About Us Advertise with us Be a Reporter E-Paper

Breaking Newsದೇಶಪ್ರಚಲಿತ

ಚಿದು, ಕಾರ್ತಿಗೆ ಸಿಬಿಐ ಉರುಳು

ಏರ್‌ಸೆಲ್‌-ಮಾಕ್ಸಿ ಹಗರಣದಲ್ಲಿ ಅಪ್ಪ ಮಕ್ಕಳ ಮೇಲೆ ಸಿಬಿಐ ಚಾರ್ಜ್‌‌ಶೀಟ್‌

ದೆಹಲಿ: ಏರ್‌ಸೆಲ್- ಮ್ಯಾಕ್ಸಿಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರ ವಿರುದ್ಧ ಸಿಬಿಐ ಶುಕ್ರವಾರ ಹೊಸ ಆರೋಪ ಪಟ್ಟಿ ಸಲ್ಲಿಸಿದೆ.

ಆರೋಪಪಟ್ಟಿಯನ್ನು ದೆಹಲಿಯ ಪಾಟಿಯಾಲಾ ನ್ಯಾಯಾಲಯದ ಸಿಬಿಐ ನ್ಯಾಯಾಧೀಶ ಒ.ಪಿ.ಶೈನಿ ಅವರಿಗೆ ಸಲ್ಲಿಸಲಾಗಿದ್ದು, ಜುಲೈ 31ರಂದು ವಿಚಾರಣೆ ನಡೆಯಲಿದೆ. ಇದರೊಂದಿಗೆ ಪಿ.ಚಿದಂಬರಂ ಅವರಿಗೆ ಹೊಸ ಕಾನೂನು ಸಂಕಷ್ಟ ಎದುರಾಗಿದೆ. ಕಳೆದ ವಾರವಷ್ಟೇ ದೆಹಲಿ ನ್ಯಾಯಾಲಯ ಇಬ್ಬರಿಗೂ ಆಗಸ್ಟ್ 7ರವರೆಗೆ ಬಂಧಿಸದಂತೆ ಆದೇಶ ಹೊರಡಿಸಿತ್ತು.

ಯುಪಿಎ ಸರಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿ(ಎಫ್‌ಐಪಿಬಿ) ಅನುಮೋದನೆ ಮೂಲಕ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಸುಮಾರು 3,500 ಕೋಟಿ ರು.ಗಳ ಏರ್‌ಸೆಲ್-ಮ್ಯಾಕ್ಸಿಸ್ ಹಗರಣ ಮತ್ತು 305 ಕೋಟಿ ರು.ಗಳ ಮೀಡಿಯಾ ಹಗರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.
ಕಳೆದ ತಿಂಗಳು ಸಿಬಿಐ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಕಾರ್ತಿ ಚಿದಂಬರಂ ಅವರ ವಿರುದ್ಧ ಆರೋಪ ಮಾಡಲಾಗಿತ್ತು. ಇಂದು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಚಿದಂಬರಂ ಸೇರಿದಂತೆ ಹಿರಿಯ ಸರಕಾರಿ ಅಧಿಕಾರಿಗಳೊಂದಿಗೆ ಒಟ್ಟು 18 ಜನರನ್ನು ಹೆಸರಿಸಲಾಗಿದೆ.

ಸಿಬಿಐ ಆರೋಪಪಟ್ಟಿ ಸಲ್ಲಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಚಿದಂಬರಂ, ‘ಸಿಬಿಐ ಮೇಲೆ ಒತ್ತಡ ಹೇರಿ ನನ್ನ ಮೇಲೆ ಸುಳ್ಳು ಆರೋಪ ದಾಖಲಿಸಲಾಗಿದೆ. ಸರಕಾರದ ವಿರುದ್ಧ ಮಾತನಾಡಿರುವುದಕ್ಕೆ ನನ್ನ ವಿರುದ್ಧ ಈ ಕುತಂತ್ರ ನಡೆದಿದೆ. ಪ್ರಕರಣ ಈಗ ಘನ ನ್ಯಾಯಾಲಯದ ವ್ಯಾಪ್ತಿಯಲ್ಲಿದ್ದು, ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ.

ಪಿ ಚಿದಂಬರಂ, ಮಾಜಿ ಹಣಕಾಸು ಸಚಿವ

Tags

Related Articles

Leave a Reply

Your email address will not be published. Required fields are marked *

Language
Close