About Us Advertise with us Be a Reporter E-Paper

ಯಾತ್ರಾಯಾತ್ರಾ panel 1

ವಿಮಾನ ಪ್ರಯಾಣದಲ್ಲಿ ಫ್ರೆಂಡ್ ಅಂದ್ರೆ ಗಗನಸಖಿ

ಡಾ ಅಬ್ದುಲ್ ಕಲಾಂ ರಾಷ್ಟ್ರಪತಿ ಯಾಗಿದ್ದಾಗ ಅವರ ಜತೆ ಹದಿನಾರು ದಿನಗಳ ಕಾಲ ನಾಲ್ಕು ದೇಶಗಳಿಗೆ (ರಷ್ಯಾ, ಯುಕ್ರೇನ್, ಸ್ವಿಟ್ಜರ್‌ಲ್ಯಾಂಡ್ ಹಾಗೂ ಐಸ್‌ಲ್ಯಾಂಡ್) ಪ್ರವಾಸ ಮಾಡುವ ಅವಕಾಶ  ಆ ನಿಯೋಗದಲ್ಲಿ ಎಂಟು ಪತ್ರಕರ್ತ ರಿದ್ದರು. ಮೊದಲೆರಡು ದಿನ ಎಲ್ಲ ಪತ್ರಕರ್ತರು ಅವರ ಪಾಡಿಗೆ ಅವರಿದ್ದರು. ಆದರೆ ಹಿರಿಯ ಪತ್ರಕರ್ತ, ಮುಂಬೈನ ‘ಮಿಡ್ ಡೇ’ ಪತ್ರಿಕಾ ಸಂಸ್ಥೆ ಮುಖ್ಯಸ್ಥ ಖಾಲಿದ್ ಎ.ಎಚ್. ಅನ್ಸಾರಿ ಎಲ್ಲರೊಂದಿಗೆ ಆಪ್ತವಾಗಿ ಬೆರೆಯುತ್ತಾ ಲವಲವಿಕೆಯಿಂದ ಇದ್ದರು. ನನಗೆ ಅವರ ವ್ಯಕ್ತಿತ್ವ ಬಹಳ ಹಿಡಿಸಿತು. ಎರಡನೆಯ ದಿನದಿಂದ ನಾನು ಅವರಿಗೆ ಹತ್ತಿರವಾದೆ. ಎಲ್ಲಿ ಹೋದರೂ ನಾವಿಬ್ಬರೇ ಒಟ್ಟಿಗೇ ಇರುತ್ತಿದ್ದೆವು. ಅನ್ಸಾರಿಯ ವರದು ಕ್ರಿಕೆಟ್ ಪತ್ರಿಕೋದ್ಯಮದಲ್ಲಿ ದೊಡ್ಡ  ಭಾರತ ಕ್ರಿಕೆಟ್ ತಂಡ ವಿದೇಶದಲ್ಲಿ ಆಡುವಾಗ ಅನ್ಸಾರಿಯ ವರು ಇರಲೇಬೇಕು. ಅವರಿಗೆ ಭಾರತ ತಂಡದ ಆಟಗಾರರಷ್ಟೇ ಅಲ್ಲ, ಎಲ್ಲ ದೇಶಗಳ ಆಟಗಾರರ ಜತೆಗೂ ನಿಕಟ ಪರಿಚಯವಿತ್ತು. ಅನ್ಸಾರಿಯವರು ವಿಮಾನವೇರಿದರೆ ಸಾಕು, ಗಗನಸಖಿಯರು ಅವರ ಸೇವೆ ಮಾಡಲು ತಾವೇ ಮುಂದಾಗಿ ಬರುತ್ತಿದ್ದರು. ಒಂದೆ ರಡು ಬಾರಿ ನಾನು ಇದನ್ನು ಗಮನಿಸಿದೆ. ಆನಂತರ ಅವರನ್ನೇ ಕೇಳಿದೆ- ‘ಇದೇನು ನಿಮ್ಮ ವಿಶೇಷ? ವಿಮಾನವೇರುತ್ತಿದ್ದ ಹಾಗೇ ಫ್ಲೈಟ್ ಅಟೆಂಡರ್‌ಗಳು ನಿಮ್ಮ ಸೇವೆ ಮಾಡಲು ಹಾತೊರೆಯು  ಏನಿದು ಕತೆ?’

ಅದಕ್ಕೆ ಜೋರಾಗಿ ನಕ್ಕ ಅನ್ಸಾರಿ ಹೇಳಿದರು- ‘ಬಹುತೇಕ ಪ್ರಯಾಣಿಕರು ವಿಮಾನವೇರುತ್ತಿದ್ದಂತೆ ತಮ್ಮ ಅಕ್ಕಪಕ್ಕದ ಸೀಟಿನಲ್ಲಿ ಯಾರು ಕುಳಿತಿದ್ದಾ ರೆಂಬುದನ್ನು ಗಮನಿಸುವುದಿಲ್ಲ. ಅವರೊಂದಿಗೆ 8-10 ತಾಸು ಕುಳಿತು ಪ್ರಯಾಣಿಸುತ್ತೇವೆ ಎಂಬುದನ್ನು ಸಹ ಯೋಚಿಸುವುದಿಲ್ಲ. ತಮ್ಮ ಪಾಡಿಗೆ ತಾವಿರುತ್ತಾರೆ. ಪಕ್ಕದವರನ್ನು ಪರಿಚಯ ಮಾಡಿಕೊಳ್ಳಲು ಉತ್ಸಾಹ ತೋರುವುದಿಲ್ಲ. ಕೆಲವರಂತೂ ವಿಮಾನ ಪ್ರಯಾಣ ಮಹಾಶಿಕ್ಷೆ ಎಂಬಂತೆ ಮುಖ ಸೊಟ್ಟಗೆ ಮಾಡಿ ಕುಳಿತಿರುತ್ತಾರೆ ಹಾಗೂ ಇದೇ ಕಾರಣಕ್ಕೆ ವಿಮಾನವೇರು ತ್ತಿದ್ದಂತೆ ಮಲಗಿ ಬಿಡುತ್ತಾರೆ.  ನಾನು ಹಾಗಲ್ಲ. ಅಕ್ಕ-ಪಕ್ಕ, ಹಿಂದೆ-ಮುಂದೆ ಕುಳಿತವರನ್ನು ಮಾತಿ ಗೆಳೆದು ಪರಿಚಯ ಮಾಡಿಕೊಳ್ಳುತ್ತೇನೆ. ಇವರೆಲ್ಲರಿಗಿಂತ ಮುಖ್ಯವಾಗಿ, ವಿಮಾನದಲ್ಲಿ ಬಹಳ ಪ್ರಮುಖ ವಾದವರೆಂದರೆ ಗಗನ ಸಖಿಯರು.’

ಇಷ್ಟು ಹೇಳಿ ಅನ್ಸಾರಿ ಮಾತು ನಿಲ್ಲಿಸಿದರು. ನನ್ನ ಮುಖದಲ್ಲಿ ಮೂಡಿದ ಪ್ರಶ್ನಾರ್ಥಕ ಚಿಹ್ನೆ ನೋಡಿ, ಅನ್ಸಾರಿಯವರೇ ಮುಂದು ವರಿಸಿದರು- ‘ನಿಮ್ಮ ವಿಮಾನ ಪ್ರಯಾಣ ಸುಖಕರ ಹಾಗೂ ಸ್ಮರಣೀಯ ವಾಗಿರಬೇಕೆಂದರೆ, ಗಗನಸಖಿಯರಿಗೆ ನೀವೆಷ್ಟು ಆಪ್ತ ರಾಗುತ್ತೀರಿ ಎಂಬುದನ್ನು ಅವಲಂಬಿಸಿರುತ್ತದೆ. ನೀವು ಬಿಜಿನೆಸ್ ಕ್ಲಾಸ್ ಅಥವಾ ಎಕಾನಾಮಿ  ಪ್ರಯಾಣಿಸುತ್ತಿರಬಹುದು, ಅದು ಮುಖ್ಯವಲ್ಲ. ನೀವು ಅವರನ್ನು ಎಷ್ಟು ಗೌರವದಿಂದ, ಸೌಜನ್ಯವಾಗಿ, ಆಪ್ತವಾಗಿ ನಡೆಸಿಕೊಳ್ಳುತ್ತೀರಿ ಎಂಬುದು ಮುಖ್ಯ. ಇದಕ್ಕೆ ಮಾತೇ ಪ್ರಬಲ ಅಸ್ತ್ರ. ಗೊತ್ತಿರಲಿ. ಗಗನ ಸಖಿಯರು ನೂರಾರು ದೇಶಗಳಿಗೆ ಸಾವಿರಾರು ಸಲ ಹೋಗಿರುತ್ತಾರೆ. ಲಕ್ಷಾಂತರ ವಿಭಿನ್ನ ರೀತಿಯ ಪ್ರಯಾಣಿಕರೊಂದಿಗೆ, ತರಹೇವಾರಿ ಜನರೊಂದಿಗೆ ವ್ಯವಹರಿಸಿ, ಪ್ರಯಾಣಿಕರ ಮನಸ್ಸನ್ನು ಚೆನ್ನಾಗಿ ಅರಿತವರಾಗಿರುತ್ತಾರೆ. ಅವರೊಂದಿಗೆ ಬಹುತೇಕ ಪ್ರಯಾಣಿಕರು ಮುಕ್ತವಾಗಿ ಮಾತನಾಡುವುದಿಲ್ಲ. ಮನೆ ಕೆಲಸದವರಂತೆ ನಡೆಸಿ ಕೊಳ್ಳುತ್ತಾರೆ. ಅವರ ಜತೆ ಆಪ್ತವಾಗಿ ಮಾತನಾಡಿದರೆ ತಪ್ಪು  ಬಹುದು ಎಂದೇ ಇವರು ಭ್ರಮಿಸಿಕೊಂಡು ಸುಮ್ಮನಿದ್ದು ಬಿಡುತ್ತಾರೆ. ಹೆಚ್ಚು ಮಾತಾಡಲು ಸಂಕೋಚ ಬೇರೆ. ಹೀಗಾಗಿ ಯಾರೂ, ಮನಸ್ಸಿನಲ್ಲಿ ಆಸೆಯಿದ್ದರೂ, ಸುಮ್ಮನಾಗಿರುತ್ತಾರೆ.’

‘ಆದರೆ ನಾನು ಹಾಗಲ್ಲ. ಅವರ ಜತೆ ಪರಿಚಯ ದವರಂತೆ ಖುಷಿಯಿಂದ ಮಾತಾಡುತ್ತೇನೆ. ಅವರ ಊರು, ಭಾಷೆ, ಆಸಕ್ತಿ, ಅನುಭವ, ಹವ್ಯಾಸ, ಫ್ಯಾಮಿಲಿ.. ಮುಂತಾದ ವಿಷಯಗಳ ಬಗ್ಗೆ ಕೇಳಿ ಮಾತಿಗೆ ಕರೆಯುತ್ತೇನೆ. ಎಲ್ಲವೂ ಸೌಜನ್ಯದ ಪರಿಭಾಷೆ ಯಲ್ಲಿಯೇ ಇರುವಂತೆ ನೋಡಿಕೊಳ್ಳುತ್ತೇನೆ. ನಮ್ಮ ಭಾಷೆ, ಹಾವ- ಭಾವ, ವ್ಯಕ್ತಿತ್ವ, ಉದ್ದೇಶ..  ಇಲ್ಲಿ ಮುಖ್ಯವಾಗುತ್ತದೆ. Who is the most interesting person you have ever met on a plane ಎಂದು ಯಾರಾದರೂ ಕೇಳಿದರೆ, ನಾನು ಹೇಳೋದು ಗಗನಸಖಿಯರು ಅಂತ’ ಎಂದರು ಅನ್ಸಾರಿ.

ಹದಿನಾರು ದಿನಗಳ ಕಾಲ ಅನ್ಸಾರಿ ಅವರ ಜತೆಗಿದ್ದಾಗ ಅವರು ಹೇಳಿದ್ದಕ್ಕಿಂತ ಗಗನಸಖಿಯರ ಜತೆ ಆಪ್ತರಾಗಿದ್ದಾರೆಂಬುದು ಮನವರಿಕೆಯಾಯಿತು. ಎಲ್ಲರೂ ಅವರ ಬಳಿ ಬಂದು ಯೋಗಕ್ಷೇಮ ವಿಚಾರಿಸಿ ಕೊಂಡು ಹೋಗುತ್ತಿದ್ದರು. ಕಾಲಕಾಲಕ್ಕೆ ಅವರು ಬಯಸಿದ ತಿಂಡಿ-ತಿನಿಸು, ಪೇಯಗಳನ್ನು  ಹೋಗುತ್ತಿದ್ದರು. ಅವರು ಅಪೇಕ್ಷಿಸಿದ ‘ಗುಂಡು’ಗಳು ಬರುತ್ತಿದ್ದವು. ವಿಮಾನದಲ್ಲಿ ಎಲ್ಲರೂ ಅವರವರ ಯೋಚನೆ, ಲೋಕದಲ್ಲಿ ಮುಳುಗಿದ್ದರೆ, ಅನ್ಸಾರಿಯ ವರು ಮಾತ್ರ ಗಗನಸಖಿಯರನ್ನೆಲ್ಲ ಸುತ್ತಲೂ ಕುಳ್ಳಿರಿಸಿ ಕೊಂಡು ಹರಟೆ ಹೊಡೆಯುತ್ತಿದ್ದರು. ಇಲ್ಲವೇ ಅವರ ಹರಟೆಗೆ ಕಿವಿಯಾಗುತ್ತಿದ್ದರು.

ಅನ್ಸಾರಿಯವರು ಹೇಳುತ್ತಿದ್ದರು- ‘ನೀವು-ನಾವು ಭೇಟಿ ಮಾಡದ ರೋಚಕ ವ್ಯಕ್ತಿಗಳನ್ನು ಗಗನಸಖಿ ಯರು ಭೇಟಿ ಮಾಡುತ್ತಾರೆ. ಇವರ ಬಳಿ ಅದ್ಭುತ ಕತೆಗಳಿರುತ್ತವೆ. ಅಂಥ ಕತೆಗಳನ್ನು ನಾವು ಬೇರೆಲ್ಲೂ ಕೇಳಿರಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ನೋಡಲು ಸುಂದರವಷ್ಟೇ, ಕೇಳಲು  ಸುಂದರ.’

ಅನ್ಸಾರಿ ಹೇಳಿದ್ದರಲ್ಲಿ ಉತ್ಪ್ರೇಕ್ಷೆಯಿರಲಿಲ್ಲ. ನಾನೇ ಅದನ್ನು ಕಣ್ಣಾರೆ ಕಂಡಿದ್ದೆ. ಅದಾದ ನಂತರ, ಅವರ ಈ ಸೂತ್ರ-ಸ್ವಭಾವವನ್ನು ನಾನೂ ಅಳವಡಿಸಿಕೊಂಡೆ. ಅನ್ಸಾರಿ ನನಗೆ ಎಂಥ ಬದುಕಿನ ಪಾಠ ಹೇಳಿಕೊಟ್ಟರಲ್ಲ ಎಂದು ಈಗಲೂ ಅನಿಸುತ್ತದೆ.

ಒಮ್ಮೆ ನಾನು ಕೆನಡಾದ ಟೊರೆಂಟೋದಿಂದ ದುಬೈಗೆ ‘ಏರ್‌ಬಸ್ ಎ 380’ ದೊಡ್ಡ ವಿಮಾನದಲ್ಲಿ ಬರುತ್ತಿದ್ದೆ. ಸುಮಾರು ಹದಿನಾರು ಗಂಟೆಗಳ ಪಯಣ. ವಿಮಾನ ಟೇಕ್‌ಆಫ್ ಆದ ಮೂರು ತಾಸಿನ ಬಳಿಕ, ಗಗನಸಖಿಯರೆಲ್ಲ ಪ್ರಯಾಣಿಕರ ಊಟೋಪಚಾರ ಮುಗಿಸಿ  ನನ್ನ ಸೀಟಿನಿಂದ ಎದ್ದು ಹೋಗಿ ಅವರಿರುವ ಜಾಗಕ್ಕೆ ಹೋಗಿ ಉಭಯ ಕುಶಲೋಪರಿಯಲ್ಲಿ ತೊಡಗಿದೆ. ಸುಮಾರು ಅರ್ಧ ಗಂಟೆಯ ಮಾತುಕತೆಯ ನಂತರ, ಅವರಲ್ಲಿ ಮೂವರು ಆತ್ಮೀಯರಾದರು. ಅವರ ದಿನಚರಿ, ಜೀವನ, ಕಷ್ಟ- ಸುಖಗಳ ಬಗ್ಗೆ ವಿವರಿಸಿದರು. ಆ ಪೈಕಿ ಒಬ್ಬಳ ಗಂಡನ ಮನೆ ಮಂಗಳೂರು ಎಂಬುದು ತಿಳಿದ ನಂತರ ಮತ್ತಷ್ಟು ಆಪ್ತವಾಗಿ ಮಾತಾಡಿದಳು. ನಾನು ಸಂಪಾದಕ ನೆಂಬುದು ಗೊತ್ತಾದ ಬಳಿಕ ಹತ್ತಾರು ವಿದೇಶಿ ಪತ್ರಿಕೆ, ಮ್ಯಾಗಜಿನ್‌ಗಳನ್ನು ತಂದುಕೊಟ್ಟಳು. ಮಾತಿನ ಮಧ್ಯೆ  ‘ವರ್ಜಿನ್ ಏರ್‌ಲೈನ್‌ಸ್’ನ ರಿಚರ್ಡ್ ಬ್ರಾನ್‌ಸನ್ ಬಗ್ಗೆ ಪುಸ್ತಕ ಬರೆದಿದ್ದೇನೆಂದು ಹೇಳಿದಾಗ, ಆತ ಬರೆದ ಒಂದು ಪುಸ್ತಕವನ್ನು ತೋರಿಸಿ, ‘ನಾನು ಅವರಿಂದಲೇ ಆಟೋಗ್ರಾಫ್ ಪಡೆದ ಕೃತಿಯಿದು’ ಎಂದು ಮೊಬೈಲ್‌ನಲ್ಲಿ ತೆಗೆದುಕೊಂಡ ಫೋಟೋ ತೋರಿಸಿದಳು. ಏರ್‌ಲೈನ್‌ಸ್ ವಲಯದಲ್ಲಿ ಬ್ರಾನ್‌ಸನ್ ಬಗ್ಗೆ ಇರುವ ಅಭಿಪ್ರಾಯ ತಿಳಿಸಿದಳು.

ಆಕೆಯ ಜತೆಗೆ ಮಾತಿಗಿಳಿದ ಪರಿಣಾಮ ನನಗೆ ಮೂರ್ನಾಲ್ಕು ತಾಸು ಓದುವಷ್ಟು ಪೇಪರ್, ಮ್ಯಾಗಜಿನ್‌ಗಳು ಸಿಕ್ಕವು. ಕಾಲಕಾಲಕ್ಕೆ ಆಕೆ ನನ್ನ ಬಳಿ ಬಂದು ಜ್ಯೂಸ್, ಚಾಕಲೇಟ್, ಕುಕೀಸ್  ಎಂದು ಕೇಳಿ ಹೋಗುತ್ತಿದ್ದಳು. ಪರಿಚಿತರಾಗುವ ತನಕ ಎಲ್ಲರೂ ಅಪರಿಚಿತರೇ ಎಂಬ ಮಾತು ಅಕ್ಷರಷಃ ನಿಜ ಎಂದೆನಿಸಿತು.

ಅನ್ಸಾರಿಯವರ ಕಲಿಸಿದ ಈ ಪಾಠವನ್ನು ನಾನು ಬಹುತೇಕ ಎಲ್ಲ ಅಂತಾರಾಷ್ಟ್ರೀಯ ವಿಮಾನ ಪಯಣ ದಲ್ಲಿಯೂ ಜಾರಿಗೆ ತಂದಿದ್ದೇನೆ. ಇದು ಇಷ್ಟು ಪರಿಣಾಮಕಾರಿಯೆಂದರೆ, ಯಾವ ಪ್ರಯಾಣವೂ ಬೋರ್ ಆಗಿಲ್ಲ. ಎರಡು ವರ್ಷಗಳ ಹಿಂದೆ, ಮುಂಬೈ ನಿಂದ ಟೆಲ್ ಅವಿವ್‌ಗೆ ಹೋಗುವಾಗ, ಗಗನಸಖ ನೊಬ್ಬನ ಪರಿಚಯವಾಯಿತು. ಆತ ಹೇಳಿದ ಕತೆ ನನಗೆ ಇಸ್ರೇಲಿನ ಬಗ್ಗೆ  ಅನೇಕ ಸಂಗತಿಗಳನ್ನು ತಿಳಿಯುವಂತಾಯಿತು. ಆತ ಕಾಲೇಜು ಶಿಕ್ಷಣ ಮುಗಿಸಿದ ನಂತರ ಇಸ್ರೇಲ್ ಸೇನೆಯಲ್ಲಿ ಕಳೆದ ಎರಡು ವರ್ಷಗಳ ಅನುಭವ ರೋಚಕವಾಗಿತ್ತು. ಆ ದೇಶದ ಜನ ಜೀವನ, ಸಂಸ್ಕೃತಿ, ಆಚರಣೆ, ಮದುವೆ, ಅಂತ್ಯಸಂಸ್ಕಾರ, ಕಟ್ಟುಪಾಡು, ಭಾಷೆ ಮುಂತಾದವುಗಳ ಕುರಿತು ಅನೇಕ ಕುತೂಹಲದ ವಿಷಯಗಳನ್ನು ತಿಳಿಸಿದ್ದ. ಇಸ್ರೇಲ್ ಬಗ್ಗೆ ನನಗಿರುವ ಆಸಕ್ತಿ, ಗ್ರಹಿಕೆ ನೋಡಿ ಅನೇಕ ವಿಷಯಗಳನ್ನು ಹೇಳಲು ಉತ್ಸುಕನಾಗಿದ್ದ.

ಕೆಲ ವರ್ಷಗಳ ಹಿಂದೆ ದುಬೈನಿಂದ ಇಸ್ತಾಂಬುಲ್‌ಗೆ ಹೋಗುವಾಗ ಪರಿಯಚವಾದ ಫ್ಲೈಟ್  ಇಸ್ತಾಂಬುಲ್ ನೋಡಲೇಬೇಕಾದ ಜಾಗ, ಫುಡ್‌ಜಾಯಿಂಟ್, ಸ್ಥಳೀಯ ತಿಂಡಿ, ಉತ್ತಮ ಶಾಪಿಂಗ್ ಮಾಲ್ ಹೀಗೆ ಹತ್ತಾರು ಸಂಗತಿಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದ. ಆತನ ಮಾತು ಕೇಳಿಯೇ ಬುರ್ಸಾ ಎಂಬ ಸುಂದರ ಊರಿಗೆ ಹೋಗಿದ್ದೆ. ಅಲ್ಲಿಗೆ ಹೋದ ನಂತರ ಗೊತ್ತಾಗಿದ್ದೇನೆಂದರೆ, ಹಿಂದಿ ನಟ ಶಾರುಖ್ ಖಾನ್‌ನ ಅತ್ಯಂತ ಮೆಚ್ಚಿನ ಪ್ರವಾಸಿ ತಾಣ ಅಂದ್ರೆ ಬುರ್ಸಾ ಎಂದು.

ನಿಮ್ಮ ವಿಮಾನ ಪ್ರಯಾಣ ಸುಖಕರ ಹಾಗೂ ಉಪಯುಕ್ತವಾಗಿರಲು ಜತೆಗಾರರಷ್ಟೇ ಕ್ಯಾಬಿನ್ ಕ್ರ್ಯೂ ಅಥವಾ  ಅಟೆಂಡೆಂಟ್‌ಗಳೂ ಕಾರಣವಾಗ ಬಹುದು. ವಿಮಾನ ಏರುತ್ತಿದ್ದಂತೆ ನಿದ್ದೆ ಮಾಡುವವರು ಪ್ರಯಾಣದ ಅನೇಕ ರೋಚಕ ಸಂಗತಿಗಳನ್ನು ಕಳೆದುಕೊಳ್ಳುವುದಂತೂ ನಿಜ.

Tags

ವಿಶ್ವೇಶ್ವರ್ ಭಟ್

ಇವರ ಊರು ಉತ್ತರ ಕನ್ನಡದ ಕುಮಟಾದ ಮೂರೂರು. ಓದಿದ್ದು ಎಂ.ಎಸ್ಸಿ ಹಾಗೂ ಎಮ್.ಎ. ನಾಲ್ಕು ಚಿನ್ನದ ಪದಕ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ವೃತ್ತಿಯ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಆನಂತರ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ ದ ಮಾಜಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ತನಕ ಬರೆದಿದ್ದು 65 ಪುಸ್ತಕಗಳು. ವಿಜಯ ಕರ್ನಾಟಕದಲ್ಲಿದ್ದಾಗ ಬರೆದಿದ್ದು ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ. ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕ. ಇವರ ಅಂಕಣಗಳು ‘ನೂರೆಂಟು ವಿಶ್ವ’ ಮತ್ತು ’ಇದೇ ಅಂತರಂಗ ಸುದ್ದಿ’ ಗುರುವಾರ ಮತ್ತು ಭಾನುವಾರ ಓದಬಹುದು.

Related Articles

One Comment

  1. Dear Mr. Bhat,
    I have been reading your articles in Vishwavani occasionally and I enjoy them. The above article on Air Hostess (ವಿಮಾನ ಪ್ರಯಾಣದಲ್ಲಿ ಫ್ರೆಂಡ್ ಅಂದ್ರೆ ಗಗನಸಖಿ ) is quite interesting and thank you for the same.
    Raj Bykadi
    Washington

Leave a Reply

Your email address will not be published. Required fields are marked *

Language
Close