About Us Advertise with us Be a Reporter E-Paper

Breaking Newsಕ್ರೀಡೆ

ಇನ್ಸ್ಟಾಗ್ರಾಂನಲ್ಲಿ ಟ್ರೋಲ್‌ಗೊಳಾಗದ ಎಬಿಡಿ

ತಮ್ಮ ಅದ್ಭುತ ಬ್ಯಾಟಿಂಗ್ ವೈಖರಿಯಿಂದ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿಡಿ ವಿಲಿಯರ‍್ಸ್, ಭಾರತದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಸುಖಾಸುಮ್ಮನೆ ವಿವಾದವನ್ನು ಮೈದೇಳೆದುಕೊಂಡಿದ್ದು, ವೈನ್‌ ಕಂಪೆನಿಯನ್ನು ಪ್ರಚಾರದ ಭರದಲ್ಲಿ ಭಾರತೀಯರ ಟೀಕೆಗೆ ಗುರಿಯಾಗಿದ್ದಾರೆ.

ವಿದೇಶಿ ಮೂಲದ  ವೈನ್ ಕಂಪೆನಿ ತನ್ನ ವ್ಯವಹಾರವನ್ನು ಭಾರತದಲ್ಲಿ ಆರಂಭವಿಸಲಿದ್ದು, ಅದಕ್ಕಾಗಿ ಕಲಾತ್ಮಕ ಜಾಹೀರಾತನ್ನು ಬಿಡುಗಡೆಗೊಳಿಸಿದೆ. ಆ ಜಾಹೀರಾತಿನಲ್ಲಿ ಆಟೋರಿಕ್ಷಾದ ಮೇಲೆ ವೈನ್‌ ಬಾಟಲಿಯನ್ನು ಇಟ್ಟಿರುವ  ಚಿತ್ರವಿದೆ ಹಾಗೂ  “ಇಂಗಲ್ ಈಸ್ ಲ್ಯಾಡೆಂಡ್‌” ಎಂಬ ಅಡಿ ಬರಹ ಹೊಂದಿದೆ. ಆದರೆ ಈ ಜಾಹೀರಾತಿ ಕೆಳಗೆ ಬಲಬದಿಯಲ್ಲಿ ಭಾರತದ ಧ್ವಜವನ್ನು ಬಳಸಿಕೊಳ್ಳಲಾಗಿದೆ.

ಈ ಜಾಹೀರಾತಿನ ಚಿತ್ರವನ್ನು ಎಬಿ ಡಿ ವಿಲಿಯರ‍್ಸ್‌ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೈನ್ ಜಾಹೀರಾತಿಗೆ ಭಾರತದ ಧ್ವಜವನ್ನು ಬಳಸಿಕೊಂಡ ಕಾರಣ ಭಾರತೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ನಿಮ್ಮ ವೈನ್ ಬ್ಯ್ರಾಂಡ್‌ಗೆ ಭಾರತದ ಧ್ವಜವನ್ನು ಬಳಸಿಕೊಳ್ಳಬೇಡಿ. ಯುವ ಪೀಳಿಗೆ ನಿಮ್ಮನ್ನು ಪ್ರೀತಿಸುತ್ತದೆ. ಮಧ್ಯಪಾನ ಸೇವನೆಯ ಬಗ್ಗೆ ಪ್ರಚಾರ ಮಾಡಬೇಡಿ. ವೈನ್‌ ಪ್ರಚಾರಕ್ಕೆ ಭಾರತದ ಧ್ವಜ ಬಳಸಿಕೊಳ್ಳಲು ಹೇಳಿದವರಾರು? ಎಂದೆಲ್ಲ ಭಾರತೀಯರು ಇನ್ಸ್ಟಾಗ್ರಾಂನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close