About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಹೆಚ್ಚುದಿನ ಮೈತ್ರಿ ಸರಕಾರ ಉಳಿಯಲ್ಲ: ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೇಳಲಿದ್ದು, ಹೆಚ್ಚುದಿನ ಈ ಸರಕಾರ ಉಳಿಯುವುದಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.

ಬಿಎಸ್‌ವೈ ಡಾಲರ್ಸ್ ಕಾಲೋನಿ ನಿವಾಸದ ಬಳಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಅಸಮಾಧಾನ ಇರೋದು ಸತ್ಯ. ಈ ಸರಕಾರ ಬಹಳ ದಿನ ಇರುವುದಿಲ್ಲ. ಈಗಾಗಲೇ ನಾಲ್ವರು ಶಾಸಕರು ಕಾಂಗ್ರೆಸ್‌ನಿಂದ ದೂರ ಉಳಿದಿದ್ದಾರೆ. ಇನ್ನೂ ಹಲವಾರು ಶಾಸಕರಿಗೆ ಅಸಮಾಧಾನ ಇದೆ. ಅಸಮಾಧಾನ ತಾನಾಗಿಯೇ ಭುಗಿಲೇಳುತ್ತದೆ ಎಂದರು.

ನಾವು ಯಾವ ಶಾಸಕರಿಗೂ ಕೊಡಿಸುವುದಿಲ್ಲ. ಪರಿಸ್ಥಿತಿ ಕೈ ಮೀರುವ ಸಂದರ್ಭ ಕಂಡು ಬಂದಾಗ ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ. ರಾಜ್ಯಾದ್ಯಂತ ಪ್ರತಿಭಟನೆಗೂ ಕರೆ ನೀಡುತ್ತೇವೆ. ಸದ್ಯ ಬಿಜೆಪಿ ವೇಟ್ ಆಂಡ್ ಸೀ ತಂತ್ರ ಅನುಸರಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಶಾಸಕರ ರೆಸಾರ್ಟ್ ಬಗ್ಗೆ ಕಾಂಗ್ರೆಸ್‌ನವರು ಟೀಕೆ ಮಾಡುತ್ತಿದ್ದರು. ನಮ್ಮ ಶಾಸಕರ ರಕ್ಷಣೆ ಮಾಡಲು ನಾವು ರೆಸಾರ್ಟ್ ರಾಜಕಾರಣ ಮಾಡಿದೆವು. ಏನು ಭಯ ಇಲ್ಲದ ಕಾಂಗ್ರೆಸ್‌ಗೆ ರೆಸಾರ್ಟ್ ರಾಜಕಾರಣ ಏಕೆ?. ರಾಜ್ಯದ ಜನರ ಬಗ್ಗೆ ಕಾಳಜಿಯಿರುವ ರೆಸಾರ್ಟ್‌ಗೆ ಏಕೆ ಹೋದರು?. ಕೆ.ಸಿ.ವೇಣುಗೋಪಾಲ್, ದಿನೇಶ್ ಗುಂಡೂರಾವ್, ಸಿದ್ದರಾಮಯ್ಯರಿಗೆ ಈ ಬಗ್ಗೆ ಕೇಳುತ್ತಿದ್ದೇನೆ. ಏನು ಅಸಮಾಧಾನ ಇಲ್ಲ ಅಂದರೆ ಮುಂಬೈಗೆ ಏಕೆ ಕಾಂಗ್ರೆಸ್ ಶಾಸಕರು ಹೋದರು? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯರ ಲಫಂಗ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಸಿದ್ದರಾಮಯ್ಯರ ನಾಗರಿಕತೆ ಎತ್ತಿ ತೋರಿಸುತ್ತದೆ. ಸಿದ್ದರಾಮಯ್ಯರ ಹೇಳಿಕೆ ಸಂಸ್ಕೃತಿಗೆ ಧಕ್ಕೆ ತರುವಂತಹದ್ದು ಎಂದು ಕಿಡಿ ಕಾರಿದರು.

Tags

Related Articles

Leave a Reply

Your email address will not be published. Required fields are marked *

Language
Close