About Us Advertise with us Be a Reporter E-Paper

ಗೆಜೆಟಿಯರ್

ಏಸಸ್ ಝೆನ್ ಬುಕ್‌ಹೊಸ ಸರಣಿ ಬಿಡುಗಡೆ

ಸಸ್ ಝೆನ್ ಬುಕ್ ಪ್ರೊ 15(ಯುಏಕ್‌ಸ್580) ಹೊಸ ಸರಣಿಯು ಬಿಡುಗಡೆಯಾಗಿದ್ದು ಇದು ಹಿಂದೆಂದಿಗಿಂತ ವೇಗವಾಗಿದೆ ಪ್ರಶಸ್ತಿ ವಿಜೇತ ಝೆನ್ ಬುಕ್ ಏಸ್ (ಯುಏಕ್‌ಸ್ 391) ಏರ್ಗೋಲಿಫ್‌ಟ್ ಹಿಂಜ್ ವಿನ್ಯಾಸವನ್ನು ಹೊಂದಿದೆ, ನೋಟ ಕಾರ್ಯವೈಖರಿಯಲ್ಲಿ ಉತ್ತಮ. ಇದು 13.9 ಮಿ.ಮೀ. ತೆಳ್ಳಗಿದ್ದು ಕೇವಲ 985 ಗ್ರಾಂ ತೂಗುತ್ತದೆ.

ವೇಗವಾಗಿ ಕಾರ್ಯನಿರ್ವಹಿಸುವ ಇದು ಆಧುನಿಕ ವಿಂಡೋಸ್ 10 ಆವೃತ್ತಿ ಹೊಂದಿದೆ. ಝೆನ್ಬುಕ್ 13 (ಯುಏಕ್‌ಸ್31) ಕಾಂಪ್ಯಾಕ್‌ಟ್, ಅಲ್ಟ್ರಾಶಕ್ತಿಯುತ ಮತ್ತು ಸುಲಭವಾಗಿ ಕೊಂಡೊಯ್ಯಬಲ್ಲ ಲ್ಯಾಪ್ ಟಾಪ್ ಆಗಿದ್ದು, ಝೆನ್ಬುಕ್ ಏಸ್ (ಯುಏಕ್‌ಸ್391) ತೆಳುವಾದ ಮತ್ತು ಪೋರ್ಟಬಲ್ ಫ್ರೇಮ್‌ನಲ್ಲಿ, ವಿಶ್ವ ಪ್ರಬಲ ವೈಶಿಷ್ಟ್ಯ ಹೊಂದಿದೆ.

ಈ ಹೊಸ ಸರಣಿಯನ್ನು (ಸಿರೀಸ್)ಬಿಡುಗಡೆಗೊಳಿಸಿದ ಏಸಸ್ ಇಂಡಿಯಾ (ಪಿಸಿ ಗೇಮಿಂಗ್)ನ ಉದ್ಯಮ ಅಭಿವೃದ್ಧಿ ವ್ಯವಸ್ಥಾಪಕ ಅರ್ನಾಲ್ಡ್ ಸು, ‘ಝೆನ್ಬುಕ್ ಪ್ರೋ ಸರಣಿಯನ್ನು ಭಾರತೀಯ ಬಳಕೆದಾರರ ಮುಂದೆ ಪ್ರಸ್ತುತಪಡಿಸಲು ನಮಗೆ ಅಪಾರ ಸಂತೋಷವಿದೆ. ಸೌಂದರ್ಯ ಮತ್ತು ಕಾರ್ಯಕ್ಷಮತೆಯ ಪರಿಪೂರ್ಣ ಸಮತೋಲನವನ್ನು ಬಯಸುವ ನಮ್ಮ ಬಳಕೆದಾರರನ್ನು ಐಷಾರಾಮದ ಉತ್ಪನ್ನಗಳನ್ನು ನೀಡುವ ಗುರಿ ಇದೆ. ಝೆನ್ಬುಕ್ ಸರಣಿ ಉತ್ತಮ ಬೆಲೆಯ ಶ್ರೇಣಿಯನ್ನೂ ಹೊಂದಿದೆ’ ಏಂದು ಹೇಳಿದರು.

ಝೆನ್ಬುಕ್ ಪ್ರೊ (ಯುಏಕ್‌ಸ್580) ವೈಶಿಷ್ಟ್ಯ

ಭವಿಷ್ಯದ ಸ್ಪರ್ಶ: ಈ ಲ್ಯಾಪ್ ಟಾಪ್‌ನಲ್ಲಿ, ಟಚ್ ಪ್ಯಾಡ್ ನೊಂದಿಗೆ ಹೆಚ್ಚಿನರೆಸಲ್ಯೂಶನ್, ಪೂರ್ಣಬಣ್ಣ ಸಹಾಯಕ ಟಚ್ ಸ್ಕ್ರೀನ್ ಸಂಯೋಜಿಸುವ ಫ್ಯೂಚರಿಸ್ಟಿಕ್ ಸ್ಕ್ರೀನ್ ಪ್ಯಾಡ್ ಇದೆ. ಇದು ವಿಂಡೋಸ್ ಹಾಗೂ ಸ್ಕ್ರೀನ್ ಪ್ಯಾಡ್ ಅಪ್ಲಿಕೇಶನ್‌ಗಳೊಂದಿಗೆ ಕೆಲಸ ಮಾಡುತ್ತದೆ.

ಸ್ಫೂರ್ತಿ ನೀಡುವ ಸೌಂದರ್ಯ: ರೋಸ್ ಗೋಲ್ಡ್ ಬಣ್ಣದೊಂದಿಗೆ ಐಷಾರಾಮಿ ಡೀನ್ ಡೈವ್ ಬ್ಲೂನಲ್ಲಿ ಸ್ಪಿಮ್ಮೆಟಲ್ ಅಲ್ಯೂಮಿನಿಯಂ ಇದ್ದು ಯುನಿಬಾಡಿ ವಿನ್ಯಾಸ ವನ್ನು ಒಳಗೊಂಡಿದೆ.

ಪವರ್‌ಪ್ಯಾಕ್ ಮಾಡಲಾದ ಕಾರ್ಯಕ್ಷಮತೆ: 8 ಏನ್ ಇಂಟೆಲ್ ಕೋರ್ ಐ 9 ಪ್ರೊಸೆಸರ್‌ಗಳು, 16 ಜಿಬಿ ರ್ಯಾಮ್, ಜಿಫೋರ್ಸ್ ಏ ಜಿಟಿಏಕ್‌ಸ್ 1050 ಟಿ ಮತ್ತು 1 ಟಿಬಿ ಪಿಸಿಐಇ ಏಕ್‌ಸ್ 4 ಏಸ್‌ಏಸ್ಡಿ ವರೆಗೆ ನಿರೋಧಿಸಲಾಗದ ಕಂಪ್ಯೂಟಿಂಗ್. ಏತೆಗೆ ಇತರ ಹಲವು ವೈಶಿಷ್ಟ್ಯ ಹೊಂದಿರುವ ಲ್ಯಾಪ್‌ಟಾಪ್ ಇದಾಗಿದೆ.

ಇವುಗಳ ಆವೃತ್ತಿಯು ರು. 66,990ರಿಂದ ಆರಂಭಿಸಿ ರು. 2,09,990 ವರೆಗೆ ಭಿನ್ನ ಭಿನ್ನ ಶ್ರೇಣಿಯಲ್ಲಿ ದೊರೆ ಯಲಿದೆ. ಆಗಸ್‌ಟ್ 13ರಿಂದ ಇವು ಮಾರುಕಟ್ಟೆಯಲ್ಲಿ ಲಭ್ಯ.

Tags

Related Articles

Leave a Reply

Your email address will not be published. Required fields are marked *

Language
Close