About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಅಮೆರಿಕದಲ್ಲಿ ಅಕಾಲಿದಳದ ನಾಯಕನ ಮೇಲೆ ದಾಳಿ (ವಿಡಿಯೊ)

ಕ್ಯಾಲಿಫೋರ್ನಿಯಾ: ಅಕಾಲಿದಳದ ನಾಯಕ ಹಾಗೂ ದೆಹಲಿ ಸಿಖ್ ಗುರುದ್ವಾರ ನಿರ್ವಹಣೆ ಸಮಿತಿ ಸದಸ್ಯ ಮಂಜೀತ್ ಸಿಂಗ್ ಮೇಲೆ ಅಮೆರಿಕದಲ್ಲಿ ದಾಳಿ ಮಾಡಲಾಗಿದೆ.

ಕ್ಯಾಲಿಫೋರ್ನಿಯಾದ ಗುರುದ್ವಾರದ ಬಳಿ ಮಂಜೀತ್ ಸಿಂಗ್ ಮೇಲೆ ದಾಳಿ ಮಾಡಲಾಗಿದೆ. ‘ತನ್ನ ಮೇಲೆ 20ಕ್ಕೂ ಹೆಚ್ಚು ಮಂದಿಯಿಂದ ದಾಳಿ ಮಾಡಲಾಗಿದೆ’ ಎಂದು ಮಂಜೀತ್ ಆರೋಪಿಸಿದರು. ಘಟನೆ ಸಂಬಂಧ ಈಗಾಗಲೇ ಮೂರು ಮಂದಿಯನ್ನು ಬಂಧಿಸಲಾಗಿದೆ.

ಹಿರೋಮನಿ ಗುರುದ್ವಾರ ಪರಿಬಂಧಕ್ ಸಮಿತಿ (ಎಸ್ಜಿಪಿಸಿ) ಅಧ್ಯಕ್ಷ ಗೋಬಿಂದ್ ಸಿಂಗ್ ಲೋಂಗೋವಲ್ ಈ ದಾಳಿಯನ್ನು ಖಂಡಿಸಿದ್ದು, ಅಮೆರಿಕದಲ್ಲಿ ಸಿಖ್ಖರ ಮೇಲೆ ಪದೇ ಪದೇ ದಾಳಿಯಾಗುತ್ತಿದೆ. ದಾಳಿಕೋರರ ವಿರುದ್ಧ ಅಮೆರಿಕ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close