About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಅಲೋಕ್‌ ವರ್ಮಾ ರಾಜೀನಾಮೆ ಹಿಂದೆ ದೊಡ್ಡ ಹುನ್ನಾರು ಅಡಗಿದೆ: ಮಾಜಿ ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ: ಸಿಬಿಐ ನಿರ್ದೇಶಕ ಸ್ಥಾನಕ್ಕೆ ಅಲೋಕ್‌ ಕುಮಾರ್ ವರ್ಮಾ ರಾಜೀನಾಮೆ ನೀಡಿರುವ ಹಿಂದೆ ದೊಡ್ಡ ಹುನ್ನಾರು ಅಡಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಫೇಲ್ ಹಗರಣ ಬಯಲಾಗುತ್ತದೆ ಎನ್ನುವ ಕಾರಣಕ್ಕೆ ಈ ಮಾಡಲಾಗಿದೆ. ಇದೆಲ್ಲಾ ಪ್ರಧಾನಿ ನರೇಂದ್ರ ಮೋದಿಯವರ ಕೆಲಸ ಎಂದು ಆರೋಪಿಸಿದರು.

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಸೀಟು ಹಂಚಿಕೆಯ ಕುರಿತು ಈವರೆಗೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಈ ತಿಂಗಳೊಳಗೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸೀಟು ಹಂಚಿಕೆಯ ವಿಷಯವಾಗಿ ಈಶ್ವರ ಖಂಡ್ರೆ ನೀಡಿರುವ ಹೇಳಿಕೆ ಅವರ ವೈಯಕ್ತಿಕ. ಪಕ್ಷದ ಚೌಕಟ್ಟಿನಲ್ಲಿ ಯಾವುದೇ ಸಭೆ ನಡೆದಿಲ್ಲ, ಸಭೆ ಬಳಿಕ ಸೀಟು ಹಂಚಿಕೆ ಎಷ್ಟೆಂದು ನಿರ್ಧಾರಕ್ಕೆ ಬರುತ್ತೇವೆ ಎಂದರು.

ಸಚಿವ ಪುಟ್ಟರಂಗ ಅವರ ಆಪ್ತ ಸಹಾಯಕ ಹಣ ಪಡೆದ ಪ್ರಕರಣದಲ್ಲಿ ಎಸಿಬಿ ತನಿಖೆ ನಡೆಸುತ್ತಿದೆ. ಮೊದಲು ತನಿಖೆ ಮುಗಿದು ವರದಿ ಬರಲಿ, ಆ ನಂತರ ಕ್ರಮದ ಬಗ್ಗೆ ನೋಡೋಣ. ಯಾರೋ ಒಬ್ಬರ ಬಳಿ ಹಣ ಸಿಕ್ಕರೆ ಅದು ಸಚಿವರಿಗೆ ಸೇರಿದ್ದು ಎಂದು ಹೇಳಲಾಗದು. ಇದು ಊಹಾಪೋಹವಷ್ಟೇ. ತನಿಖೆ ಮುಗಿದ ನಂತರ ವಾಸ್ತವ ಎಲ್ಲರಿಗೂ ಗೊತ್ತಾಗಲಿದೆ. ಅಲ್ಲಿಯವರೆಗೆ ಕಾದು ನೋಡೋಣ ಎಂದರು.

ಎಲ್ಲರಿಗೂ ಬಿಜೆಪಿ ಸೋಲಿಸುವುದೇ ಉದ್ದೇಶ: ಎಸ್‌ಪಿ, ಬಿಎಸ್ಪಿಯೊಂದಿಗೆ ಯುಪಿಎ ಮಾಡಿಕೊಳ್ಳುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಕೋಮುವಾದಿ ಪಕ್ಷ ಬಿಜೆಪಿಯನ್ನು ಸೋಲಿಸುವುದೇ ಉದ್ದೇಶವಾಗಿದೆ. ಹೀಗಾಗಿ ಯಾರೂ ಮಹಾಘಟಬಂಧನ ಬಿಟ್ಟು ಹೋಗದಿದ್ದರೆ ಒಳಿತು. ಅಧಿಕಾರಕ್ಕೆ ಬಂದರೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಗುವುದು ಎಂದು ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಈ ಹಿಂದೆ ಮೋದಿಯವರು ಈ ಹೇಳಿಕೆ ನೀಡಿದ್ದರು. ಈಗ ರಾಹುಲ್ ಗಾಂಧಿ ಆಂಧ್ರಪ್ರದೇಶ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆಂದು ಹೇಳಿದ್ದಾರಷ್ಟೇ ಎಂದರು.

Tags

Related Articles

One Comment

  1. ಈ ಹಣ ಪುಟ್ಟರಂಗಪ್ಪ ಶೆಟ್ಟಿಗಲ್ಲದೆ ಮತ್ತೆ ನಿನಗೆ ಕೊಡಲು ತಂದಿದ್ದ?

Leave a Reply

Your email address will not be published. Required fields are marked *

Language
Close