About Us Advertise with us Be a Reporter E-Paper

Breaking NewsCompany Announcementsರಾಜ್ಯ

ವಿನೋದ್ ರಾಜ್ ಅವರನ್ನು ಯಾಮಾರಿಸಿ ಕಾರಿನಲ್ಲಿದ್ದ 1 ಲಕ್ಷ ರು. ದೋಚಿದ ಕಳ್ಳರು

ಬೆಂಗಳೂರು: ಕಾರಿನ ಟಯರ್ ಪಂಚರ್ ಆಗಿದೆ ಎಂದು ಯಾಮಾರಿಸಿ ನಟ ವಿನೋದ್ ರಾಜ್ ಅವರ ಕಾರಿನಲ್ಲಿದ್ದ ಒಂದು ಲಕ್ಷ ರೂಪಾಯಿಯನ್ನು ಇಬ್ಬರು ಕಳ್ಳರು ದೋಚಿದ್ದಾರೆ.

ತಮ್ಮ ತೋಟದ ಕೂಲಿಯಾಳುಗಳಿಗೆ ಸಂಬಳ ನೀಡಲು ನಟ ವಿನೋದ್ ರಾಜ್ ಅವರು ಬ್ಯಾಂಕ್ ನಿಂದ ಒಂದು ಲಕ್ಷ ರೂಪಾಯಿ ಹಣವನ್ನು ಡ್ರಾ ಮಾಡಿಕೊಂಡು ಬಂದು ಕಾರನ್ನು ಸಿಎನ್ ಆರ್ ಬಟ್ಟೆ ಮಳಿಗೆ ಬಳಿ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಬಂದ ಇಬ್ಬರು ಏನ್ ಸರ್ ಚೆನ್ನಾಗಿದ್ದೀರಾ ಎಂದು ಆತ್ಮೀಯತೆಯಿಂದ ಮಾತನಾಡಿಸಿದ್ದರಂತೆ.

ಬಳಿಕ ಕಾರು ಪಂಚರ್ ಆಗಿದೆ ಎಂದು ಹೇಳಿ ರಿಪೇರಿ ಮಾಡುವ ನೆಪದಲ್ಲಿ ಕಾರಿನೊಳಗೆ ಇದ್ದ ಒಂದು ಲಕ್ಷ ರೂಪಾಯಿ ಹಣವನ್ನು ಕದ್ದು ಪರಾರಿಯಾಗಿದ್ದಾರೆಂದು ನಟ ವಿನೋದ್ ರಾಜ್ ತಿಳಿಸಿದ್ದಾರೆ. ಈ ಬಗ್ಗೆ ನೆಲಮಂಗಲ ನಗರ ಠಾಣೆಗೆ ದೂರು ನೀಡಲಾಗಿದೆ ಎಂದು ಹೇಳಿದರು.

ನೆಲಮಂಗಲ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ವಿನೋದ್ ರಾಜ್ ಅವರು ಮಾಧ್ಯಮಗಳ ಜೊತೆ ಒಂದು ಲಕ್ಷ ಹಣ ಕಳ್ಳತನ ಆಗಿದ್ದರ ಬಗ್ಗೆ ವಿಷಯ ತಿಳಿಸಿದ್ದಾರೆ. ಪೋಲೀಸರು ಸಹ ವಿನೋದ್ ರಾಜ್ ಅವರ ಕಳ್ಳತನ ಬಗ್ಗೆ ಸೂಕ್ತ ಕ್ತಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close