lakshmi-electricals

ಡಿಕ್ಕಿ: ಆಸ್ಪತ್ರೆಗೆ ದಾಖಲಿಸಲಾಗಿದ್ದ ಯುವಕ ಸಾವು

Posted In : ಜಿಲ್ಲೆ, ದಕ್ಷಿಣ ಕನ್ನಡ, ರಾಜ್ಯ

ಕಾಸರಗೋಡು: ಸ್ಕೂಟರ್ ಮತ್ತು ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಯುವಕ ಇಂದು ಮೃತಪಟ್ಟದ್ದಾನೆ. ಕುಂಬಳೆ ಕಳತ್ತೂರಿನ ಸಿರಾಜುದ್ದೀನ್ (25) ಮೃತಪಟ್ಟ ಯುವಕ. ಗುರುವಾರ ಬಂದ್ಯೋಡು-ಪೆರ್ಮುದೆ ರಸ್ತೆಯ ಅಡ್ಕ ಸಮೀಪ ಅಪಘಾತ ನಡೆದಿತ್ತು. ಅಪಘಾತದಲ್ಲಿ ಸ್ಕೂಟರ್‌ನಲ್ಲಿದ ಸಿರಾಜುದ್ದೀನ್ ಜತೆಗೆ ಹಿಂಬದಿ ಸವಾರ ಸಿರಾಜ್ ಹಾಗೂ ಬೈಕ್ ಸವಾರರಾದ ಉಪ್ಪಳ ಮಣಿಮುಂಡದ ಶೇಖ್ ಸುಬಾಹ್ (22), ಮಣ್ಣಂಗುಯಿಯ ಹನೀಫ್ (20) ಗಾಯಗೊಂಡಿದ್ದರು. ಇವರು ಸಧ್ಯ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

1 + sixteen =

 
Back To Top