About Us Advertise with us Be a Reporter E-Paper

Breaking Newsದೇಶಪ್ರಚಲಿತಸಿನಿಮಾಸ್

ತಮಿಳು ನಟ ವಿಕ್ರಮ್ ಪುತ್ರನಿಂದ ಭೀಕರ ಅಪಘಾತ..!

ಮೂರು ಆಟೋ ಜಖಂ, ಓರ್ವ ಗಂಭೀರ...

ಚೈನ್ನೈ: ತಮಿಳಿನ ಖ್ಯಾತ ನಟ ವಿಕ್ರಮ್ ಅವರ ಪುತ್ರ ಐಷಾರಾಮಿ ಕಾರಿನಲ್ಲಿ ತನ್ನ ಸ್ನೇಹಿರೊಡನೆ ಚಲಿಸುತ್ತಿರುವಾಗ ನಿಂತಿದ್ದ  ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವನ ಸ್ಥಿತಿ ಗಂಭೀರವಾದ ಘಟನೆಯು ಭಾನುವಾರ ತೇನಂಪೇಟೆಯಲ್ಲಿ ನಡೆದಿದೆ.

ವಿಕ್ರಮ್ ಪುತ್ರ ಧ್ರುವ ನಿಂತಿದ್ದ ಮೂರು ಆಟೋಗಳಿಗೆ ಡಿಕ್ಕಿ ಹೋಡೆದಿದ್ದು, ಆಟೋ ಒಳಗೆ ಮಲಗಿದ್ದ ಓರ್ವನ ಸ್ಥಿತಿ ಗಂಭೀರವಾಗಿದೆ. ಕಾರನ್ನು ರ‍್ಯಾಶ್‌ ಡ್ರೈವ್ ಮಾಡಿದ್ದರಿಂದಲೇ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ತೆಲುಗಿನ ಹಿಟ್ ಚಿತ್ರ ’ಅರ್ಜುನ್ ರೆಡ್ಡಿ’ಯನ್ನು ತಮಿಳಿಗೆ ರಿಮೇಕ್‌ ಮಾಡಿತ್ತಿರುವ  ‘ವರ್ಮಾ’ ಚಿತ್ರದಲ್ಲಿ ನಟಿಸುತ್ತಿರುವ ಧ್ರುವ ಮೇಲೆ ಸದ್ಯ ಪೊಲೀಸರು ಸೆಕ್ಷನ್ 279 ಮತ್ತು 337 ರ ಅಡಿಯಲ್ಲಿ ರ್ಯಾಶ್ ಡ್ರೈವಿಂಗ್ ಕೇಸ್ ದಾಖಲಿಸಿದ್ದಾರೆ. ಇದು ಡ್ರಿಂಕ್ ಅಂಡ್ ಡ್ರೈವ್ ಅಲ್ಲ ಎಂದು ಪೊಲೀಸರು ಖಚಿತ ಪಡಿಸಿದ್ದಾರೆ.

ಗಾಯಗೊಂಡಿರುವ ವ್ಯಕ್ತಿ ಕಾಮೇಶ್ ಎಂದು ತಿಳಿದು ಬಂದಿದ್ದು , ಕಾಮೇಶ್‌ಗೆ ಸರಕಾರಿ ಆಸ್ಪತ್ರೆತಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು ಸದ್ಯ ಧ್ರುವನನ್ನು ಜಾಮೀನಿನ ಮೇಲೆ ಬಿಡಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close