About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಮತ್ತೆ ಕಾಡಾನೆ ಹಾವಳಿ

ಸಕಲೇಶಪುರ: ಕೆಲ ದಿನಗಳಿಂದ ತಣ್ಣಗಾಗಿದ್ದ ಕಾಡಾನೆ ಹಾವಳಿ ಮತ್ತೆ ಶುರುವಾಗಿದೆ. ಇಷ್ಟು ದಿನ ರೈತರ ಜಮೀನಿಲ್ಲಿ ಬೆಳೆದಿದ್ದ ಬೆಳೆಗಳನ್ನು ನಾಶ ಮಾಡುತ್ತಿದ್ದ ಆನೆಗಳು, ಇದೀಗ ವಾಸಿಸುವ ಮನೆಗಳ ಮೇಲೆ ದಾಳಿ ಮಾಡುತ್ತಿವೆ.

ಗುಂಪಿನಿಂದ ಬೇರ್ಪಟ್ಟು ಒಂಟಿಯಾಗಿ ತಿರುಗಾಡುತ್ತಿರುವ ಕಾಡಾನೆ ದಾಳಿ ಮುಂದುವರಿಸಿದ್ದು, ಜನರು ಭಯಭೀತರಾಗಿದ್ದಾರೆ. ತಾಲೂಕಿನ ಕುನಿಗನಹಳ್ಳಿ ಗ್ರಾಪಂ ವ್ಯಾಪ್ತಿಯ ಹೊಸಗದ್ದೆ ಗ್ರಾಮದಲ್ಲಿ ರಾತ್ರಿ ಕಾಡಾನೆಯೊಂದು ಗ್ರಾಮದೊಳಗೆ ನುಗ್ಗಿ ದಾಂಧಲೆ ಎಬ್ಬಿಸಿದೆ. ಗ್ರಾಮದ ವೇದಾವತಿ ಪ್ರಕಾಶ್ ಎಂಬುವವರ ಮನೆಯ ಬಳಿ ಬುಧವಾರ ಮುಂಜಾನೆ 3.30ರ ಸುಮಾರಿಗೆ ಮನೆಯ ಮೇಲೆ ದಾಳಿ ಮಾಡಿ ಮನೆಗೆ ಹೊಂದಿಕೊಂಡಂತೆ ಇದ್ದ ಛಾವಣಿ ಮುರಿದು ಹಾಕಿದೆ.

ಛಾವಣಿಯನ್ನು ಮುರಿದ ಶಬ್ಧ ಕೇಳಿ ಮನೆಯಲ್ಲಿದ್ದವರು ಕಿಟಕಿ ತೆಗೆದು ನೋಡಲು ಹೋದಾಗ ಕಿಟಕಿಯೊಳಗೆ ಕಾಡಾನೆ ತನ್ನ ಸೊಂಡಿಲು ಹಾಕಿ ಮನೆಯಲ್ಲಿದವರನ್ನು ತನ್ನತ್ತ ಎಳೆದುಕೊಳ್ಳಲು ಪ್ರಯತ್ನಿಸಿದೆ. ತಕ್ಷಣ ಇವರ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಬರುವಷ್ಟರಲ್ಲಿ ಕಾಡನೆಯು ಅಲ್ಲಿಂದ ಕಾಲುಕ್ಕಿತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close