About Us Advertise with us Be a Reporter E-Paper

ಅಂಕಣಗಳು

ಕೃಷಿ, ಆರೋಗ್ಯ, ಮೂಲಭೂತ ಸೇವೆಗಳ ಕಡೆ ಸರಕಾರಗಳ ಅಸಡ್ಡೆಯೇಕೆ?

ಆದರ್ಶ್ ಶೆಟ್ಟಿ ಉಪ್ಪಿನಂಗಡಿ

ಪ್ರಜೆಗಳಿಂದ ಚುನಾಯಿತನಾದ ಜನಪ್ರತಿನಿಧಿ, ಬಹುಮತ ಪಡೆದ ಪಕ್ಷ ಅಧಿಕಾರಕ್ಕೇರುವ ಮುನ್ನ ಚುನಾವಣಾ ಪ್ರಣಾಳಿಕೆಗಳಲ್ಲಿ ಭರವಸೆಯ ಮಹಾಪೂರಗಳನ್ನೇ ಹರಿಸಿಬಿಡುತ್ತದೆ. ಇದರಲ್ಲಿ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆೆ ಬರುತ್ತವೆಯೆಂಬುವುದು ಬೇರೆ ಮಾತು. ಅಂತೆಯೇ ಸರಕಾರಗಳ ಮೇಲೂ ಜನಸಾಮಾನ್ಯರ ನಿರೀಕ್ಷೆ ಬೆಟ್ಟದಷ್ಟಿರುತ್ತದೆ. ಸಾಮಾನ್ಯವಾಗಿ ಆಡಳಿತರೂಢ ಪಕ್ಷಗಳು ಸಾಲಮನ್ನಾ, ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಣೆ, ಉಚಿತ ಅಕ್ಕಿ ಸಬ್ಸಿಡಿ, ಜಾತಿವಾರು, ಧರ್ಮವಾರು ಭಾಗ್ಯಗಳ ಘೋಷಣೆ ಹೊರತಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮೂಲಭೂತ ಸೌಕರ್ಯ ಸೇರಿದಂತೆ ಅದರಾಚೆಗೆ ಸರಕಾರಗಳು ಚಿಂತಿಸುವುದು ಬಹಳ ವಿರಳ. ಸರಕಾರಗಳು ಬಿಡುಗಡೆಗೊಳಿಸಿದ ಯೋಜನೆಗಳು ಜನಸಾಮಾನ್ಯರ ಕೈ ಸೇರುವ ಮಧ್ಯೆೆದಲ್ಲಿ ಅಧಿಕಾರಿಗಳು, ಮದ್ಯವರ್ತಿಗಳ ಕಮಿಷನ್ ರೂಪದಲ್ಲಿ ನುಂಗಣ್ಣರ ಪಾಲಾಗಿ, ಕೆಲವೊಂದು ಬಾರಿ ಅರೆಬರೆ ಸಿಗುವುದಲ್ಲದೆ, ಕೆಲವೊಂದು ಬಾರಿ ಪೂರ್ತಿಯಾಗಿ ನುಂಗಿಬಿಡುವ ಭ್ರಷ್ಟಕುಳಗಳು ನಮ್ಮ ಆಡಳಿತಾತ್ಮಕ ವ್ಯವಸ್ಥೆೆಯಲ್ಲಿದೆ.

ಈ ಕಾರಣಕ್ಕಾಗಿಯೇ ಎಸಿಬಿ, ಐಟಿ ದಾಳಿಗಳದಾಗ ಮೂಟೆಗಟ್ಟಲೆ ದುಡ್ಡು, ಬೇನಾಮಿ ಹೆಸರಿನಲ್ಲಿ ಫ್ಲ್ಯಾಟ್, ಬಂಗಲೆ, ಜಮೀನುಗಳನ್ನು ಹೊಂದಿರುವ ದೊಡ್ಡದೊಡ್ಡ ಕುಳಗಳನ್ನು ಮಾಧ್ಯಮಗಳಲ್ಲಿ ಕಂಡಿದ್ದೇವೆ. ದೇಶದ ಬೆನ್ನೆೆಲುಬು ಅನ್ನದಾತನ ಸಾಲು ಸಾಲು ಆತ್ಮಹತ್ಯೆೆಗಳು ನಡೆಯುತ್ತಿದ್ದರೂ ಇದಕ್ಕೊಂದು ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ನಮ್ಮ ಆಡಳಿತ ವ್ಯವಸ್ಥೆೆಗಳು ಎಡವುತ್ತಿರುವುದೇಕೆ? ಬರೀ ಸಾಲ ಮನ್ನಾದಂತಹ ಯೋಜನೆಗಳು ಆತ್ಮಹತ್ಯೆೆಯಂತಹ ಸಮಸ್ಯೆೆಗಳಿಗೆ ಪರಿಹಾರವಲ್ಲ. ಕೃಷಿಯಂತ್ರ ಪರಿಕರಗಳಿಗೆ ಸಬ್ಸಿಡಿ, ರೈತಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಣೆ, ಮಾರುಕಟ್ಟೆೆಯಲ್ಲಿ ಮದ್ಯವರ್ತಿಗಳಿಂದ ರೈತರಿಗೆ ನಡೆಯುವ ವಂಚನೆ, ಮೋಸಗಳಿಗೆ ತಡೆಹಿಡಿಯುವುದು, ಮೀಟರ್ ಬಡ್ಡಿಕೋರರ ದಬ್ಬಾಳಿಕೆಗೆ ಕಡಿವಾಣ ಹಾಕುವಂತಹ, ಬ್ಯಾಂಕ್ ಅಧಿಕಾರಿಗಳಿಂದ ರೈತರಿಗೆ ಒತ್ತಡದ ಬದಲಾಗಿ ವಿನಾಯಿತಿ ನೀಡುವಂತಹ ವ್ಯವಸ್ಥೆೆಗಳಾಗಬೇಕು. ಇನ್ನು ಮಾಧ್ಯಮ ವರ್ಗದ, ಕೂಲಿಕಾರ್ಮಿಕ ವರ್ಗದ ಜನರು ಮಾರಕ ಕಾಯಿಲೆಗೆ ತುತ್ತಾದಾಗ ಶಸ್ತ್ರಚಿಕಿತ್ಸೆೆಯಂತಹ ದೊಡ್ಡಮಟ್ಟದ ಚಿಕಿತ್ಸೆೆಯ ಮೊರೆಹೋದಾಗ, ಬಡವರ ಪಾಲಿಗೆ ಮೊದಲು ಕಾಣಸಿಗುವುದು ಸರಕಾರಿ ಆಸ್ಪತ್ರೆೆಗಳು.ನಮ್ಮ ಆಡಳಿತ ವ್ಯವಸ್ಥೆೆಗಳು ಸರಕಾರಿ ಆಸ್ಪತ್ರೆೆಗಳ ಬಗ್ಗೆೆ ಅದೆಷ್ಟರ ಮಟ್ಟಿಗೆ ನಿರ್ಲಕ್ಷ್ಯ ವಹಿಸಿದೆಯೆಂದರೆ, ರಾಜ್ಯದಲ್ಲಿ ಅದೆಷ್ಟೋ ಸರಕಾರಿ ಆಸ್ಪತ್ರೆೆಗಳಲ್ಲಿ ವೈದ್ಯರುಗಳೇ ಇಲ್ಲ. ಹೊರಗುತ್ತಿಗೆಯ ಆಧಾರದಲ್ಲಿ ನೇಮಕಗೊಂಡ ‘ಡಿ’ ಗ್ರೂಪ್ ನೌಕರರ ಖಾಯಮಾತಿಯ ಬೇಡಿಕೆ ಈ ತನಕ ಈಡೇರಿಲ್ಲ. ಸಾವಿರಾರು ಹುದ್ದೆೆಗಳು ಖಾಲಿ ಬಿದ್ದಿವೆ. ಶುಚಿತ್ವಕ್ಕೆೆ ಆದ್ಯತೆಯಿಲ್ಲ. ಸರಕಾರದಿಂದ ರೋಗಿಗಳಿಗೆ ನೀಡಬೇಕಾದ ಪೌಷ್ಟಿಕ ಆಹಾರ, ಗುಣಮಟ್ಟದ ಆಹಾರ ನೀಡುವಲ್ಲೂ ತಾರತಮ್ಯ, ಬಡ, ಶೋಷಿತ ವರ್ಗದ ಜನರ ಬಗ್ಗೆೆ ಸರಕಾರಿ ವ್ಯವಸ್ಥೆೆಯಲ್ಲಿ ನಿರ್ಲಕ್ಷ್ಯಗಳೂ ಕೆಲವೆಡೆ ಕಂಡುಬರುತ್ತಿವೆ.

ಇವನ್ನೆೆಲ್ಲ ಸರಿಪಡಿಸಬೇಕಾದವರು ಯಾರು? ಖಾಸಗಿ ಆಸ್ಪತ್ರೆೆಗಳಲ್ಲಿ ಲಕ್ಷಗಟ್ಟಲೆ ದುಬಾರಿ ಬಿಲ್ ನೀಡಿದಾಗ ಆಕಾಶವೇ ಕಳಚಿಬಿದ್ದಂತಹ ಪರಿಸ್ಥಿತಿ ಜನಸಾಮಾನ್ಯನಿಗೆ ತಂದೊಡ್ಡಿದ ಸರಕಾರಗಳು, ಆ ಕುಟುಂಬಕ್ಕೆೆ ಯಾವ ಮಟ್ಟದಲ್ಲಿ ಸ್ಪಂದಿಸುತ್ತವೆ? ಪೂರ್ತಿ ಬಿಲ್ ಪಾವತಿಸದೇ ಇದ್ದಲ್ಲಿ ಸತ್ತ ಹೆಣವನ್ನೂ ನೀಡದೆ ಸತಾಯಿಸುವ ಕೆಲವು ಖಾಸಗಿ ಆಸ್ಪತ್ರೆೆಗಳು ನಮ್ಮ ಕಣ್ಣ ಮುಂದಿವೆ. ಇಲ್ಲಿ ಸರಕಾರಗಳು ಬಹುಮುಖ್ಯವಾಗಿ ಆಡಳಿತದಲ್ಲಿ ಅಳವಡಿಸಬೇಕಾದ ಅಂಶವೆಂದರೆ, ಬಿಪಿಎಲ್ ಕಾರ್ಡ್‌ದಾರರಿಗೆ ಗಂಭೀರ ಕಾಯಿಲೆಗೆ ತುತ್ತಾಾದಂತಹ ಸಂದರ್ಭದಲ್ಲಿ 5 ಲಕ್ಷದವರೆಗಿನ ಉಚಿತ ಚಿಕಿತ್ಸೆೆಯನ್ನು ಸರಕಾರಗಳೇ ಭರಿಸುವಂತಾಗಬೇಕು. ಸರಕಾರಿ ಆಸ್ಪತ್ರೆೆಗಳನ್ನು ಮೇಲ್ದರ್ಜೆಗೇರಿಸುವಲ್ಲಿ ಮುತುವರ್ಜಿವಹಿಸಬೇಕು. ‘ವೈದ್ಯೋ ನಾರಾಯಣೋ ಹರಿ’ ಎಂಬಂತೆ ವೈದ್ಯರನ್ನು ಕಾಣುವ ಸಾಮಾನ್ಯ ಪ್ರಜೆಯನ್ನು ಸರಕಾರಿ, ಖಾಸಗಿ ಆಸ್ಪತ್ರೆೆಗಳು ಯಾವ ರೀತಿ ನಡೆಸಿಕೊಳ್ಳುತ್ತವೆ ಮತ್ತು ಸರಕಾರಿ ಆಸ್ಪತ್ರೆೆಗಳಲ್ಲಿ ಗುಣಮಟ್ಟದ ಔಷಧಗಳು, ಸೇವಾ ಸೌಕರ್ಯಗಳನ್ನು ಒದಗಿಸುವಲ್ಲಿ ಸರಕಾರಗಳು ಗಂಭೀರವಾಗಿ ಚಿಂತಿಸುವ ಅವಶ್ಯಕತೆಯಿದೆ.

ಇನ್ನು ಸರಕಾರಗಳು ಅಶಕ್ತ ನಿರ್ಗತಿಕ ಕುಟುಂಬಗಳಿಗೆಂದೇ ಮಾಸಾಶನ ನಿಗದಿಪಡಿಸಿವೆ. ಅವುಗಳಲ್ಲಿ ಹುಟ್ಟಿನಿಂದ ವಿಕಲಾಂಗತೆ ಹೊಂದಿರುವವರಿಗೆ ಅಂಗವಿಕಲ ಮಾಸಾಶನ, 60 ವರ್ಷ ಕಳೆದು ದುಡಿದು ತಿನ್ನಲು ಅಶಕ್ತರಾದ ವೃದ್ದರಿಗೆ ವೃದ್ಧಾಪ್ಯ ಮಾಸಾಶನ, 40 ವರ್ಷ ವಯೋಮಿತಿಯವರೆಗೂ ಮದುವೆಯಾಗದೆ ಅವಿವಾಹಿತರಾಗಿರುವ ಹೆಣ್ಣು ಮಕ್ಕಳಿಗೆ ಮನಸ್ವಿನಿ ಯೋಜನೆ, ಗಂಡು ಮಕ್ಕಳಿದ್ದು ತಮ್ಮ ಪೋಷಕರನ್ನು ಸಲಹದೆ ನಿರ್ಲಕ್ಷಕ್ಕೊಳಪಟ್ಟವರಿಗೆ ಸಂದ್ಯಾಸುರಕ್ಷಾ ಯೋಜನೆಯೆಂಬ ಸರಕಾರಿ ಸೇವೆಗಳನ್ನು ಒದಗಿಸಿದೆ. ಇವುಗಳಲ್ಲಿ ಅಂಗವಿಕಲ ಮಾಸಾಶನಕ್ಕೆೆ ಶೇ 75% ರಷ್ಟು ಮೀರಿದ್ದರೆ, 1200 ರುಪಾಯಿ ಮಾಸಾಶನ ದೊರಕುತ್ತದೆ. ವೃದ್ಧಾಪ್ಯವೇತನದಲ್ಲಿ 600 ರುಪಾಯಿಗಳಿದ್ದ ಮಾಸಾಶನವನ್ನು ಇತ್ತೀಚೆಗೆ ಸಮ್ಮಿಶ್ರ ಸರಕಾರ 1000 ರುಪಾಯಿಗಳಿಗೆ ಏರಿಸಿದೆ. ಅಂತೆಯೇ ಮನಸ್ವಿನಿ ಯೋಜನೆ 500ರುಪಾಯಿಗಳಿಗೂ ಸಂದ್ಯಾಸುರಕ್ಷಾ ಯೋಜನೆಗಳಿಗೆ ವಯೋಮಿತಿ ಆಧಾರದಲ್ಲಿ 1000ರುಪಾಯಿಗಳವರೆಗೆ ದೊರಕುತ್ತದೆ. ಈ ಯೋಜನೆಗಳೆಲ್ಲವೂ ನಿರ್ಗತಿಕರ ಪಾಲಿಗೆ ಬಹಳ ಮಹತ್ವಪೂರ್ಣವಾದ ಯೋಜನೆಯೆಂದರೆ, ಅತಿಶಯೋಕ್ತಿಯಾಗಲಾರದು.

ಇಂದಿಗೂ ಇಂತಹ ಅಲ್ಪಸ್ವಲ್ಪ ಮಾಸಾಶನಗಳಿಂದ ದಿನಕಳೆಯುವ ಸಾವಿರಾರು ಕುಟುಂಬಗಳು ನಮ್ಮ ರಾಜ್ಯದಲ್ಲಿವೆ. ಅಲ್ಲದೆ ಕೆಲ ವೃದ್ಧರು ಪ್ರಾಯ ಮೀರಿದಾಗ ಮಕ್ಕಳ ನಡುವೆ ಹಂಗಿನ ಬದುಕಿಗಿಂತ ಇಂತಹ ಮಾಸಾಶನಗಳಿಂದಲೇ ಸ್ವಾಭಿಮಾನದ ಬದುಕು ನಡೆಸುವವರೂ ಇದ್ದಾರೆ. ಆದರೆ ಇಂತಹ ಯೋಜನೆಗಳ ಹೆಸರಿನಲ್ಲಿ ಸರಕಾರ ನೀಡುವ ಸಹಾಯಧನಗಳು ಏನೂ ಸಾಲದು. ಇದೊಂದು ರೀತಿಯ ಆನೆಯ ಹೊಟ್ಟೆೆಗೆ ಅರೆಕಾಸಿನ ಮಜ್ಜಿಗೆ ಎಂಬ ಗಾದೆ ಮಾತಿನಂತಿದೆ.ಪ್ರಮುಖವಾಗಿ ಈ ಎಲ್ಲಾ ಸೇವೆಗಳ ಮೊತ್ತವನ್ನು 3000 ರುಪಾಯಿಗಳಿಗೆ ಏರಿಸುವ ಅವಶ್ಯಕತೆಯಂತೂ ಖಂಡಿತಾ ಇದೆ. ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲೊಂದಾದ ವಸತಿ ಯೋಜನೆಗೂ ‘ಬಸವ ವಸತಿ ಯೋಜನೆ’ ಎಂಬ ಹೆಸರಿನಲ್ಲಿ ಈಗಾಗಲೇ 1,60,000 ರುಪಾಯಿಗಳು ದೊರಕುತ್ತಿದ್ದು, ಇತ್ತೀಚಿಗಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಮನೆ ನಿರ್ಮಾಣಕ್ಕೆೆ ಬೇಕಾದ ಸಲಕರಣೆಯ ಬೆಲೆಯೂ ಗಗನಕ್ಕೇರಿರುವುದರಿಂದ ಈ ಮೊತ್ತಗಳೂ ಏನೇನೂ ಸಾಲುತ್ತಿಲ್ಲ.

ಸರಕಾರಗಳೇನೋ ಯಾವುದೋ ನಿರುಪಯುಕ್ತ ಕಾರ್ಯಕ್ರಮಗಳಿಗೆ ಇನ್ಯಾವುದೋ ವಿಚಾರಗಳಿಗೆ ದುಂದುವೆಚ್ಚ ನಡೆಸುವ ಬದಲಾಗಿ ಮನುಷ್ಯನ ಮೂಲಭೂತ ಅವಶ್ಯಕತೆಗಳ ಕಡೆ ಹೆಚ್ಚು ಸೌಕರ್ಯ, ಸವಲತ್ತು,ಅನುದಾನಗಳನ್ನು ಮೀಸಲಿರಿಸುವ ಕಡೆ ಗಮನಹರಿಸುವಂತಾಗಬೇಕು. ದೇಶದ ಶಿಕ್ಷಣ ವ್ಯವಸ್ಥೆೆ, ಮನುಷ್ಯನ ಆರೋಗ್ಯ, ಹೊಲದಲ್ಲಿ ಬೆವರು ಸುರಿಸಿ ದುಡಿಯುವ ಅನ್ನದಾತರೇ ಭಾರತದ ಭವಿಷ್ಯದ ಭದ್ರಭುನಾದಿಗಳು. ಇಂದಿನ ಜಾಗತಿಕ ಯುಗದಲ್ಲಿ ಕೃಷಿ, ಬೇಸಾಯ ಎಂಬುವುದು ಅಳಿವಿನಂಚಿಗೆ ಬಂದು ನಿಂತಿದೆ. ಹಸಿರು ಪೈರುಗಳು ಕಂಗೊಳಿಸಬೇಕಾದ ಜಾಗಗಳಲ್ಲಿ ಬೃಹತ್ ಕಟ್ಟಡ, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಲಾರಂಬಿಸಿವೆ. ಒಂದೆಡೆ ಪದವಿ, ಉನ್ನತಶಿಕ್ಷಣ, ಇಂಜಿನೀಯರಿಂಗ್, ವೈದ್ಯಕೀಯ ಶಿಕ್ಷಣ ಪಡೆದು ಉದ್ಯೋಗದ ಕಡೆ ಯುವಸಮುದಾಯ ಚಿತ್ತಹರಿಸುತ್ತಿದೆಯೇ ಹೊರತು ಕೃಷಿಯಿಂದ ವಿಮುಖರಾಗಿ ಹಳ್ಳಿಗಾಡಿನ ಜನಪದೀಯ ಸೊಗಡು ಕೆಲವೇ ವರ್ಷಗಳಲ್ಲಿ ವಿನಾಶದ ಅಂಚಿಗೆ ಬರಲಿದೆ ಎಂಬುವುದನ್ನು ಅಲ್ಲಗೆಳೆಯುವಂತಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close