About Us Advertise with us Be a Reporter E-Paper

ಅಂಕಣಗಳು

ಬೆಂಗಳೂರಲ್ಲೇ ನಡೆಯಲಿ ಏರ್‌ಶೋ

ಕಳೆದ 22 ವರ್ಷಗಳಿಂದ ರಕ್ಷಣಾ ಇಲಾಖೆ ಏರೋ ಇಂಡಿಯಾ ಶೋ ನಡೆಸುವ ಮೂಲಕ ಸಿಲಿಕಾನ್ ಸಿಟಿ ಬೆಂಗಳೂರಿನ ಖ್ಯಾತಿ ಮತ್ತೊಂದು ಮೆಟ್ಟಿಲು ಏರುವಂತಾಗಿತ್ತು. 1996 ರಿಂದ ಪ್ರತಿ ಎರಡು  ಯಲಹಂಕದ ವಾಯುನೆಲೆಯಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದ ಈ ಏರ್ ಶೋಗೆ ದೇಶ- ವಿದೇಶಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಕಳೆದ ಬಾರಿ ಏರ್ ಶೋವನ್ನು ಗೋವಾಗೆ ಸ್ಥಳಾಂತರ ಮಾಡಲಾಗುವುದು ಎಂಬ ಸುದ್ದಿಗಳು ಹರಡಿ ಕೆಲವು ದಿನಗಳ ಕಾಲ ಗೊಂದಲ ಉಂಟಾಗಿತ್ತು. 11 ಏರ್‌ಶೋಗಳನ್ನು ನಡೆಸಿದ ಯಶಸ್ಸಿನ ನಂತರ ಇದೀಗ ಉತ್ತರ ಪ್ರದೇಶದ ಲಕ್ನೋ ನಗರಕ್ಕೆ ಸ್ಥಳಾಂತರ ಮಾಡುವ ಮಾತುಗಳು ಕೇಳಿ ಬರುತ್ತಿವೆ. ಆದರೆ, ಲಕ್ನೋ ನಗರದ ವಾಯುನೆಲೆಗೆ ಹೋಲಿಸಿದರೆ ಬೆಂಗಳೂರಿನ ವಾಯುನೆಲೆ ನೂರು  ಉತ್ತಮವಾಗಿದೆ. ಇಲ್ಲಿ ಏರ್‌ಶೋಗಳನ್ನು ನಡೆಸಲು ಬೇಕಾದ ಎಲ್ಲಾ ರೀತಿಯ ಮೂಲಸೌಲಭ್ಯಗಳು, ದೇಶ ವಿದೇಶಗಳಿಂದ ಬರುವ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು, ಉದ್ಯಮಿಗಳು, ಆಸಕ್ತರು ಬಂದು ಹೋಗಲು ಸಂಪರ್ಕ ವ್ಯವಸ್ಥೆ ಅತ್ಯುತ್ತಮವಾಗಿದೆ. ಏರ್‌ಶೋ ನಡೆಸುವ ಪರಿಣತರು ಹೆಚ್ಚಾಗಿದ್ದಾರೆ. ಯುದ್ಧ ವಿಮಾನಗಳನ್ನು ತಯಾರಿಸುವ ಎಚ್‌ಎಎಲ್, ಡಿಆರ್‌ಡಿಒದಂತಹ ಹಲವು ಸಂಸ್ಥೆಗಳು ಇರುವುದು ಇಲ್ಲಿಯೇ. ಈ ಕಾರಣದಿಂದ ಏರ್‌ಶೋ ಯಲಹಂಕದ ವಾಯುನೆಲೆಯಲ್ಲಿಯೇ ನಿರಂತರವಾಗಿ ನಡೆಯುವುದು ಸೂಕ್ತ. ಈ ಬಗ್ಗೆ ರಕ್ಷಣಾ ಇಲಾಖೆ ಎರಡನೇ ಯೋಚನೆ ಮಾಡದೇ  ಇಲ್ಲಿಯೇ ನಡೆಸಬೇಕು. ಇದಕ್ಕೆ ಅಗತ್ಯವಾದ ಒತ್ತಡಗಳನ್ನು ರಾಜ್ಯ ಸರಕಾರ ರಕ್ಷಣಾ ಇಲಾಖೆ ಮೇಲೆ ಹೇರಬೇಕಿದೆ. ಈ ಮೂಲಕ ಬಹು ದಿನಗಳಿಂದ ಕುತೂಹಲಿಗಳಾಗಿ ಕಾಯುತ್ತಿರುವ ಲಕ್ಷಾಂತರ ಜನರ ನಿರೀಕ್ಷೆಯನ್ನು ಹುಸಿ ಮಾಡದಂತೆ ರಕ್ಷಣಾ ಇಲಾಖೆ ನಿರ್ಧಾರ ಕೈಗೊಳ್ಳಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close