Breaking Newsದೇಶಪ್ರಚಲಿತ
ಅಫ್ರಿದಿ ಹೇಳಿದ್ದು ಸರಿಯಾಗಿದೆ: ರಾಜ್ನಾಥ್ ಸಿಂಗ್

ದೆಹಲಿ: ಪಾಕಿಸ್ತಾನವನ್ನೇ ಸರಿಯಾಗಿ ನಿಭಾಯಿಸದವರು ಕಾಶ್ಮೀರವನ್ನು ನಿಭಾಯಿಸುವರೇ ಎಂದು ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿರುವುದು ಸರಿಯಾಗಿಯೇ ಇದೆ ಎಂದು ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ತನ್ನದೇ 4 ಪ್ರಾಂತ್ಯಗಳನ್ನು ನಿರ್ವಹಿಸಲು ಸಾಧ್ಯವೇ ಆಗದಿರುವಾಗ ಪಾಕಿಸ್ತಾನಕ್ಕೆ ಕಾಶ್ಮೀರದ ಅವಶ್ಯಕತೆ ಇಲ್ಲ ಎಂದು ಶಾಹಿದ್ ಲಂಡನ್ನಲ್ಲಿ ಹೇಳಿದ್ದರು. ಕಾಶ್ಮೀರ ಪಾಕಿಸ್ತಾನಕ್ಕೂ ಬೇಡ, ಭಾರತದಲ್ಲೂ ಇರುವುದು ಬೇಡ. ಸ್ವತಂತ್ರವಾಗಿರಲಿ. ಕೊನೆಯ ಪಕ್ಷ ಜೀವಂತವಾಗಿರುತ್ತದೆ.
ಅಲ್ಲಿ ಜನರು ಹತ್ಯೆಯಾಗುತ್ತಿರುವುದು ನೋವನ್ನುಂಟು ಮಾಡುತ್ತದೆ. ಯಾವುದೇ ಸಮುದಾಯದವರು ಸಾಯಲಿ ಅದು ನೋವನ್ನೇ ತರುತ್ತದೆ ಎಂದು ತಮ್ಮ ಭಾಷಣದಲ್ಲಿ ಅಭಿಪ್ರಾಯಪಟ್ಟಿದ್ದರು. ಅಫ್ರಿದಿ ಅವರ ಈ ಹೇಳಿಕೆ ಪಾಕಿಸ್ತಾನ ಸರಕಾರ ಮತ್ತು ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರವನ್ನುಂಟು ಮಾಡಿತ್ತು.
ಶಾಹಿದ್ ಹೇಳಿರುವುದು ಸರಿಯಾಗಿಯೇ ಇದೆ. ಪಾಕಿಸ್ತಾನವು ತನ್ನ 4 ಪ್ರಾಂತ್ಯಗಳಾದ ಪಂಜಾಬ್, ಸಿಂಧ್, ಬಲೂಚಿಸ್ತಾನ ಮತ್ತು ಖೈಬರ್ ಪಂಕ್ತುಕ್ವಾ ಪ್ರದೇಶಗಳನ್ನೇ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕಾಶ್ಮೀರವನ್ನು ನಿಯಂತ್ರಿಸಲು ಸಾಧ್ಯವೇ? ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಮುಂದೆಯೂ ಹಾಗೆಯೇ ಇರಲಿದೆ
– ರಾಜ್ನಾಥ್ ಸಿಂಗ್ ಕೇಂದ್ರ ಗೃಹ ಸಚಿವ