About Us Advertise with us Be a Reporter E-Paper

ಅಂಕಣಗಳು

ಹೊಸ ಮಜಲು ಪ್ರವೇಶಿಸಿದ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಪ್ರಕರಣ

ಭಾರತೀಯ ಸೇನೆಗೆ ಹನ್ನೆರಡು ಹೆಲಿಕಾಪ್ಟರ್‌ಗಳ ಖರೀದಿ ಪ್ರಕ್ರಿಯೆಯಲ್ಲಿ ದಲ್ಲಾಳಿಯಾಗಿ ಕಾರ್ಯನಿರ್ವಹಿಸಿದ ಬ್ರಿಟಿಷ್ ಪ್ರಜೆ ಕ್ರಿಶ್ಚಿಯನ್ ಮೈಕೆಲ್‌ನನ್ನು ಭಾರತದ ಪೊಲೀಸರು ಬಂಧಿಸುವುದರೊಂದಿಗೆ, ರು.3,600 ಕೋಟಿಗಳ ಆಗಸ್ಟಾ ವೆಸ್‌ಟ್ಲ್ಯಾಂಡ್ ಹಗರಣ ಹೊಸ ಮಜಲನ್ನು ತಲುಪಿದೆ. 2012ರಿಂದಲೂ ನಮ್ಮ ದೇಶದ ಕಾನೂನುಪಾಲಕರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದ, ಆಯುಧಸಾಮಗ್ರಿಗಳ ಈ ದಲ್ಲಾಳಿಯನ್ನು ಯು.ಎ.ಇ. ಸರಕಾರ ಭಾರತಕ್ಕೆ ಹಸ್ತಾಂತರಿಸಿದೆ. ಆ ಮೂಲಕ, ಸರಕಾರಗಳು ಕಾರ್ಯಪ್ರವೃತ್ತರಾದರೆ, ಆರೋಪಿಗಳು ಎಲ್ಲೇ ಇರಲಿ, ಅವರನ್ನು ಕಾನೂನಿನ ವ್ಯಾಪ್ತಿಗೆ ಎಂದು ವೇದ್ಯವಾಗಿದೆ.

ಅತಿ ಗಣ್ಯ ವ್ಯಕ್ತಿಗಳ ಸಂಚಾರಕ್ಕೆಂದು ಹನ್ನೆರಡು ಹೆಲಿಕಾಪ್ಟರುಗಳನ್ನು ಭಾರತೀಯ ಸೇನೆಗೆ ಸರಬರಾಜು ಮಾಡುವ ಈ ಒಪ್ಪಂದ ನಡೆದದ್ದು 2010ರಲ್ಲಿ. ಆದರೆ, 2013ರಲ್ಲಿ ಇಟಲಿಯ ಕಾನೂನು ಪಾಲಕರು, ಆಗಸ್ಟಾ ವೆಸ್‌ಟ್ಲ್ಯಾಂಡ್‌ನ ಮಾತೃಸಂಸ್ಥೆಯ ಸಿ.ಇ.ಒ.ನನ್ನು ಬಂಧಿಸುವುದರೊಂದಿಗೆ, ಈ ಬೃಹತ್ ಹಗರಣದ ವಿವರಗಳು ಬಯಲಾದವು. ಮರುದಿನವೇ ಅಂದಿನ ರಕ್ಷಣಾ ಮಂತ್ರಿ ಎ.ಕೆ.ಅಂಟೋನಿ ಈ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವ ಸುಳಿವು ಗಮನಿಸಿ, ತನಿಖೆಗೆ ಆದೇಶಿಸಿದರು. ರು.225 ಕೋಟಿ ‘ಕಮಿಷನ್’ ಪಡೆದಾತ ಎಂದು ಕ್ರಿಶ್ಚಿಯನ್ ಮೈಕೆಲ್‌ನ್ನು ವಿಚಾರಣೆಗೆ ಒಳಪಡಿಸಲೆಂದು, ಆತನ ವಿರುದ್ಧ ಜಾಮೀನು ರಹಿತ ವಾರಂಟನ್ನು ಸಿ.ಬಿ.ಐ. ಹೊರಡಿಸಿತು. ಇಂಟರ್‌ಪೋಲ್ ಮೂಲಕ ಜಾರಿಯಾದ ವಾರಂಟ್‌ಗೆ ಬೆಲೆ ನೀಡಿ, ಯು.ಎ.ಇ. ಸರಕಾರವು ತನ್ನ ದೇಶದಲ್ಲಿದ್ದ ಆರೋಪಿಯನ್ನು ಬಂಧಿಸಿ, ಭಾರತಕ್ಕೆ ಕಳುಹಿಸಿದೆ.

ಭ್ರಷ್ಟಾಚಾರದ ಆರೋಪ ಹೊತ್ತಿರುವ ಕ್ರಿಶ್ಚಿಯನ್ ಮೈಕೆಲ್‌ನನ್ನು, ವಿಚಾರಣೆಗೆಂದು ಭಾರತ ತನ್ನ ವಶಕ್ಕೆ ಪಡೆದಿರುವ ವಿದ್ಯಮಾನವು ಚರಿತ್ರಾರ್ಹ. ಇಂದಿನ ಕೇಂದ್ರ ಸರಕಾರ ಮತ್ತು ಯು.ಎ.ಇ. ಸರಕಾರದ ನಡುವೆ ವೃದ್ಧಿಸಿರುವ ಬಾಂಧವ್ಯದ ಕುರುಹು ಇದು ಎಂದು ಜತೆಯಲ್ಲೇ, ಭಾರತದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸಿ, ವಿದೇಶದಲ್ಲಿ ನೆಲಸಿದರೂ, ಇಲ್ಲಿನ ಕಾನೂನು ಕುಣಿಕೆಗೆ ಅಂತಹ ಆರೋಪಿಗಳನ್ನು ಒಳಪಡಿಸಲು ಭಾರತಕ್ಕೆ ಸಾಧ್ಯ ಎಂದು ಈ ಬಂಧನ ತೋರಿಸಿಕೊಟ್ಟಿದೆ. ಆಗಸ್ಟಾ ವೆಸ್‌ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯಲ್ಲಿ ಕ್ರಿಶ್ಚಿಯನ್ ಮೈಕೆಲ್ ಪಡೆದಿರುವ ‘ಕಮಿಷನ್’ ಹಣದ ಒಂದು ಭಾಗವು, ಭಾರತದ ಪ್ರಮುಖ ರಾಜಕೀಯ ಪಕ್ಷದ ಪ್ರಮುಖರಿಗೆ ಸಂದಿದೆ ಎಂದು ಆತನ ಡೈರಿಯಲ್ಲಿ ಗುರುತಿಸಲ್ಪಟ್ಟ ಆರೋಪವೂ ಕೇಳಿಬಂದಿದ್ದು, ಆ ವಿಚಾರವನ್ನು ಇತರ ರಾಜಕೀಯ ಪಕ್ಷಗಳು ಅಸ್ತ್ರವನ್ನಾಗಿ ಮೂಲಕ, ಈ ಪ್ರಕರಣಕ್ಕೆ ರಾಜಕೀಯ ಸ್ವರೂಪ ಸೇರಿಕೊಂಡಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಬಂಧನ ಮತ್ತು ಮುಂದಿನ ಕಾನೂನು ವಿಚಾರಣೆಯು ಇನ್ನಷ್ಟು ಮಹತ್ವ ಪಡೆಯಲಿದೆ.

ಅದೇನೇ ಇದ್ದರೂ, ವಿದೇಶೀ ಆಯುಧಸಾಮಗ್ರಿ ದಲ್ಲಾಳಿಯೋರ್ವನನ್ನು ನಮ್ಮ ದೇಶದ ಕಾನೂನು ಪ್ರಕ್ರಿಯೆಗೆ ಒಳಪಡಿಸುವ ಮೂಲಕ ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯಲು ಸಾಧ್ಯವಾಗಿದೆ ಮತ್ತು ಈಗಾಗಲೇ ವಿದೇಶದಲ್ಲಿ ಆಶ್ರಯ ಪಡೆದಿರುವ ಇತರ ಆರೋಪಿಗಳ ಮತ್ತು ಅಪರಾಧಿಗಳ ಬೆನ್ನಿನಲ್ಲಿ ಹುಟ್ಟಿಸಿದೆ ಎಂಬುದು ಸ್ಪಷ್ಟ.

Tags

Related Articles

Leave a Reply

Your email address will not be published. Required fields are marked *

Language
Close