ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MarilingaGowda MaliPatil Column: ನೊಣವಿನಕೆರೆ ಅಜ್ಜಯ್ಯನ ಕೃಪೆ, ಡಿಕೆಶಿ ಶಕ್ತಿ

ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ ಆಗಿರುವ ಡಿಕೆ ಶಿವಕುಮಾರ್ ಗುರು ಹಿರಿಯರೆಡೆಗಿನ ತಮ್ಮ ಭಕ್ತಿ ಭಾವ ಏನು ನಾಲಿಗೆಯಲ್ಲಿ ಕರಗುವ ಚಾಕೊಲೇಟ್ ಅರಳುವ ಬಗೆ ಎನ್ನುವುದನ್ನು ಸಾರ್ವಜನಿಕವಾಗಿ ನಿರೂಪಿಸಿದ್ದಾರೆ. ಅವರ ಬದುಕಿನ ನಿರ್ಣಾಯಕ ಸಂದರ್ಭಗಳಲ್ಲಿ ಅಜ್ಜಯ್ಯನ ಮಾರ್ಗದರ್ಶನ ಪಡೆದೇ ಮುಂದೆ ಹೆಜ್ಜೆ ಇಡುವುದಾಗಿ ಅವರ ನಡೆಗಳ ಮೂಲಕ ನಿರೂಪಿಸಿದ್ದಾರೆ.

ನೊಣವಿನಕೆರೆ ಅಜ್ಜಯ್ಯನ ಕೃಪೆ, ಡಿಕೆಶಿ ಶಕ್ತಿ

-

Profile
Ashok Nayak Jun 9, 2026 1:56 PM

ಮರಿಲಿಂಗಗೌಡ ಮಾಲಿಪಾಟೀಲ್

ಭಾರತೀಯ ಪರಂಪರೆಯಲ್ಲಿ ಭಕ್ತಿಗಿರುವ ಮಹತ್ವ ಅತಿ ದೊಡ್ಡದು. ಭಕ್ತಿ ಕೇವಲ ಆಚರಣೆ ಮಾತ್ರ ಆಗಿರದೆ ಜೀವನದ ಮೌಲ್ಯಯುತ ಮಾರ್ಗವಾಗಿಯೂ ಪರಿಗಣಿಸಲ್ಪಟ್ಟಿದೆ. ಬದುಕಿನಲ್ಲಿ ವಿಶಿಷ್ಟ ಸಾಧನೆ ಮಾಡಿದ ವ್ಯಕ್ತಿಯ ಹಿಂದೆ ನಿಂತು ಆಶೀರ್ವದಿಸಿದ ಗುರು ಪರಂಪರೆ ಮತ್ತು ಗುರುಗಳ ಮೇಲೆ ಸಾಧಕರ

ಭಕ್ತಿ ಇವೆರಡು ನಮ್ಮ ಪರಂಪರೆಯಲ್ಲಿ ಹಾಸು ಹೊಕ್ಕಾಗಿದೆ. ಚಂದ್ರಗುಪ್ತನ ಹಿಂದೆ ಒಬ್ಬ ಚಾಣಕ್ಯ, ಕೃಷ್ಣದೇವರಾಯನ ಹಿಂದೆ ಒಬ್ಬ ವ್ಯಾಸತೀರ್ಥರು, ಶಿವಾಜಿ ಮಹಾರಾಜರ ಹಿಂದೆ ಸಮರ್ಥ ರಾಮದಾಸರು ನಿಂತು ಹರಸಿದ್ದು ಮತ್ತು ಆ ಹಾರೈಕೆಗಳ ಫಲವಾಗಿ ಭಕ್ತನ ಜೀವಮಾನದಲ್ಲಿ ನಡೆಸಿದ ಮಹತ್ ಸಾಧನೆಗಳು ನಮ್ಮ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿವೆ.

ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ ಆಗಿರುವ ಡಿಕೆ ಶಿವಕುಮಾರ್ ಗುರು ಹಿರಿಯರೆಡೆಗಿನ ತಮ್ಮ ಭಕ್ತಿ ಭಾವ ಏನು ನಾಲಿಗೆಯಲ್ಲಿ ಕರಗುವ ಚಾಕೊಲೇಟ್ ಅರಳುವ ಬಗೆ ಎನ್ನುವುದನ್ನು ಸಾರ್ವ ಜನಿಕವಾಗಿ ನಿರೂಪಿಸಿದ್ದಾರೆ. ಅವರ ಬದುಕಿನ ನಿರ್ಣಾಯಕ ಸಂದರ್ಭಗಳಲ್ಲಿ ಅಜ್ಜಯ್ಯನ ಮಾರ್ಗದರ್ಶನ ಪಡೆದೇ ಮುಂದೆ ಹೆಜ್ಜೆ ಇಡುವುದಾಗಿ ಅವರ ನಡೆಗಳ ಮೂಲಕ ನಿರೂಪಿಸಿದ್ದಾರೆ. ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ, ಕಚೇರಿಗೆ ಪೂಜೆ, ಕುರ್ಚಿಗೆ ನಮಸ್ಕಾರ ಮಾಡಿ, ತಾಯಿಯ ಆಶೀರ್ವಾದ ಸ್ವೀಕರಿಸಿ, ತಮ್ಮ ಕರ್ತವ್ಯ ಆರಂಭಿಸುವ ಮೂಲಕ ತಾನು ಭಾರತೀಯ ಪರಂಪರೆಯನ್ನು ಗೌರವಿಸಿ. ಮುನ್ನಡೆಯುವುದಾಗಿ ಪ್ರಚುರಪಡಿಸಿದರು.

ಇದನ್ನೂ ಓದಿ: MarilingaGowda M Patil Column: ಹಿಂಬಾಲಕರ ಸಂಕಷ್ಟಗಳು: ಉಪ್ಪು ತಿಂದವನು ನೀರು ಕುಡಿಯಲೇಬೇಕು !

ಡಿಕೆಶಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದ್ದಾಗ ಎಲ್ಲಿಯೂ ತುಟಿಪಿಟಿಕ್ ಎಂದಿರಲಿಲ್ಲ. ‘ಮಾತು ಆಡಿದರೆ ಮುತ್ತು ಒಡೆದೀತು, ಆದ್ದರಿಂದ ಮೌನವಾಗಿರು’ ಎಂಬ ಅಜ್ಜಯ್ಯನ ಸಲಹೆಯನ್ನು ಕಟ್ಟುನಿಟ್ಟಾಗಿ ಅನುಸರಿಸಿದ್ದರಿಂದಲೇ ಶಿವಕುಮಾರ್ ಮೌನಧಾರಣೆ ಮಾಡಿದ್ದು ಎಂಬ ಮಾತುಗಳು ಕೇಳಿ ಬಂದವು. ಅಜ್ಜಯ್ಯರ ಪ್ರಭಾವ ಅವರ ಮೇಲೆ ಎಷ್ಟು ಎಂಬುದು ಆಗಲೇ ಮನವರಿಕೆಯಾಗಿತ್ತು.

ಮುಖ್ಯಮಂತ್ರಿಯಾಗಿ ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದಾಗ ರಾಜ್ಯದಾದ್ಯಂತ ಯಾರೀ ಅಜ್ಜಯ್ಯ ಎಂಬ ಕುತೂಹಲ ಮೂಡಿತು. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿ ನಲ್ಲಿರುವ ನೊಣವಿನಕೆರೆ ಮಠ ಅಜ್ಜಯ್ಯನವರ ಕಾರ್ಯಕ್ಷೇತ್ರ. ಪಂಚಪೀಠಗಳಲ್ಲಿ ಒಂದಾಗಿರುವ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಪೀಠದ 119 ಜಗದ್ಗುರುಗಳಾದ ಶ್ರೀ ಸಾವಿರದ ಎಂಟನೆ ಯ ರಂಭಾಪುರಿ ವೀರ ಸಿಂಹಾಸನಾಧೀಶ್ವರ ಲಿಂಗೈಕ್ಯ ಜಗದ್ಗುರು ವೀರಗಂಗಾಧರ ಶಿವಾಚಾರ್ಯ ಭಗವದ್ಪಾದರುಗಳು ಅವರೇ ಅಜ್ಜಯ್ಯರಾಗಿ ಡಿಕೆ ಶಿವಕುಮಾರ್ ಅವರಿಗೆ ಮಾರ್ಗದರ್ಶನ ಮಾಡುತ್ತಿರುವುದು.

11

ಈ ಹಿಂದೆ ಡಿಕೆ ಅವರ ತಂದೆಗೆ ಆರೋಗ್ಯದಲ್ಲಿ ಏರುಪೇರು ಆಗಿ ಆಸ್ಪತ್ರೆ ಸೇರಿದಾಗ, ಅಜ್ಜಯ್ಯನ ಮುಕ್ತಿಮಂದಿರ ಸನ್ನಿಧಾನಕ್ಕೆ ಹೋಗಿ ಬಿಲ್ವಪತ್ರೆ ಮತ್ತು ವಿಭೂತಿಯನ್ನು ತಂದೆಗೆ ನೀಡಿದ ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರಂತೆ. ಇದರಿಂದಾಗಿ ಡಿಕೆ ಅವರಿಗೆ ಅಜ್ಜಯ್ಯನ ಪ್ರಭಾವದ ಮೇಲೆ ನಂಬಿಕೆ ಬರುತ್ತದೆ.

ಮುಂದೊಮ್ಮೆ ಅಜ್ಜಯ್ಯರ ಮುಕ್ತಿಮಂದಿರಕ್ಕೆ ಡಿಕೆಶಿ ಭೇಟಿ ನೀಡಿದಾಗ ಅವರ ಶಾಲಿಗೆ ಬೆಂಕಿ ತಗುಲುತ್ತದೆ. ಈ ವಿಷಯ ತಿಳಿದಾಗ ಅಜ್ಜಯ್ಯನವರು ನಿನಗೆ ಅಪಾಯವಿದೆ ಎನ್ನುತ್ತಾರೆ. ಇದಾದ ಕೆಲವೇ ತಿಂಗಳಲ್ಲಿ ಡಿಕೆಶಿ ಇಡಿ ಚಕ್ರವ್ಯೂಹಕ್ಕೆ ಸಿಲುಕಿ ಜೈಲು ಸೇರಬೇಕಾಯಿತು.

2023ರ ವಿಧಾನಸಭಾ ಚುನಾವಣೆಗಳಲ್ಲಿ 224 ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಮಾಡ ಬೇಕಾದ ಸಂದರ್ಭದಲ್ಲಿ ಅಜ್ಜಯ್ಯ ನೀಡಿದ ಸಲಹೆಗಳನ್ನು ಪಾಲಿಸುವುದು ಡಿಕೆಶಿ ಅವರಿಗೆ ಅಸಾಧ್ಯ ವಾಯಿತು. ಚುನಾವಣೆ ಫಲಿತಾಂಶ ಬಂದಾಗ ಯಾರು ಸೋಲುತ್ತಾರೆ ಎಂದು ಅಜ್ಜಯ್ಯ ನುಡಿದಿದ್ದರೋ ಅವರು ಮೊಬೈಲ್ ಇಲ್ಲದೆ ಮೂರು ಗಂಟೆ ಸೋತರಂತೆ. ಕುರುಡುಮಲೆ ವಿನಾಯಕ ನಿಗೆ ಪೂಜೆ ಸಲ್ಲಿಸಿ ಚುನಾವಣಾ ಸಮರ ಆರಂಭಿಸು ಎಂಬ ಸೂಚನೆಯಂತೆ ನಡೆದು ಕೊಂಡು ಚುನಾವಣೆಯಲ್ಲಿ ಗೆದ್ದರಂತೆ. ರಾಜಕೀಯ ವಿಷಯಗಳಲ್ಲಿ ಮಾತ್ರವಲ್ಲದೆ, ಕೌಟುಂಬಿಕ ವಿಷಯ ಗಳಲ್ಲಿಯೂ ಅಜ್ಜಯ್ಯರ ಸೂಚನೆಯನ್ನು ಡಿಕೆ ಪಾಲಿಸುತ್ತಾರೆ. ಮುಖ್ಯಮಂತ್ರಿಯ ಕೊಠಡಿ ಯಲ್ಲಿಯೂ ಪ್ರತಿದಿನ ಅಜ್ಜಯ್ಯನ ದರ್ಶನ ಎಲ್ಲರಿಗೂ ಆಗುವಂತೆ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ, ಕೇಂದ್ರ ಸಚಿವ ವಿ ಸೋಮಣ್ಣ, ಮಾಜಿ ಪ್ರಧಾನಿ ದೇವೇಗೌಡ ಸಹ ಅಜ್ಜಯ್ಯನ ಭಕ್ತರೇ. ಈಗ ಡಿಕೆ ಅವರ ಮೂಲಕ ಅಜ್ಜಯ್ಯನ ಮಹಾತ್ಮೆ ಮನೆಮಾತಾಗಿದೆ. ರಾಜಕೀಯ ಜೀವನದಲ್ಲಿರುವ ಕೆಲವು ನಾಯಕರಿಗೆ ಆಧ್ಯಾತ್ಮಿಕತೆ ಹಾಗೂ ಭಕ್ತಿ ಮಾನಸಿಕ ಶಕ್ತಿ ಮತ್ತು ಧೈರ್ಯವನ್ನು ನೀಡುವ ಮೂಲ. ಡಿಕೆ ಅವರಿಗೆ ನೊಣವಿನಕರೆ ಅಜ್ಜಯ್ಯನವರ ಮೇಲೆ ಇರುವ ಭಕ್ತಿ ಅನೇಕ ಬಾರಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಭಕ್ತಿ ಅವರ ವೈಯಕ್ತಿಕ ನಂಬಿಕೆ ಮತ್ತು ಸಂಸ್ಕಾರಗಳ ಭಾಗವಾಗಿ ಕಾಣಿಸುತ್ತದೆ.

ನೊಣವಿನಕರೆ ಅಜ್ಜಯ್ಯರು ಕರ್ನಾಟಕದ ಜನಮನದಲ್ಲಿ ಅಪಾರ ಭಕ್ತಿಭಾವ ಪಡೆದಿರುವ ಸಂತ ವ್ಯಕ್ತಿತ್ವ. ಜನರು ಅವರನ್ನು ಶಾಂತಿ, ಧರ್ಮ, ಮಾನವೀಯತೆ ಮತ್ತು ದೈವೀ ಶಕ್ತಿಯ ಪ್ರತೀಕವಾಗಿ ಕಾಣುತ್ತಾರೆ. ಗ್ರಾಮೀಣ ಭಾಗಗಳಿಂದ ಹಿಡಿದು ನಗರ ಪ್ರದೇಶಗಳವರೆಗೆ ಅನೇಕ ಭಕ್ತರು ಅಜ್ಜಯ್ಯರ ದರ್ಶನ ಹಾಗೂ ಆಶೀರ್ವಾದಕ್ಕಾಗಿ ಭೇಟಿ ನೀಡುತ್ತಾರೆ.

ಡಿಕೆಶಿ ಹಲವು ಸಂದರ್ಭಗಳಲ್ಲಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುವುದನ್ನು ಕಾಣಬಹುದು. ನೊಣವಿನಕರೆ ಅಜ್ಜಯ್ಯರ ಮೇಲಿನ ಅವರ ಭಕ್ತಿ ಕೇವಲ ಆಚರಣೆಯ ಮಟ್ಟದ ಉಳಿಯದೇ, ಅವರಿಗೆ ಆತ್ಮವಿಶ್ವಾಸ ಮತ್ತು ಮನೋಬಲ ನೀಡುವ ಅಂಶವೆಂದು ಅನೇಕರು ಅಭಿಪ್ರಾಯಪಡುತ್ತಾರೆ. ಡಿಕೆಶಿ ಅವರಿಗೆ ನೊಣವಿನಕರೆ ಅಜ್ಜಯ್ಯರ ಮೇಲಿರುವ ಭಕ್ತಿ ಅವರ ವೈಯಕ್ತಿಕ ನಂಬಿಕೆ, ಸಂಸ್ಕಾರ ಮತ್ತು ಆತ್ಮವಿಶ್ವಾಸದ ಪ್ರತೀಕ.

ರಾಜಕೀಯದ ಒತ್ತಡದ ನಡುವೆ ದೈವಭಕ್ತಿ ಮಾನಸಿಕ ಬಲ ಮತ್ತು ಧೈರ್ಯ ನೀಡುವ ಶಕ್ತಿ. ಈ ಭಕ್ತಿ ಅವರ ಸಾರ್ವಜನಿಕ ಬದುಕಿನಲ್ಲಿ ಸಹ ಒಂದು ವಿಶಿಷ್ಟ ಗುರುತಿನ ಅಂಶವಾಗಿ ಕಾಣಿಸಿಕೊಂಡಿದೆ.