ವಿಶ್ವವಾಣಿ

ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸಕ್ಕೆ 22 ಮಂದಿ ಬಲಿ

ಕಾಬೂಲ್‌ : ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ ನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಬುಧವಾರ ರಾತ್ರಿ  ನಡೆದ ಅವಳಿ ಆತ್ಮಾಹುತಿ ಬಾಂಬ್ ದಾಳಿಗೆ 22 ಮಂದಿ ಬಲಿಯಾಗಿದ್ದು, 70ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕುಸ್ತಿ ಕ್ಲಬ್‌ನ ಬಳಿ ಮೊದಲ ಸ್ಫೋಟ ನಡೆದಿದ್ದು ,ಕೆಲ ಹೊತ್ತಿನಲ್ಲೇ ಇನ್ನೊಂದು ಸ್ಫೋಟ ನಡೆದಿದೆ. ದುರಂತವೆಂದರೆ ಮೊದಲ ಸ್ಫೋಟ ನಡೆದ ಬಳಿಕ ರಕ್ಷಣಾ ಪಡೆಗಳು ಮತ್ತು ಪತ್ರಕರ್ತರು ಸ್ಥಳವನ್ನು ಸುತ್ತುವರಿದಿದ್ದ ವೇಳೆ 2ನೇ ಸ್ಫೋಟ ನಡೆದಿದೆ. ಈ ವೇಳೆ ಇಬ್ಬರು ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ