Sri Ganesh Tel

ಆರುಷಿ ಪ್ರಕರಣದ ಮಹತ್ವದ ತೀರ್ಪು ಇಂದು

Posted In : ದೇಶ

ದೆಹಲಿ/ಅಲಹಾಬಾದ್: ದೇಶದ ಗಮನ ಸೆಳೆದಿದ್ದ ಹದಿಹರೆಯದ ಬಾಲಕಿ ಆರುಷಿ ತಲ್ವಾರ್ ಹಾಗೂ ಹೇಮರಾಜ್ ಕೊಲೆ ಪ್ರಕರಣದ ಮಹತ್ವದ ತೀರ್ಪು ಇಂದು ಹೊರಬರಲಿದೆ.  ಅಲಹಾಬಾದ್ ಹೈಕೋರ್ಟ್ ತೀರ್ಪಿನ ಮೇಲೆ ವೈದ್ಯ ದಂಪತಿ ರಾಜೇಶ್ ಹಾಗೂ ನೂಪುರ್ ತಲ್ವಾರ್ ಭವಿಷ್ಯ ನಿಂತಿದೆ.

2008ರ ಮೇ 15-16ರ ರಾತ್ರಿ ಇನ್ನೇನು 14ರ ಹರೆಯಕ್ಕೆ ತಿರುಗಬೇಕಿದ್ದ ಆರುಷಿ ತಲ್ವಾರ್‌ಳ ದೇಹ ಆಕೆಯ ಬೆಡ್‌ರೂಮ್‌ನಲ್ಲಿ, ಪ್ರಮುಖ ಶಂಕಿತ ಹೇಮರಾಜ್‌ನ ಮೃತ ದೇಹ ಎರಡು ದಿನಗಳ ಬಳಿಕ ಮನೆಯ ಮೇಲ್ಛಾವಣಿ ಮೇಲೆ ಕಂಡು ಬಂದಿತ್ತು. ನೋಯ್ಡಾದ ಜಲ್ವಾಯು ವಿಹಾರ್ ಅಪಾರ್ಟ್‌ಮೆಂಟ್‌ನ ಬೆಡ್‌ ರೂಮ್‌ನಲ್ಲಿ ಕುತ್ತಿಗೆ ಸೀಳಿ ಸತ್ತು ಬಿದ್ದಿದ್ದ ಆರುಷಿ ತಲ್ವಾರ್ ಮೃತದೇಹ ಕಂಡುಬಂದಿತ್ತು.

ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದ ಪ್ರಕರಣದ ಆರಂಭಿಕ ತನಿಖೆಯಲ್ಲಿ ಹೇಳಿಕೊಳ್ಳುವ ಪ್ರಗತಿ ಕಾಣದ ಬಳಿಕ ಮರ್ಯಾದಾ ಹತ್ಯೆಯ ಶಂಕೆ ಮೇಲೆ ಅಂದಿನ ಮಾಯಾವತಿ ಸರಕಾರ ಪ್ರಕರಣವನ್ನು ಕೇಂದ್ರ ತನಿಖಾ ದಳ(ಸಿಬಿಐ)ಗೆ ವಹಿಸಿತ್ತು. ಹೈಕೋರ್ಟಿನ ವಿಭಾಗೀಯ ಪೀಠ ಸೆಪ್ಟೆಂಬರ್ 7ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

Leave a Reply

Your email address will not be published. Required fields are marked *

twelve + 13 =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top