About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಹಿಂದುತ್ವ ಹೋರಾಟಕ್ಕೆ ಬೆಂಬಲ ನೀಡಲು ಸಲಹೆ

ಮಂಗಳೂರು:  ಶಬರಿಮಲೆ ಹೋರಾಟ ಚುರುಕುಗೊಳಿಸಲು, ರಾಮಮಂದಿರ ನಿರ್ಮಾಣ ಪರ ಕೂಗು ಹೆಚ್ಚಿಸಲು, ಗೋವು ಕಳ್ಳ ಸಾಗಣೆ ತಡೆಯುವ ಮೂಲಕ ಹಿಂದುತ್ವದ ಹೋರಾಟಕ್ಕೆ ಬಲ ನೀಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಉಪಸ್ಥಿತಿಯಲ್ಲಿ ನಡೆದ ಆರ್‌ಎಸ್‌ಎಸ್ ದಕ್ಷಿಣ ಭಾರತ ಬೈಠಕ್‌ನಲ್ಲಿ ಸಲಹೆಗಳು ಬಂದಿವೆ.

ಉತ್ತರ ಭಾರತದಲ್ಲಿ ಅಯೋಧ್ಯೆ ರಾಮಮಂದಿರ ವಿಚಾರವನ್ನು ಹೆಚ್ಚು ಪ್ರಚಾರ ಮಾಡಬೇಕು. ರಾಮಮಂದಿರ ಬಿಜೆಪಿ ನಡೆಸಿದ ಹೋರಾಟಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಳಬೇಕು, ವ್ಯವಸ್ಥಿತವಾಗಿ ಪ್ರಚಾರ ಮಾಡಬೇಕು.

ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಅಯ್ಯಪ್ಪ ಭಕ್ತರ ಸಂಖ್ಯೆ ಹೆಚ್ಚು. ಹೀಗಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿ ಬೆಳೆಯಲು ಶಬರಿಮಲೆ ಮಹಿಳೆಯರ ಪ್ರವೇಶ ವಿರೋಧಿ ಹೋರಾಟ ತೀವ್ರಗೊಳಿಸುವ ಸಲಹೆಗಳು ಬಂದಿವೆ. ಕರಾವಳಿಯಲ್ಲಿ ಗೋವುಗಳ ಕಳ್ಳ ಸಾಗಣೆ ಜಾಸ್ತಿಯಾಗುತ್ತಿದ್ದು, ಅವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಮೂಲಕ ಹಿಂದುತ್ವದ ಹೋರಾಟ ತೀವ್ರಗೊಳಿಸಲು ಸಲಹೆ ಬಂದಿವೆ.
ಕಳೆದ ಲೋಕಸಭೆಯಲ್ಲಿ 17 ಸ್ಥಾನ ಗಳಿಸಿತ್ತು. ಈ ಬಾರಿ 25 ಕ್ಷೇತ್ರಗಳಲ್ಲಿ ಜಯ ಗಳಿಸಬೇಕು. ಪ್ರಧಾನಿ ನರೇಂದ್ರ ಮೋದಿ ಪ್ರಭಾವದ ಜತೆಗೆ ಮೂರು ವಿಚಾರಗಳು ಬಿಜೆಪಿಗೆ ನೆರವಾಗಲಿದೆ ಎಂದು ಚಿಂತನ ಮಂಥನದಲ್ಲಿ ಚರ್ಚೆಯಾಗಿದೆ.

ಸಂಸದ ನಳಿನ್‌ಗೆ ಸಾರಥ್ಯಕ್ಕೆ ಮನವಿ
ಸಂಸದ ನಳಿನ್‌ಕುಮಾರ್ ಕಟೀಲು ಅವರಿಗೆ ಇಲ್ಲವೇ ಪ್ರಹ್ಲಾದ್ ಜೋಶಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಅಮಿತ್ ಶಾ ಅವರಿಗೆ ಆರ್‌ಎಸ್‌ಎಸ್ ಮುಖಂಡರು ಸಲಹೆ ಮಾಡಿದ್ದಾರೆ. ಸಂತೋಷ್ ಬಿ.ಎಲ್. ಅವರು ನಳಿನ್ ಮೇಲೆ ಒಲವು ಹೆಚ್ಚಿರುವುದರಿಂದ ಶಿಫಾರಸು ಬಂದಿದೆ. ಲೋಕಸಭೆ ಚುನಾವಣೆ ಸಂದರ್ಭ ಯಡಿಯೂರಪ್ಪ ಬದಲಾವಣೆ ಮಾಡುವ ಸಾಧ್ಯತೆಯನ್ನು ಅಮಿತ್ ಶಾ ತಳ್ಳಿ ಹಾಕಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close