About Us Advertise with us Be a Reporter E-Paper

Breaking Newsದೇಶಸಿನಿಮಾಸ್

ಪ್ರವಾಹ ಪೀಡಿತ ನಾಗಲ್ಯಾಂಡ್‍ಗೆ ನಟ ಸುಶಾಂತ್ ಸಿಂಗ್ ಸಹಾಯಹಸ್ತ

ದಿಮಾಪುರ್: ಕೇರಳ, ಕರ್ನಾಟಕದ ಕೊಡಗು ಬಳಿಕ ಜಲಪ್ರಳಯಕ್ಕೆ ನಾಗಲ್ಯಾಂಡ್ ಅಕ್ಷರಶಃ ತತ್ತರಿಸಿ ಹೋಗಿದೆ. ಇತ್ತೀಚೆಗಷ್ಟೇ ಟ್ವೀಟ್ಟರ್ ನಲ್ಲಿ ಪರಿಹಾರ ನೀಡುವಂತೆ ಅಲ್ಲಿನ ಸಿಎಂ ಮನವಿ ಮಾಡಿದ್ದರು.

ನಾಗಲ್ಯಾಂಡ್‍ನ ದುಸ್ಥಿತಿ ಕಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ 1.25 ಕೋಟಿ ರೂ. ಪರಿಹಾರ ಧನ ನೀಡಿದ್ದಾರೆ. ಇದನ್ನು ಸ್ವತಃ ನಾಗಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೊ ಅವರು ಹಂಚಿಕೊಂಡಿದ್ದಾರೆ. ಜತೆಗೆ ಸುಶಾಂತ್ ಸಿಂಗ್ ಅವರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರವಾಹದಿಂದಾಗಿ ಇದುವರೆಗೆ ಸುಮಾರು 50,000 ಮಂದಿಯನ್ನು ಸ್ಥಳಾಂತರಿಸಲಾಗಿದ್ದು, ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ.

Tags

Related Articles

One Comment

  1. Flash news or Breaking news ಪೂರ್ತಿಯಾಗಿ ಒಂದು ವಾಕ್ಯವಾದರೂ ಇರಲಿ. ಒಂದು ಲೈನ್ ಅರ್ಧ ಮಾತ್ರ ಕಾಣಿಸುತ್ತದೆ ಇನ್ನ ಉಳಿದ ಅರ್ಧ ಓದೋದಿಕ್ಕೆ ಆಗುವುದಿಲ್ಲ. ಒಂದು ತರಹ ಬೇಸರ ಆಗುತ್ತದೆ. ಅದಕ್ಕೆ ಪೂರ್ತಿ ವಿಷಯವನ್ನು ನಿಧಾನವಾಗಿ ಹಾಕಿ.

Leave a Reply

Your email address will not be published. Required fields are marked *

Language
Close