About Us Advertise with us Be a Reporter E-Paper

Breaking NewsUncategorizedದೇಶಪ್ರಚಲಿತ

ಆರುಷಿ ಕೊಲೆ ಪ್ರಕರಣ: ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿದ ಸಿಬಿಐ

ದೆಹಲಿ: ಆರುಷಿ  ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರಾಜೇಶ್‌ ಮತ್ತು ನುಪುರ್‌ ತಲ್ವಾರ್‌ ಅವರನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌‌ನಲ್ಲಿ ಮೆಲ್ಮನವಿ ಸಲ್ಲಿಸಿದೆ.

ಕಳೆದ ವರ್ಷ ಅಲಹಬಾದ್ ಹೈಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರುಷಿ ಪೋಷಕರು, ರಾಜೇಶ್‌ ಮತ್ತು ನುಪುರ್‌ ತಲ್ವಾರ್‌ ಅವರನ್ನು ಖುಲಾಸೆಗೊಳಿಸಿತ್ತು. ಅಲಹಬಾದ್‌ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಸಿಬಿಐ ಮಾರ್ಚ್ 8 ರಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಆರುಷಿ ಮತ್ತು ಹೇಮ್‌ರಾಜ್ ಕೊಲೆ  ಪ್ರಕರಣದಲ್ಲಿ ತಲ್ವಾರ್‌  ಆರೋಪಿಯಾಗಿದ್ದು, ರಾಜೇಶ್‌ ಹೆಸರೂ ಕೇಳಿ ಬಂದಿತ್ತು. ಸಿಬಿಐ ವಿಶೇಷ ನ್ಯಾಯಾಧೀಶ ಎಸ್‌.ಲಾಲ್‌ ಅವರು ರಾಜೇಶ್‌ ಮತ್ತು ನುಪುರ್‌ ತಲ್ವಾರ್‌ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ತೀರ್ಪು ನೀಡಿದ್ದರು. ಅಲ್ಲದೇ ಅಕ್ಟೋಬರ್‌  2017ರಲ್ಲಿ ಹೈಕೋರ್ಟ್ ಸಾಕ್ಷ್ಯಾಧಾರದ ಕೊರತೆಯಿಂದ ಈ ಇಬ್ಬರು ಆರೋಪಿಗಳು ಜೈಲಿನಿಂದ ಬಿಡುಗಡೆಗೊಳಿಸಿತು. ಮೇ 16, 2008 ರಂದು ನೊಯ್ಡಾದ ಅವರ ನಿವಾಸದಲ್ಲಿ ಬಳಿ ಆರುಷಿ ಕೊಲೆಯಾಗಿತ್ತು.

Tags

Related Articles

Leave a Reply

Your email address will not be published. Required fields are marked *

Language
Close