About Us Advertise with us Be a Reporter E-Paper

Breaking Newsಸಿನಿಮಾಸ್

ನಟ, ನಿರ್ಮಾಪಕರ ಆಡಿಟರ್ ಕಚೇರಿ ಮೇಲೆ ಐಟಿ ದಾಳಿ

ಬೆಂಗಳೂರು: ನಟ ನಿರ್ಮಾಪಕರ ಆಡಿಟರ್ ಗಳ ಕಚೇರಿಗಳ ಮೇಲೆ ಐಟಿ ದಾಳಿ ಮಾಡಿದ್ದಾರೆ.
ನಟ ಯಶ್ ಮನೆ ಮೇಲೆ ಐಟಿ ದಾಳಿಯ ಬೆನ್ನಲ್ಲೇ ಇದೀಗ ಗುರುವಾರ ಯಶ್ ಆಡಿಟರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀನೆ ನಡೆಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಯಶ್​ ಆಡಿಟರ್ ಬಸವರಾಜು ಎಂಬುವವರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಇನ್ನು ಪ್ರಸ್ತುತ ಐಟಿ ಆಧಿಕಾರಿಗಳು ದಾಳಿ ಮಾಡಿರುವ ಆಡಿಟರ್ ಬಸವರಾಜು, ಕೇವಲ ನಟ ಯಶ್ ಮಾತ್ರವಲ್ಲದೇ ಸ್ಯಾಂಡಲ್​ವುಡ್ ಕೆಲ ನಿರ್ಮಾಪಕರ ಹಾಗೂ ನಟರ ಆಡಿಟರ್ ಕೂಡ ಆಗಿದ್ದಾರೆ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಖಾಸಗಿ ವಾಹನಗಳಲ್ಲಿ ಬಂದು, ಏಕಕಾಲದಲ್ಲಿ ದಾಳಿ ನಡೆಸಿದ  9 ಜನ ಐಟಿ ಅಧಿಕಾರಿಗಳು, ಸತತ 5 ಗಂಟೆಗಳ ಕಾಲ ತಪಾಸಣೆ ನಡೆಸಿದ್ದರು. ಅತೆಯೇ ಆಡಿಟರ್ ಬಸವರಾಜ್​ ಕಚೇರಿಯಲ್ಲಿನ ಕೆಲ ಮಹತ್ವದ ದಾಖಲಾತಿಗಳು ಹಾಗೂ ಕಡತಗಳನ್ನು ಪರಿಶೀಲಿಸಿದ್ದರು. ಬಳಿಕ ಎರಡು ಬ್ಯಾಗ್​ ಹಾಗೂ ಕೆಲ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಸದ್ಯ ಐಟಿ ವಿಚಾರಣೆ ಎದುರಿಸುತ್ತಿರುವ ನಟ ಯಶ್​ ಗೆ ಈಗ ಮತ್ತೊಂದು ಸುತ್ತಿನ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗುತ್ತಿದ್ದು, ದಾಖಲಾತಿಗಳನ್ನು ವಶಕ್ಕೆ ಪಡೆದ ಬೆನ್ನಲ್ಲೇ ನಟ ಯಶ್​ ಆಡಿಟರ್ ಬಸವರಾಜ್ ಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಸಾಧ್ಯತೆ ಇದೆ.
ಈ ಹಿಂದೆ ಕಳೆದವಾರ ನಟ ಶಿವರಾಜ್​ಕುಮಾರ್​, ಸುದೀಪ್​, ಯಶ್​, ಪುನೀತ್​, ನಿರ್ಮಾಪಕರಾದ ರಾಕ್​ಲೈನ್​ ವೆಂಕಟೇಶ್​, ವಿಜಯ್​ ಕಿರಗಂದೂರ್​, ಸಿ.ಆರ್​. ಮನೋಹರ್​, ಜಯಣ್ಣ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು.

Related Articles

Leave a Reply

Your email address will not be published. Required fields are marked *

Language
Close