ಸೆಲ್ಪಿ ತೆಗೆಯಲು ಹೋಗಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ

Posted In : ತುಮಕೂರು, ರಾಜ್ಯ

ಶಿರಾ: ಕಾಡಾನೆಗಳ ಮುಂದೆ ಸೆಲ್ಪಿ ತೆಗೆಯಲು ಹೋಗಿದ್ದ ವ್ಯಕ್ತಿಯೊಬ್ಬನ ಮೇಲೆ ಆನೆಯೊಂದು ದಾಳಿಮಾಡಿದ ಪರಿಣಾಮ ಆತನ ಬಲ ಬುಜದ ಮೂಳೆ ಮುರಿದಿಕೊಂಡಿರುವ ಘಟನೆ ಶಿರಾ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.

ಗಾಯಗೊಂಡ ವ್ಯಕ್ತಿ ಭೀಮಣ್ಣ(೪೦) ಅಗ್ರಹಾರ ಗ್ರಾಮದವನು ಎನ್ನಲಾಗಿದೆ. ಗುರುವಾರ ಬೆಳಗಿನ ಜಾವ ಪೂಜಾರ ಮುದ್ದನಹಳ್ಳಿ ಹತ್ತಿರ ಪ್ರತ್ಯಕ್ಷವಾಗಿವೆ. ಮತ್ತೆ ಅರಣ್ಯಧಿಕಾರಿಗಳು ಪಟಾಕಿ ಸಿಡಿಸಿದ ಕಾರಣ ಆನೆಗಳು ಅಗ್ರಹಾರ ಕೆರೆಯ ಮೂಲಕ ಹೋಗುತ್ತಿರುವಾಗ ಭೀಮಣ್ಣ ತನ್ನ ಮೊಬೈಲ್‌ನಲ್ಲಿ ಸೆಲ್ಪಿ ತೆಗೆಯಲು ಯತ್ನಿಸಿದ್ದಾನೆ ಮೊದಲೆ ಗಾಸಿ ಗೊಂಡಿದ್ದ ಕಾಡನೆ ರೊಚ್ಚಿಗೆದ್ದು ದಾಳಿ ಮಾಡಿದ ಪರಿಣಾಮ ಆತನ ಬಲ ಭುಜ, ಕೈಮೂಳೆ ಮುರಿದು ತೀವ್ರತರ ಪೆಟ್ಟಾದ ಕಾರಣ ಭೀಮಣ್ಣ ನನ್ನು ಚಿಕಿತ್ಸೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಸಾರ್ವಜನಿಕರು ಕಾಡಾನೆಗಳ ದಾಳಿಗೆ ತುತ್ತಾದಾರೂ ಎಂಬ ಬಗ್ಗೆ ಜನರನ್ನು ಎಷ್ಟೇ ಚದುರಿಸಿದರು ಸಹ ಜನರ ಸೆಲ್ಪಿ ಹುಚ್ಚಿನಿಂದಾಗಿ ಆನೆಗಳು ಕೆರಳುವ ಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹ್ನದ ಸಮಯಕ್ಕೆ ರಾಜ್ಯದ ಹಾರೋಗೆರೆ ಕಡೆಯಿಂದ ಆಂಧ್ರ ಪ್ರದೇಶದ ಇಟ್ಟಗೆಹಳ್ಳಿ ಗುಟ್ಟೆಯ ಮೂಲಕ ಆನೆಗಳು ಅನ್ಯರಾಜ್ಯ ಸೇರಿದನ್ನು ನೋಡಿ ಜನ ನಿಟ್ಟುಸಿರು ಬಿಟ್ಟರು.

Leave a Reply

Your email address will not be published. Required fields are marked *

sixteen − 14 =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top