About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ರಫೇಲ್‌ ಡೀಲ್‌: ರಾಹುಲ್‌ ಮಾತುಗಳ ಮರ್ಮ ಬಯಲು ಮಾಡಿದ ವಾಯುಪಡೆ ಮಾಜಿ ಅಧಿಕಾರಿ

ರಫೇಲ್‌ ಡೀಲ್‌ ಸಂಬಂಧ ಕೇಂದ್ರ ಸರಕಾರದ ಮೇಲೆ ಯಾವುದೇ ಘನಿಷ್ಠ ಸಾಕ್ಷ್ಯಾಧಾರಗಳಿಲ್ಲದೇ ಆಪಾದನೆ ಮಾಡುತ್ತಲೇ ಬಂದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿರನ್ನು ವಾಯುಪಡೆ ಅಧಿಕಾರಿ ಏರ್‌ ಮಾರ್ಷಲ್‌ ಎಸ್‌ಪಿಬಿ ಸಿನ್ಹಾ ತರಾಟೆಗೆ ತೆಗೆದುಕೊಂಡಿದ್ದಾರೆ.

“ಯಾವುದೋ ಒಂದು ಮಾತನ್ನು ಸಾಬೀತುಮಾಡಲೆಂದು ಕೆಲ ಆಯ್ದ ವರದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ ಈ ಯಾವುದೇ ವರದಿಗಳು ಭಾರತದ ತಂಡಗಳಿಗೆ ಸಂಬಂಧಿಸಿದ್ದಲ್ಲ. ಡೀಲ್‌ ಸಂಬಂಧ ಅಂತಿಮ ವರದಿಯನ್ನು ಯಾವುದೇ ತಕರಾರಿಲ್ಲದೇ, ಚೌಕಾಶಿ ಮಾಡಲು ತೆರಳಿದ್ದ ಏಳೂ ಮಂದಿ ಸಹಿ ಮಾಡಿ ನೀಡಿದ್ದಾರೆ” ಎಂದು ಸಿನ್ಹಾ ತಿಳಿಸಿದ್ದಾರೆ.

ಈ ಹಿಂದೆ ಅಂತರ ಸರಕಾರಗಳ ಮಟ್ಟದ ಕಾಂಟ್ರಾಕ್ಟ್‌ಅನ್ನು ಅಮೆರಿಕ ಹಾಗು ರಷ್ಯಾಗಳೊಂದಿಗೆ ಮಾಡಿಕೊಂಡಿದ್ದ ಭಾರತ, ಇದೇ ರೀತಿಯ ಹೆಜ್ಜೆ ಇಟ್ಟ ಮೂರನೇ ದೇಶ ಫ್ರಾನ್ಸ್ ಆಗಿದೆ ಎಂದಿದ್ದಾರೆ.ರಫೇಲ್‌ ಡೀಲ್‌ ಚೌಕಾಶಿ ಮಾಡುವ ಸಂದರ್ಭ ಸಿನ್ಹಾ ಭಾರತದ ಪ್ರತಿನಿಧಿಯಾಗಿದ್ದರು.

ರಫೇಲ್‌ ಡೀಲ್‌ ಸಂಬಂಧದ ಬೆಲೆ ವಿಚಾರದಲ್ಲಿ ಮಾಡಿಕೊಳ್ಳಲಾದ ಚೌಕಾಶಿ ವೇಳೆ ರಕ್ಷಣಾ ಸಚಿವಾಲಯದ ಸಿಬ್ಬಂದಿಯೊಂದಿಗೆ ಪ್ರಧಾನ ಮಂತ್ರಿ ಕಾರ್ಯಾಲಯದ ಸಿಬ್ಬಂದಿ ಸಮನಾಂತರವಾಗಿ ಕೆಲಸ ಮಾಡಿದ್ದರು ಎಂದು ಮಾಧ್ಯಮವೊಂದು ಮಾಡಿದ್ದ ವರದಿಯನ್ನು ತರಾಟೆಗೆ ತೆಗೆದುಕೊಂಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಇದೊಂದು ಅರೆಬೆಂದ ವರದಿಯೆಂದು, ಖುದ್ದು ರಕ್ಷಣಾ ಇಲಾಖೆಯ ಅಧಿಕೃತ ಪತ್ರಗಳನ್ನು ಮುಂದಿಟ್ಟು ಹೇಳಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close