About Us Advertise with us Be a Reporter E-Paper

ವಿ +

ಮಳೆ ಸಂಗ್ರಹಕ್ಕೆ ಮುಂದಾದ ಎಳೆಯ ಬಾಲೆ

ಸ್ನೇಹಿತರೊಂದಿಗೆ ಆಟೋಟ, ಶಾಪಿಂಗ್, ಕಾಡು ಹರಟೆ ಅಂತ ಕಾಲಕಳೆಯುವ ವಯಸ್ಸು. ಯಾವುದೇ ಜವಾಬ್ಧಾರಿಗೆ ತಲೆಭಾಗದ ಮನಸ್ಸು. ಇನ್ನೂ ಹೊರಪ್ರಪಂಚದ ಆಗುಹೋಗುಗಳಿಗೆ ಸ್ಪಂದಿ ಸಲು ಆರಂಭಿಸುವ ಎಳೆಯ ವಯಸ್ಸಿನಲ್ಲಿಯೇ ಸಮಾಜದ ಒಳಿತಿಗಾಗಿ ತನ್ನ ಬದುಕನ್ನೇ ಮೀಸಲಿಡಲು ಮುಂದೆ ಬಂದಿ ದ್ದಾಳೆ ಡೆಲ್ಲಿಯ ತಾವಿಷಿ ಸಿಂಗ್. ಹನಿ ನೀರಿಗೋಸ್ಕರ ಒದ್ದಾ ಡುತ್ತಿರುವ 500 ಅಸಹಾಯಕರಿಗೋಸ್ಕರ ಮಳೆನೀರನ್ನು ಇಂಗಿ ಸುವ ಕಾರ್ಯಕ್ಕೆ ಕೈ ಹಾಕಿದ್ದಾಳೆ. ಈ  ಪ್ರತಿನಿತ್ಯ ವಸತಿ ರಹಿತರು ಹಾಗೂ ಬುದ್ದಿಮಾಂದ್ಯರಿಗೆ 10,000 ಲೀ.ನಷ್ಟು  ನೀರನ್ನು ಒದಗಿಸುವ ಇಂಗಿಸುವ ಯೋಜನೆ ಈಕೆಯದ್ದು.

ಡೆಲ್ಲಿಯ ಗುರ್‌ಗಾಂವ್‌ನ ಪಾಥ್‌ವೇ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ  ತಾವಿಷಿ ಸಿಂಗ್ ಸ್ಥಳೀಯ ‘ಅರ್ಥ್ ಸೇವರ್’ ಅನ್ನುವ ಸಂಸ್ಥೆಯ ಸಹಭಾಗಿತ್ವ ದಲ್ಲಿ ಮಹತ್‌ಕಾರ್ಯವನ್ನು ಕೈಗೆತ್ತಿಕೊಂಡಿದ್ದಾಳೆ. ಅರ್ಥ್ ಸೇವರ್ ಪರಿಸರದ ರಕ್ಷಣೆಗೋಸ್ಕರ ಹೋರಾಟವನ್ನೂ ನಡೆಸು ತ್ತಿದೆ. ಈ ಸಂಸ್ಥೆಯ ಸಹಕಾರದೊಂದಿಗೆ ಮಳೆ ನೀರನ್ನು ಉಳಿ ಸುವ ಗುರಿಯನ್ನು ತಾವಷಿ ಹೊಂದಿದ್ದಾಳೆ. ತನ್ನ ಯೋಜನೆ   ‘ಕೆಟ್ಟೋ’ ಎನ್ನುವ ಆನ್‌ಲೈನ್ ವೇದಿಕೆಯ ಮೂಲಕ ದೇಣಿಗೆಯನ್ನೂ ಸಂಗ್ರಹಿಸುತ್ತಿದ್ದಾಳೆ.

ಡೆಲ್ಲಿಯ ವಾತಾವರಣ ತೀರಾ ಹದೆಗೆಡುತ್ತಿದೆ. ಉಷ್ಣಾಂಶ ಮಿತಿಮೀರುತ್ತಿದೆ. ಕೆಲವೊಂದು ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರವೆದ್ದಿದೆ. ಹೀಗಾಗಿ ತನ್ನಿಂದಾದ ಮಟ್ಟಿಗೆ ಜನರ ಸಮಸ್ಯೆಯನ್ನು ನಿವಾರಣೆ ಮಾಡಬೇಕೆಂಬ ಉದ್ದೇಶವನ್ನು ತಾವಿಷಿ ಹೊಂದಿದ್ದಾಳೆ. ಹಾಗಂತ ಪ್ರತಿನಿತ್ಯ 10,000 ಲೀ. ನಷ್ಟು ನೀರನ್ನು ಒದಗಿಸುವುದು ಸುಲಭದ ಮಾತಲ್ಲ. ನೀರನ್ನು ಸಂಗ್ರಹಿಸುವ ಸಂದರ್ಭದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಸಂಭವವೂ ಇದೆ. ಈ ವರ್ಷ ಉದ್ಭಾಟನೆಗೊಂಡ ಮಳೆ

ನೀರು ಸಂಗ್ರಹ  ಇದೀಗ ಕಾರ್ಯಪ್ರವೃತ್ತವಾಗಿದೆ. ಶಾಲಾ ಶಿಕ್ಷಣ ಪೂರ್ಣಗೊಂಡ ನಂತರ ಹೆಚ್ಚಿನ ಸಮಯವನ್ನು ತನ್ನ ಯೋಜನೆಗೋಸ್ಕರ ಮೀಸಲಿಡುವ ನಿರ್ಧಾರ ತಾವಿಷಿ ಯದ್ದಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close