About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಭಾರತವನ್ನು ಮಣಿಸಲು ನಿವೃತ್ತಿಯಾದ ಕ್ರಿಕೆಟಿಗನ ಕರೆ ತಂದ ಇಂಗ್ಲೆಂಡ್!

ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಆದಿಲ್‌ ರಶೀದ್‌ಗೆ ಬುಲಾವ್!

ಲಂಡನ್: ಆಗಸ್ಟ್​ 1 ರಿಂದ ಆರಂಭಗೊಳ್ಳಲಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಗೆಲ್ಲಲು ಶತಾಯ ಗತಾಯ ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿದ್ದು, ಇಂಗ್ಲೆಂಡ್ ಒಂದು ಹೆಜ್ಜೆ ಮುಂದೆ ಹೋಗಿ ಭಾರತೀಯ ದಾಂಡಿಗರನ್ನು ಕಟ್ಟಿ ಹಾಕಲು ನಿವೃತ್ತಿಯಾದ ಕ್ರಿಕೆಟಿಗನನ್ನು ವಾಪಸ್‌ ಕರೆಸಿಕೊಂಡಿದೆ.

ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಆದಿಲ್ ರಶೀದ್‌ಗೆ ಇಂಗ್ಲೆಂಡ್‌ ಕ್ರಿಕೆಟ್ ಮಂಡಳಿ ಮತ್ತೆ ಬುಲಾವ್‌ ನೀಡಿದ್ದು, ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಇಂಗ್ಲೆಂಡ್‌ ಪಿಚ್‌ಗಳಲ್ಲಿ ವೇಗದ ಜತೆಗೆ ಸ್ಪಿನ್‌ ಮೂಲಕವೂ ಭಾರತವನ್ನು ಕಟ್ಟಿ ಹಾಕಲು ಇಂಗ್ಲೆಂಡ್‌ ಪ್ಲಾನ್‌ ಮಾಡಿಕೊಂಡಿದ್ದು, ಹಾಗಾಗಿ ರಶೀದ್‌ರನ್ನು ಮತ್ತೆ ವಾಪಸ್‌ ಕರೆಸಿಕೊಳ್ಳಲಾಗಿದೆ. ಇತ್ತೀಚೆಗೆ ನಡೆದ ಭಾರತ ವಿರುದ್ಧ ಏಕದಿನ ಸರಣಿಯಲ್ಲಿ ರಶೀದ್‌ ಉತ್ತಮ ಪ್ರದರ್ಶನ ನೀಡಿದ್ದರು. ಭಾರತದ ಪ್ರಮುಖ ವಿಕೆಟ್‌ ಕಿತ್ತು ಏಕದಿನ ಸರಣಿ ವಶ ಪಡಿಸಿಕೊಳ್ಳಲು ಸಹಕರಿಸಿದ್ದರು.

.ಹೀಗಾಗಿ ಈಗಾಗಲೇ ಟೆಸ್ಟ್ ಮಾದರಿಯಿಂದ ನಿವೃತ್ತಿ ಪಡೆದಿರುವ ಆದಿಲ್ ರಶೀದ್‌ಗೆ ಮೊದಲ ಟೆಸ್ಟ್​ 13 ಆಟಗಾರರಲ್ಲಿ ಸ್ಥಾನ ನೀಡಲಾಗಿದೆ.  ಆಯ್ಕೆಯಾದ ಕುರಿತು ಆಶ್ಚರ್ಯ ವ್ಯಕ್ತ ಪಡಿಸಿರುವ  ನಾನಿನ್ನೂ  ಟೆಸ್ಟ್ ಕ್ರಿಕೆಟ್​ಗೆ ಸಂಪೂರ್ಣ ಸಜ್ಜಾಗಿಲ್ಲ ಎಂದು ಹೇಳಿದ್ದಾರೆ.  ಈ ಹಿಂದೆ ಯಾರ್ಕ್​ ಶೈರ್ ಪರ ವೈಟ್ ಬಾಲ್ ಕ್ರಿಕೆಟ್ ಆಡಲು ಸಹಿ ಮಾಡಿದ್ದ ಈವರ ಆಯ್ಕೆ ನಿಜಕ್ಕೂ ಅಚ್ಚರಿ ತಂದಿದೆ ಎಂದು ಯಾರ್ಕ್​ ಶೈರ್ ತಿಳಿಸಿದೆ. ಜೊತೆಗೆ ಇಂಗ್ಲೆಂಡ್ ಮಾಜಿ ಆಟಗಾರ ಮೈಕಲ್ ವಾನ್​ ಇದೊಂದು ಹಾಸ್ಯಾಸ್ಪದ ನಿರ್ಧಾರ ಟೀಕೆ ಮಾಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close