About Us Advertise with us Be a Reporter E-Paper

Breaking Newsಸಿನಿಮಾಸ್
Trending

ಕರೀನಾ ಪುತ್ರ ತೈಮೂರ್ ಆಯ್ತು.. ಇದೀಗ ಪಿಗ್ಗಿ-ನಿಕ್ ಸರದಿ!

ಬಾಲಿವುಡ್ ನಟಿ ಕರೀನಾ ಕಪೂರ್ ಪುತ್ರ ತೈಮೂರ್ ಫೊಟೊ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದೆ. ಛಾಯಾಚಿತ್ರಗಾರರು ಕೂಡ ತೈಮೂರ್ ಚಿತ್ರ ಸೆರೆ ಹಿಡಿಯಲು ಮುಗಿಬೀಳುತ್ತಾರೆ. ತೈಮೂರ್ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟೊಂದು ಪ್ರಸಿದ್ಧನಾಗಿದ್ದಾನೆಂದರೆ ತೈಮೂರ್ ಹೋಲುವ ಬೊಂಬೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರೋದು ನಿಮಗೆ ಗೊತ್ತೇ ಇದೆ. ಇದೀಗ ಪ್ರಿಯಾಂಕ ಛೋಪ್ರಾ-ನಿಕ್ ಜೋನಾಸ್ ಸರದಿ.

ಹೌದು, ಮೊನ್ನೆಯಷ್ಟೇ ಪ್ರಿಯಾಂಕ ಛೋಪ್ರಾ ಹಾಗೂ ನಿಕ್ ಜೋನಾಸ್, ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಪಿಂಕ್ ಕಲರ್ ಸೀರೆಯುಟ್ಟ ಪಿಗ್ಗಿ ಹಾಗೂ ಸೂಟ್ ಧರಿಸಿದ್ದ ನಿಕ್ ಫೊಟೊಗೆ ಪೋಸ್ ನೀಡಿದ್ದರು. ಇದೀಗ ಅದೇ ರೀತಿಯಲ್ಲಿ ಪಿಗ್ಗಿ ಹಾಗೂ ನಿಕ್ ರನ್ನು ಹೋಲುವಂತೆಯೇ ಬೊಂಬೆ ತಯಾರಿಸಲಾಗಿದೆ. ಒಟ್ಟಾರೆ ತೈಮೂರ್ ಅಲಿ ಖಾನ್ ಬೊಂಬೆಗಳ ನಂತರ ಪಿಗ್ಗಿ-ನಿಕ್ ಬೊಂಬೆಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close