lakshmi-electricals

ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಮೂರು ಬಲಿ

Posted In : ಚಿತ್ರದುರ್ಗ, ರಾಜ್ಯ

ಚಿತ್ರದುರ್ಗ: ಟ್ಯಾಂಕರ್ ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಬಳಿ ಶನಿವಾರ ಬೆಳಗ್ಗೆ ನಡೆದಿದೆ. 
ಮೃತರನ್ನು ಸುರೇಶ್ (28), ತಿಪ್ಪೇಸ್ವಾಮಿ (38) ಹಾಗೂ ಶಿವಯ್ಯ (23) ಎಂದು ಗುರುತಿಸಲಾಗಿದೆ. ರಂಗಣ್ಣ ಹಾಗೂ ಶಿವು ಎಂಬವರು ಘಟನೆಯಲ್ಲಿ ಗಾಯಗೊಂಡಿದ್ದು ಇವರುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಇವರೆಲ್ಲರೂ ಚಳ್ಳಕೆರೆ ತಾಲೂಕಿನ ಕಸವನಗೊಂಡನಹಳ್ಳಿ ಗ್ರಾಮದವರಾಗಿದ್ದು, ಟ್ರಾಕ್ಟರ್‌‌‌ನಲ್ಲಿ ಹಿರಿಯೂರು ಬಳಿ ಕರೆಂಟ್ ವೈರಿಂಗ್ ಕೆಲಸ ಮಾಡಲು ತೆರಳಿದ್ದರು. ಕೆಲಸ ಮುಗಿಸಿಕೊಂಡು ವಾಪಸ್‌ ಬರುವಾಗ ಈ ಅವಘಡ ಸಂಭವಿಸಿದೆ. 
ಘಟನಾ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನಿಂದ ಚಳ್ಳಕೆರೆಗೆ ಆಗಮಿಸುತ್ತಿದ್ದ ಶಾಸಕ ರಘುಮೂರ್ತಿ ಘಟನೆ ಕಂಡು, ತಕ್ಷಣ ಸ್ಥಳಕ್ಕೆ ಆಗಮಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಗೆ ಅತಿಯಾದ ವೇಗವೇ ಕಾರಣ ಎಂದು ಹೇಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

eighteen − 3 =

Sunday, 26.02.2017

ಶ್ರೀ ದುರ್ಮುಖ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ, ಕೃಷ್ಣಪಕ್ಷ, ತಿಥಿ: ಅಮಾವಾಸ್ಯೆ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಶಿವ, ಕರಣ: ಚುತುಷ್ಟಾ

ರಾಹುಕಾಲಗುಳಿಕಕಾಲಯಮಗಂಡಕಾಲ
04.56-06.24 03.28-04.56 12.32-02.00

Read More

 

Sunday, 26.02.2017

ಶ್ರೀ ದುರ್ಮುಖ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ, ಕೃಷ್ಣಪಕ್ಷ, ತಿಥಿ: ಅಮಾವಾಸ್ಯೆ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಶಿವ, ಕರಣ: ಚುತುಷ್ಟಾ

ರಾಹುಕಾಲಗುಳಿಕಕಾಲಯಮಗಂಡಕಾಲ
04.56-06.24 03.28-04.56 12.32-02.00

Read More

Back To Top