About Us Advertise with us Be a Reporter E-Paper

Breaking Newsದೇಶಪ್ರಚಲಿತ

ರಿಲಯನ್ಸ್‌ ಜತೆ ಬಲವಂತದ ಒಪ್ಪಂದ

ಪ್ಯಾರಿಸ್: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಹಗರಣಕ್ಕೆೆ ಸಂಬಂಧಿಸಿದಂತೆ ಮತ್ತೆೆ ಮಹತ್ವದ ದಾಖಲೆಗಳು ಬಿಡುಗಡೆಯಾಗಿದ್ದು ರಿಲಯನ್ಸ್‌ ಕಂಪನಿಯನ್ನು ಬಲವಂತವಗಿ ಪಾಲುದಾರ ಕಂಪನಿಯನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ಫ್ರಾನ್ಸ್‌‌ನ ಡಸಾಲ್ಟ್‌ ಕಂಪನಿ ಹೇಳಿರುವ ಪತ್ರವೊಂದು ಬೆಳಕಿಗೆ ಬಂದಿದ್ದೆೆ.

ಫ್ರೆೆಂಚ್‌ನ ‘ಪೋರ್ಟಲ್ ಏವಿಯೇಶನ್’ ಎಂಬ ಬ್ಲಾಗ್ ಪತ್ರವನ್ನು ಬಿಡುಗಡೆ ಮಾಡಿದೆ. ರಫೇಲ್ ಯುಧ್ಧ ವಿಮಾನಗಳನ್ನು ನಿರ್ಮಾಣ ಮಾಡುತ್ತಿರುವ ಡಸಾಲ್ಟ್‌ ಕಂಪನಿ ತಮ್ಮ ಕಾರ್ಮಿಕ ಸಂಘಟನೆಗಳ ಜತೆ ನಡೆಸಿದ ಮಾತುಕತೆ ವೇಳೆ ಅನಿಲ್ ಅಂಬಾನಿ ಕಂಪನಿಯನ್ನು ಬಲವಂತವಾಗಿ ಪಾಲುದಾರ ಕಂಪನಿಯನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಸಿಎಫ್‌ಡಿಟಿ ಮತ್ತು ಸಿಜಿಟಿ ಎಂಬ ಎರಡು ಕಾರ್ಮಿಕ ಸಂಘಟನೆಗಳು ಬಿಡುಗಡೆ ಮಾಡಿರುವ ಪತ್ರದಲ್ಲಿ ರಿಲಯನ್ಸ್‌ ಜತೆ ಬಲವಂತವಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಎಂದು ಎಂದು ಡಸಾಲ್ಟ್‌ ಕಂಪನಿ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

2017 ಮೇ 13 ರಂದು ನಡೆದು ಮಾತುಕತೆಯಲ್ಲಿ ವಿವರಗಳನ್ನು ಕಾಮೀಕ ಸಂಘಟನೆಗಳು ಬಿಡುಗಡೆಗೊಳಿಸುವ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ರಫೇಲ್‌‌ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸಿದೆ. ಇದು 59 ಸಾವಿರ ಕೋಟಿ ಮೊತ್ತದ ಯೋಜನೆಯಾಗಗಿದೆ.

Tags

Related Articles

Leave a Reply

Your email address will not be published. Required fields are marked *

Language
Close