ಐಸಿಸ್‌ ಒತ್ತೆಯಾಳುಗಳಾಗಿದ್ದ 39 ಭಾರತೀಯರ ಹತ್ಯೆ

Posted In : ದೇಶ

ದೆಹಲಿ: ಐಸಿಸ್‌ ಒತ್ತೆಗೆ ಸಿಲುಕಿದ್ದ 39 ಭಾರತೀಯರು ಬದುಕಿರುವ ಸಾಧ್ಯತೆಗಳಿಗೆ ತೆರೆ ಎಳೆದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರೆಲ್ಲ ಮೃತರಾಗಿದ್ದಾರೆ ಎಂದು ಘೋಷಿಸಿದ್ದಾರೆ.

“ಅಪಹರಣವಾಗಿದ್ದ 40 ಮಂದಿಯಲ್ಲಿ ಒಬ್ಬರು ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ದಿಬ್ಬವೊಂದನ್ನು ತೋಡಿ ತೆಗೆದ ಮಿಕ್ಕವರ ದೇಹಗಳ ಡಿಎನ್‌ಎ ಮಾದರಿಗಳು ಅವರ  ಸಂಬಂಧಿಗಳದ್ದರೊಂದಿಗೆ ಹೊಂದಾಣಿಕೆಯಾಗಿದ್ದು ಖಾತ್ರಿಯಾಗಿದೆ” ಎಂದು ರಾಜ್ಯ ಸಭೆಯಲ್ಲಿ  ಸುಷ್ಮಾ ಸ್ವರಾಜ್‌ ತಿಳಿಸಿದ್ದಾರೆ.

ಐಸಿಸ್‌ ಅವರನ್ನೆಲ್ಲ ಕೊಂದಿದೆ ಎಂದು ಸ್ವರಾಜ್ ಇದೇ ವೇಳೆ ತಿಳಿಸಿದ್ದಾರೆ.

 ಮೇಲ್ಮನೆಯಲ್ಲಿ ಮಾತನಾಡುತ್ತಾ “ಬಾಗ್ದಾದ್‌ಗೆ ಮೃತ ದೇಹಗಳ ಕೆಲ ಭಾಗಗಳನ್ನು ಕಳುಹಿಸಲಾಗಿತ್ತು. ದೇಹಗಳ ಪರಿಶೀಲನೆ ಪ್ರಕ್ರಿಯೆಯಲ್ಲಿ ಮೃತರು ರಾಜ್ಯಗಳಾದ ಪಂಜಾಬ್‌, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ ಹಾಗು ಬಿಹಾರಗಳ ಸರಕಾರಗಳು ಭಾಗಿಯಾಗಿದ್ದವು” ಎಂದು ಸ್ವರಾಜ್‌ ಇದೇ ಸಂದರ್ಭ ತಿಳಿಸಿದ್ದಾರೆ.

ಮೃತ ದೇಹಗಳನ್ನು ತರಲು ಕೇಂದ್ರ ಸಚಿವ ಹಾಗು ಸೇನೆಯ ಮಾಜಿ ಮುಖ್ಯಸ್ಥ ವಿ ಕೆ ಸಿಂಗ್‌ ಇರಾಕ್‌ಗೆ ತೆರಳಲಿದ್ದಾರೆ ಎಂದು ಸ್ವರಾಜ್‌ ತಿಳಿಸಿದ್ದಾರೆ.

ಈ ಮುನ್ನ ಇದೇ ಮಂದಿಯನ್ನು ಮೃತಪಟ್ಟಿರುವುದಾಗಿ ಘೋಷಿಸಲು ಸ್ವರಾಜ್‌ ಹಿಂದೇಟು ಹಾಕಿದ್ದರು. ಯಾವುದೇ ಸೂಕ್ತ ಸಾಕ್ಷ್ಯವಿಲ್ಲದೇ ಸಾವನ್ನು ಘೋಷಿಸುವುದು ಪಾಪ ಎಂದು ಸ್ವರಾಜ್‌ ತಿಳಿಸಿದ್ದರು.

ಇರಾಕ್‌ನ ಎರಡನೇ ಅತಿ ದೊಡ್ಡ ನಗರವಾದ ಮೊಸುಲ್‌ ಮೇಲೆ ದಾಳಿ ನಡೆಸಿದ್ದ ಐಸಿಸ್‌ ಸೆರಿಹಿಡಿದಿದ್ದ ಒತ್ತೆಯಾಳುಗಳಲ್ಲಿ ಪಂಜಾಬ್‌, ಹಿಮಾಚಲ ಪ್ರದೇಶ ಹಾಗು ಬಿಹಾರದ ಕಾರ್ಮಿಕರೂ ಇದ್ದರು. ಭಯೋತ್ಪಾದಕ ದಾಳಿಗೆ ಬೆದರಿ ಮೊಸುಲ್‌ ಬಿಡಲು ಯತ್ನಿಸಿದ್ದ ಈ ಕಾರ್ಮಿಕರನ್ನು ಐಸಿಸ್‌ ತೆಕ್ಕೆಗೆ ತೆಗೆದುಕೊಂಡಿತ್ತು.

ಸೆರೆಯಾಳುಗಳ ಪೈಕಿ ಪಂಜಾಬ್‌ನ ಗುರ್‌ದಾಸ್‌ಪುರದ ಹಜ್ರಿತ್‌ ಮಶಿ ಎಂಬುವವರು ತಪ್ಪಿಸಿಕೊಂಡು ಬಂದ ಬಳಿಕ ತಮ್ಮ ಜತೆಗಿದ್ದವರ ಕಗ್ಗೊಲೆಗೈದಿದ್ದನ್ನು ಕಣ್ಣಾರೆ ಕಂಡಿದ್ದಾಗಿ ತಿಳಿಸಿದ್ದರು.

ಆದರೆ ಈ ಮಾತುಗಳನ್ನು ತಳ್ಳಿಹಾಕಿದ್ದ ಭಾರತ ಸರಕಾರ ಯಾವುದೇ ಸಾಕ್ಷ್ಯ ಸಿಗುವವರೆಗೂ ಒತ್ತೆಯಾಳುಗಳನ್ನು ಜೀವಂತವಿರುವುದಾಗಿ ಪರಿಗಣಿಸುವುದಾಗಿ ಹೇಳಿತ್ತು.

ಐಸಿಸ್ ಹಿಡಿತದಿಂದ ಮೊಸುಲ್‌ಅನ್ನು ಮುಕ್ತಗೊಳಿಸಿದ ಬಳಿಕ ಒತ್ತೆಯಾಳುಗಳನ್ನು ಹುಡುಕಿಕೊಡಲು ಇರಾಕೀ ಪಡೆಗಳಿಗೆ ಭಾರತ ಸರಕಾರ ವಿನಂತಿ ಮಾಡಿಕೊಂಡಿತ್ತು.

Leave a Reply

Your email address will not be published. Required fields are marked *

three × 2 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top