ಅಮೆರಿಕಾದಲ್ಲಿ ಕಕಿಬಕ

Posted In : ಸಂಪಾದಕೀಯ-2

ರಾಗಾ ಅಮೆರಿಕಾ ಪ್ರವಾಸದಲ್ಲಿದ್ದಾರೆ.. ಈ ಪ್ರಾಯೋಜಿತ ಪ್ರವಾಸದಲ್ಲಿ ಪೂರ್ವನಿಶ್ಚಯದಂತೆ ಅವರಿಗೆ ಕಠಿಣ ಪ್ರಶ್ನೆಗಳನ್ನೂ ಕೇಳಲಾಗಿದೆ. ಅದಕ್ಕೆಲ್ಲ ನಗುತ್ತಾ ಉತ್ತರಿಸಿರುವ ರಾಗಾ ಅಲ್ಲಿರುವವರನ್ನೆಲ್ಲ ನಗೆಗಡಲಲ್ಲಿ ತೇಲಿಸಿದ್ದಾರೆ. ಕತ್ತೆ ಮೇದಲ್ಲಿ ಮತ್ತೆ ಮೇವಿಲ್ಲ ಎಂಬಂತೆ ರಾಗಾ ಹೋಗಿಬಂದ ಮೇಲೆ ಬಹುಶಃ ನಮ್ಮ ಹಾಸ್ಯ ಭಾಷಣಕಾರರಿಗೆಲ್ಲ ಅಲ್ಲಿನ್ನು ಮಾರುಕಟ್ಟೆ ಬಂದ್ ಆದರೂ ಆಗಬಹುದು. ಅದಿರಲಿ, ಸದ್ಯಕ್ಕೆ ಹೊಟ್ಟೆಗೊಂದು ಗಟ್ಟಿ ಪಟ್ಟೆ ಕಟ್ಟಿಕೊಂಡು, ಕಂಬವನ್ನು ಭದ್ರವಾಗಿ ಹಿಡಿದುಕೊಂಡು ನಿನ್ನೆ ರಾಗಾ ಆಡಿದ ಕೆಲವು ಮಾತುಗಳು ಹಾಗೂ ಮಂಕನ ಪ್ರತಿಕ್ರಿಯೆಗಳನ್ನು ಓದಿಕೊಳ್ಳಿ. ಇದು ಕಾಕಾ ವಿಧಿಸಿದ ಎಚ್ಚರಿಕೆ.

ವಂಶಾಡಳಿತ ಎಂಬುದು ಅತ್ಯಂತ ಸಾಮಾನ್ಯ. ಅಭಿಷೇಕ್ ಬಚ್ಚನ್, ಅಖಿಲೇಶ್ ಯಾದವ್, ಸ್ಟಾಲಿನ್, ಅಂಬಾನಿ ಇವರೆಲ್ಲವಂಶಾಡಳಿತದವರೇ. ಭಾರತ ನಡೆಯುತ್ತಿರುವುದೇ ಹೀಗೆ. ಹಾಗಾಗಿ ನನ್ನತ್ತ ಬೊಟ್ಟು ತೋರಿಸಬೇಡಿ – ಇಲ್ಲಿ ದೇವೇಗೌಡರ ಹೆಸರು ತೆಗೆಯದಿದ್ದುದು ಮಾತ್ರ ಕರ್ನಾಟಕಕ್ಕೆ ಮಾಡಿದ ಮೋಸ. ಅದಿರಲಿ, ಇದೇ ಜನ ಮುಂದೊಂದು ದಿನ ಭ್ರಷ್ಟಾಚಾರದ ವಿಚಾರದಲ್ಲೂ ಭಾರತ ನಡೆಯುತ್ತಿರುವುದೇ ಹೀಗೆ ಎಂದು ನುಡಿದರೆ ಏನು ಮಾಡೋಣ??

ಇವತ್ತು ಕೇಂದ್ರ ಸರಕಾರ ಮಾಡುತ್ತಿರುವ ಎಲ್ಲ ಯೋಜನೆಗಳನ್ನೂ ಮೊದಲು ಹೇಳಿದ್ದು ನಾವೇ. ನಾವು ಹೇಳಿದ್ದನ್ನೇ ಅವರು ಮಾಡುತ್ತಿದ್ದಾರೆ ಅಷ್ಟೇ.
– ಬರೀ ಹೇಳುವವರ ಪಕ್ಷ ತಮ್ಮದು ಎಂಬುದು ಇವರ ಮಾತಿನ ತಾತ್ಪರ್ಯವಾ? ಎಂಥ ಅಂಡೆಪಿರ್ಕಿ ಮಾರ್ರೆ.. ಅಂದಹಾಗೆ ಇದು ಹೊಗಳಿಕೆಯೋ, ತೆಗಳಿಕೆಯೋ ಎಂಬುದೇ ಗೊತ್ತಾಗುತ್ತಿಲ್ಲವಲ್ಲ..ಆದರೂ ಸತ್ಯವನ್ನೇ ಹೇಳಿದ್ದಾರೆ ಬಿಡಿ.

ಇಂದಿರಾ ಗಾಂಧಿಯವರನ್ನು ಒಮ್ಮೆ ಭಾರತ ಎಡಕ್ಕೆ ಹೊರಳಲಿದೆಯೋ ಬಲಕ್ಕೋ ಎಂದು ಕೇಳಿದಾಗ ಅವರು ಮಧ್ಯದಲ್ಲಿ ನೇರವಾಗಿ ಮೇಲಕ್ಕೆ ಬೆಳೆಯಲಿದೆ ಎಂದಿದ್ದರು – ಉಹಾಹಾಹಾಹಾ…

ಕಾಂಗ್ರೆಸ್ ಪರಸ್ಪರ ಚರ್ಚೆಯ ಮೂಲಕ ನೀತಿಯನ್ನು ನಿರೂಪಿಸುತ್ತದೆಯೇ ಹೊರತೂ ಹೇರುವಿಕೆಯ ಮೂಲಕವಲ್ಲ..
– ಬರೀ ಇಬ್ಬರ ನಡುವೆ ನಡೆಯುವುದಕ್ಕೂ ಚರ್ಚೆ ಎಂದೇ ಹೇಳುತ್ತಾರೆಂಬುದು ಅವರಿಗೂ ಗೊತ್ತು ಎಂದಾಯ್ತು.

ಲೋಕಸಭೆಯು 546 ಸದಸ್ಯತ್ವ ಹೊಂದಿದೆ.
– ಪಾಪ ಅವರು ಹೇಳಿದ್ದು ಇಟಲಿ ಲೋಕಸಭೆಯದ್ದಿರಬೇಕು..

ಜಮ್ಮುಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ನಾನು ಒಂಬತ್ತು ವರ್ಷಗಳ ಕಾಲ ತೆರೆಮರೆಯಲ್ಲಿ ಪ್ರಯತ್ನಿಸಿದ್ದೇನೆ.
– ಬಚಾವ್! ತೆರೆಯ ಮುಂದೆ ಬಂದಿದ್ದರೆ ಪಾಪ ಉಗ್ರರೆಲ್ಲ ನಗಾಡಿ ನಗಾಡಿಯೇ ಸಾಯುತ್ತಿದ್ದರು ಪಾಪ..

ಮೋದಿ ನನಗಿಂತ ಚೆನ್ನಾಗಿ ಮಾತನಾಡಬಲ್ಲರು
– ಓಹ್, ನಿಜ ಹೇಳುವುದೂ ರಾಜಕಾರಣಿಗಳ ತಂತ್ರಗಾರಿಕೆಯಲ್ಲಿ ಹೊಸದಾಗಿ ಸೇರಿಕೊಂಡಿದೆಯಾ?

ಕೊನೆ ಪದರ: ರಾಗಾ ಮಾತು ಕೇಳಿ ಅಮೆರಿಕಾದ ಟ್ರಂಪ್ ವಿರೋಧಿಗಳಿಗೂ ಟ್ರಂಪ್ ಅವರ ಆಯ್ಕೆಯೇ ಪರವಾಗಿಲ್ಲ ಎನಿಸು ತ್ತಿದೆಯಂತೆ.

Leave a Reply

Your email address will not be published. Required fields are marked *

10 − four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top