About Us Advertise with us Be a Reporter E-Paper

Breaking Newsರಾಜ್ಯ

ಏರ್​ಪೋರ್ಟ್, ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ್ದವ ಅರೆಸ್ಟ್

ಬೆಂಗಳೂರು: ವಿಮಾನ ನಿಲ್ದಾಣ ಹಾಗೂ ರೈಲ್ವೆ ಸ್ಟೇಷನ್‍ಗೆ ಹುಸಿ ಬಾಂಬ್ ಕರೆ ಮಾಡಿ ಬೆದರಿಕೆ ಹಾಕಿದ್ದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಆದಿತ್ಯ ರಾವ್​ (34) ಬಂಧಿತ. ವಿಮಾನ ನಿಲ್ದಾಣ ಹಾಗೂ ರೈಲ್ವೆ ಇಲಾಖೆಯಲ್ಲಿ ಇಂಜಿನಿಯರ್ ಪದವೀಧರ ಆದಿತ್ಯ ರಾವ್ ಕೆಲಸಕ್ಕೆ ಪ್ರ ಯತ್ನಿಸಿದ್ದ. ಆದರೆ ಕೆಲಸ ಸಿಗದಿದ್ದಕ್ಕೆ ಆದಿತ್ಯ ರಾವ್​ ಹತಾಶೆಗೊಂಡಿದ್ದ. ಈತ ಬಿಇ, ಎಂಬಿಎ ಪದವಿ ಪಡೆದಿದ್ದಾನೆ. 15 ದಿನಗಳಲ್ಲಿ ಎರಡು ಬಾರಿ ಟರ್ಮಿನಲ್ ಮ್ಯಾನೇಜರ್​ಗೆ ಫೋನ್​ ಮಾಡಿ ಬಾಂಬ್ ಹಾಕಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ.

ಅಲ್ಲದೆ ರೈಲ್ವೆ ಸ್ಟೇಶನ್​ ಕೂಡ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಎರಡು ದಿನಗಳ ಹಿಂದೆ ಏರ್ ಪೋರ್ಟ್​ ಪಾರ್ಕಿಂಗ್ ಜಾಗದಲ್ಲಿ ಬಾಂಬ್ ಹಾಕುವುದಾಗಿಯೂ ಆದಿತ್ಯ ರಾವ್ ಬೆದರಿಕೆ ಹಾಕಿದ್ದ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ತನಿಖೆ ನಡೆಸಿದ ಕೆಐಎಲ್ ಪೊಲೀಸರು ಆರೋಪಿ ಆದಿತ್ಯನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close