಲ್ಲಿ ಬದಲಾವಣೆಯಾಗದಿದ್ದರೂ ಇಲೆಕ್ಟ್ರಿಕ್ ವರ್ಶನ್‌ನ ಬಗ್ಗೆ ಮಾರುತಿ ಚಿಂತನೆ ನಡೆಸುತ್ತಿದೆಯಂತೆ.

ಡ್ರೆವರ್ ಇಲ್ಲದೆ ಓಡಲಿದೆ ಗೂಗಲ್‌ನ
ಮೊನ್ನೆ ಮೊನ್ನೆಯಷ್ಟೇ ಹೊರ ಬಿದ್ದ ಸುದ್ದಿ ಇದು. ಇನ್ನೇನು ಕೆಲವೇ ವರ್ಷಗಳಲ್ಲಿ ಡ್ರೆûವರ್ ಇಲ್ಲದ ಕಾರ್‌ಗಳು ವಿಶ್ವದೆಲ್ಲೆಡೆ ಓಡಾಡಲಿರೋದು ಗೊತ್ತಿರೋ ವಿಷಯಾನೇ. ಅದಕ್ಕೆ ಸರಿಯಾಗಿ ಬೇರೆ ಬೇರೆ ಕಂಪೆನಿಗಳು ಬೇರೆ ಬೇರೆ ಮಾಡೆಲ್‌ಗಳನ್ನು ತಯಾರು ಮಾಡ್ತಾ ಇದ್ದಾರೆ ಹಾಗೂ ಅದರ ಟೆಸ್ಟಿಂಗ್ ಕೂಡ ನಡೆದೇ ಇದೆ.ಆದರೆ ಈಗ ಮೊಟ್ಟಮೊದಲ ಬಾರಿಗೆ ಗೂಗಲ್ ಕಂಪೆನಿಯಡಿಯಲ್ಲಿರುವ ಡ್ರೆûವರ್‌ಲೆಸ್ ಕಾರ್ ವೇಮೋಗೆ ಸಿಕ್ಕಿರೋ ಲೈಸೆನ್‌ಸ್ ಬೇರೇ ರೀತಿಯದು. ಈ ಹಿಂದೆ ಡ್ರೆವರ್ ಕಾರ್‌ಗಳು ಓಡಾಡೋದಕ್ಕೆ ಸ್ಟೀರಿಂಗ್ ಹಿಂದೆ ಬ್ಯಾಕಪ್ ಡ್ರೆûವರ್ ಆಗಿ ಮನುಷ್ಯರೊಬ್ಬರು ಕುಳಿತುಕೊಳ್ಳಬೇಕಾಗಿತ್ತು.

ಈಗ ವೇಮೋಗೆ ಸಿಕ್ಕಿರುವ ಅನುಮತಿ ಪ್ರಕಾರ ಕ್ಯಾಲಿಫೋರ್ನಿಯಾದಲ್ಲಿ ವೇಮೋ ಆ ಬ್ಯಾಕಪ್ ಡ್ರೆûವರ್ ಕೂಡ ಇಲ್ಲದೇ ತನ್ನ ಟೆಸ್ಟಿಂಗ್ ನಡೆಸಬಹುದಾಗಿದೆಯಂತೆ. ಈ ಫೆಬ್ರವರಿಯಲ್ಲಿ ಕ್ಯಾಲಿಫೋರ್ನಿಯಾದ ಡಿಎಂವಿ (ಡಿಪಾರ್ಟ್‌ಮೆಂಟ್ ಆಫ್ ಮೋಟರ್ ವೆಹಿಕಲ್‌ಸ್) ಡ್ರೆûವರ್‌ಲೆಸ್ ಕಾರ್‌ಗಳಿಗೆ ಅನುಮತಿ ನೀಡುವ ಕುರಿತಾದ ಗೈಡ್‌ಲೈನ್‌ಗಳನ್ನು ಅಂತಿಮಗೊಳಿಸಿತ್ತು. ನಂತರ ಏಪ್ರಿಲ್‌ನಲ್ಲಿ ಅರ್ಜಿ ಹಾಕಿದ್ದ ವೇಮೋ-ಗೆ ಮೊನ್ನೆ ಮೊನ್ನೆಯಷ್ಟೇ ಈ ಅನುಮತಿ ಸಿಕ್ಕಿದೆ.

ತಾನು ಮೊದಲು ನಿಯಮಿತ ಪ್ರದೇಶಗಳಲ್ಲಿ ಮಾತ್ರ ಟೆಸ್ಟಿಂಗ್ ನಡೆಸಿ ನಂತರ ನಿಧಾನವಾಗಿ ಸಿಟಿ ಲಿಮಿಟ್‌ನಲ್ಲಿ ಸ್ವಲ್ಪ ಸ್ವಲ್ಪವೇ ಟೆಸ್‌ಟ್ ಮಾಡಿದ ಮೇಲೆ ಕ್ಯಾಲಿಫೋರ್ನಿಯಾ ರಾಜ್ಯಾದ್ಯಂತ ಟೆಸ್ಟಿಂಗ್ ನಡೆಸಲಿದ್ದೇನೆ ಎಂದಿದೆ ವೇಮೋ.
ವೇಮೋ ಅಲ್ಲದೇ ಇನ್ನೂ ಒಂದು ಕಂಪೆನಿ ಕ್ಯಾಲಿಫೋರ್ನಿಯಾದಲ್ಲಿ ಅರ್ಜಿ ಹಾಕಿದ್ದು ಅದು ಇನ್ನೂ ಅನುಮತಿಗಾಗಿ ಕಾಯುತ್ತಿದೆ ಎಂದು ತಿಳಿದು ಬಂದಿದೆ. ಅದೇನೇ ಇದ್ದರೂ ಡ್ರೆûವರ್‌ಲೆಸ್ ಕಾರ್‌ಗಳ ಭವಿಷ್ಯಕ್ಕೆ ಇದೊಂದು ಉತ್ತಮ ಆರಂಭ.

Tags

Related Articles

Leave a Reply

Your email address will not be published. Required fields are marked *

Language
Close