About Us Advertise with us Be a Reporter E-Paper

Breaking Newsದೇಶಪ್ರಚಲಿತ

ಸಂಕ್ರಾಂತಿ ದಿನದಂದು ಮೈತ್ರಿ ಸರಕಾರಕ್ಕೆ ಸಂಕಷ್ಟ: ಇಬ್ಬರು ಪಕ್ಷೇತರ ಶಾಸಕರ ಬೆಂಬಲ ವಾಪಸ್

ಮುಂಬೈ: ಸಂಕ್ರಾಂತಿ ಸಂಭ್ರಮ ಮುಗಿಯುವ ಮುನ್ನವೇ ಇಬ್ಬರು ಪಕ್ಷೇತರ ಶಾಸಕರು ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುವ ಮೂಲಕ ಆಪರೇಷನ್ ಕಮಲಗೆ ಮುನ್ನುಡಿ ಬರೆದಿದ್ದಾರೆ.

ರಾಣೇಬೆನ್ನೂರು ಶಾಸಕ ಆರ್​. ಶಂಕರ್ ಮತ್ತು ಮುಳಬಾಗಿಲು ಶಾಸಕ ನಾಗೇಶ್​ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಪಾಪಸ್ ಪಡೆದು ರಾಜ್ಯಪಾಲರಿಗೆ ಇಂದು ಪತ್ರ ಬರೆದಿದ್ದಾರೆ.

ಮುಂಬೈನ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ ಇಬ್ಬರು ಶಾಸಕರು, ಮೈತ್ರಿ ಸರ್ಕಾರದಿಂದ ನಾವು ಸಾಕಷ್ಟು ನೋವು ಅನುಭವಿಸಿದ್ದೇವೆ. ಚಿಕ್ಕಪುಟ್ಟ ಕೆಲಸಗಳಿಗೂ ಅಲೆದಾಡಬೇಕಿದ್ದ ಪರಿಸ್ಥಿತಿ ಇತ್ತು. ನಮಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಮೈತ್ರಿ ಸರ್ಕಾರದಲ್ಲಿ ನಮಗೆ ಮರ್ಯಾದೆ ಇರಲಿಲ್ಲ. ಹೀಗಾಗಿ ನಾವು ನಮ್ಮ ಬೆಂಬಲ ವಾಪಸ್ ಪಡೆಯಲು ನಿರ್ಧರಿಸಿದ್ದೇವೆ. ಬಿಜೆಪಿ ನಮ್ಮನ್ನು ಪರಿಗಣಿಸಿದರೆ ನಾವು ಬಿಜೆಪಿಗೆ ಬೆಂಬಲ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು.

ಮೈತ್ರಿ ಸರ್ಕಾರದಲ್ಲಿ ಸಚಿವನಾಗಿ ಕೆಲಸ ಮಾಡಿದ್ದು ತೃಪ್ತಿ ತಂದಿದೆ. ಆದರೆ, ಇನ್ನೂ ಹೆಚ್ಚಿನ ಕೆಲಸ ಮಾಡಲು ಸ್ಪಂದನೆ ಸಿಗಲಿಲ್ಲ. ಜನರ ಆಶೋತ್ತರಗಳನ್ನು ಈಡೇರಿಸಲು ಸರ್ಕಾರ ವಿಫಲವಾಗಿದೆ. ಈ ಸರ್ಕಾರದಿಂದ ಸಾಕಷ್ಟು ಶಾಸಕರು ಬೇಸತ್ತಿದ್ದಾರೆ. ಹೀಗಾಗಿ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್​ ಪಡೆಯಲು ನಿರ್ಧರಿಸಿದ್ದೇನೆ ಎಂದು ಶಾಸಕ ಆರ್. ಶಂಕರ್ ಹೇಳಿದ್ದಾರೆ.

ಈ ಸರ್ಕಾರ ನಿರೀಕ್ಷಿತ ಆಡಳಿತ ನೀಡಿಲ್ಲ. ಮೈತ್ರಿ ಪಕ್ಷಗಳ ನಡುವೆ ಹೊಂದಾಣಿಕೆಯಿಲ್ಲ. ಹಾಗಾಗಿ ಬೆಂಬಲ ವಾಪಸ್ ಪಡೆಯುತ್ತಿದ್ದೇವೆ. ನನ್ನ ಬೆಂಬಲವನ್ನು ಬಿಜೆಪಿಗೆ ನೀಡುತ್ತಿದ್ದೇನೆ ಎಂದು ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್ ಹೇಳಿಕೆ ನೀಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close