About Us Advertise with us Be a Reporter E-Paper

Breaking Newsರಾಜ್ಯ

ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮ: ಉಪಮುಖ್ಯಮಂತ್ರಿ (ವಿಡಿಯೊ)

 'ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಹೊರಹಾಕುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ' ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.

ಮಂಗಳೂರು: ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮವಾಗಿ ಬಾಂಗ್ಲಾ ವಲಸಿಗರು ನೆಲೆಸಿರುವ ಮಾಹಿತಿ ಲಭಿಸಿದ್ದು, ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹೇಳಿದರು.
ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ‘ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಹೊರಹಾಕುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ’ ಎಂದರು. ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿ ಮಾದಕ ವಸ್ತು ಮಾರಾಟ ಜಾಲ ನಡೆಸುತ್ತಿರುವ ದಕ್ಷಿಣ ಆಫ್ರಿಕಾದ 107 ಪ್ರಜೆಗಳನ್ನು ಸೆರೆ ಹಿಡಿದಿದ್ದು, ಶೀಘ್ರ ಗಡೀಪಾರು ಮಾಡಲಾಗುವುದು ಎಂದರು.
ರಾಜ್ಯ ಸರ್ಕಾರದ ವೆಚ್ಚದಲ್ಲೇ 107 ಮಂದಿಯನ್ನು ವಾಪಸ್ ಕಳುಹಿಸಲು ಸಿದ್ಧತೆ ನಡೆದಿದೆ. ಆಫ್ರಿಕಾದ ರಾಯಭಾರ ಕಚೇರಿಗೆ ಈ ವಿಷಯವನ್ನು ಈಗಾಗಲೇ ತಿಳಿಸಲಾಗಿದೆ’ ಎಂದರು.
ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿನ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಇದು ವಿಶೇಷ ಪ್ರಕರಣವಾಗಿರುವ ಕಾರಣ, ಪೊಲೀಸರ ತೀರ್ಮಾನಗಳಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ನಿತ್ಯಪೂಜೆಗೆ ಅವಕಾಶ ನೀಡಲಾಗಿದೆ.
ಪುಣ್ಯತಿಥಿ ಸೇರಿದಂತೆ ಎಲ್ಲದಕ್ಕೂ ಸೂಕ್ತ ಸಮಯದಲ್ಲಿ ಪೊಲೀಸರು ಅವಕಾಶ ನೀಡುತ್ತಾರೆ ಎಂದರು.
ಇನ್ನು  ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಅಂತಿಮ ಘಟ್ಟಕ್ಕೆ ಬಂದಿದೆ. ತನಿಖೆ ಪೂರ್ಣಗೊಂಡ ಬಳಿಕ ಪೊಲೀಸರು ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳುತ್ತಾರೆ ಎಂದು ಹೇಳಿದರು.
Tags

Related Articles

Leave a Reply

Your email address will not be published. Required fields are marked *

Language
Close