About Us Advertise with us Be a Reporter E-Paper

ರಾಜ್ಯ

ಬಡವರ ಕಷ್ಟಕ್ಕೆ ಕರಗುತ್ತಿದ್ದ ಕರ್ಣ

- ಡಾ. ದೊಡ್ಡರಂಗೇಗೌಡ

ನಟ ಅಂಬರೀಶ್ ಅವರನ್ನು ಉತ್ತುಂಗಕ್ಕೇರಿಸಿದ ಪುಟ್ಟಣ್ಣ ಕಣಗಲ್ ಅವರ ನಿರ್ದೇಶನದ ‘ಪಡುವಾರಹಳ್ಳಿ ಚಲನಚಿತ್ರದ ಮೂಲಕ ನನ್ನ-ಅವರ ನಿಕಟ ಸ್ನೇಹ ಸಂಬಂಧ ಬೆಳೆಯಿತು.

ಈವರೆಗೂ ಅಂಬರೀಶ್ ಅವರ ‘ಅರಣ್ಯದಲ್ಲಿ ಅಭಿಮನ್ಯು, ಟೋನಿ ಸೇರಿದಂತೆ 16 ಚಿತ್ರಗಳಿಗೆ ಸುಮಾರು 25 ಹಾಡು ಬರೆದಿದ್ದೇನೆ. ತಂತ್ರಜ್ಞರು ಎಲ್ಲರೂ ಸೇರಿ ಅವರಿಗಾಗಿ ಚಿತ್ರ ಮಾಡಲು ಸಿದ್ಧವಾಗಿದ್ದರು. ನಾನು ಆ ಚಿತ್ರಕ್ಕೆ ‘ಅಮರನಾಥ’ ಎಂದು ಹೆಸರಿಟ್ಟೆ. ಸುಬ್ಬಿ ಸುಬ್ಬಕ್ಕ ಸುವ್ವಲಾಲಿ ಚಿತ್ರದ ಬಳಿಕ ಅವರಿಗೆ ಮೂರು ಹಾಡು ಹಾಗೂ ಡಾ. ವಿಷ್ಟುವರ್ಧನ್ ಹಾಗೂ ಶ್ರಿನಿವಾಸನ್ ಅಭಿನಯದ ಸಿನಿಮಾದಲ್ಲಿ ಅಂಬರೀಶ್‌ಗೆ ಪಾತ್ರದ ರೀತಿಯ ಹಾಡು ರಚಿಸಿದ್ದೆ.

‘ಚಕ್ರವರ್ತಿ’ಯಂತಹ ಪಾತ್ರ ಮಾಡುವ ಆಸೆ ಹೊಂದಿದ್ದರು. ಶ್ರೀ ಕ್ಷೇತ್ರ ಆದಿಚುಂಚನಗಿರಿ ಚಿತ್ರದಲ್ಲಿ ಅಣ್ಣಾವ್ರ ಹಾಡಿನ ರೀತಿಯಲ್ಲಿ ವಿಶೇಷ ಹಾಡು ರಚಿಸಲಾಗಿತ್ತು. ಇದರ ಚಿತ್ರೀಕರಣ ವೇಳೆ ಅಂಬರೀಶ್ ಸಚಿವರಾಗಿದ್ದು, ನಾನು ವಿಧಾನಪರಿಷತ್ ಸದಸ್ಯನಾಗಿದ್ದೆ. ವಿಶೇಷವೆಂದರೆ ಹಾಡಿನಲ್ಲಿ ಅಂದು 27 ಜನ ಶಾಸಕರು ಪಾತ್ರ ನಿರ್ವಹಿಸಿದ್ದೆವು ಎಂದು ಚಿತ್ರರಂಗದಲ್ಲಿ ತಾವು ಕಂಡ ಅಂಬರೀಶ್‌ರ ಸ್ನೇಹ ಕುರಿತು ವಿವರಿಸಿದರು.

ಎಲ್ಲರನ್ನೂ ಅಂತಃಕರಣದಿಂದಲೇ ಮಾತನಾಡಿಸುವ ಅಂಬರೀಶ್, ಅವರ ಬಳಿ ಹೇಳಿಕೊಂಡು ಬರುತ್ತಿದ್ದ ತಂತ್ರಜ್ಞರು, ಲೈಟ್‌ಬಾಯ್‌ಗಳಿಗೆ ತಕ್ಷಣವೇ ಧನಸಹಾಯ ಮಾಡುತ್ತಿದ್ದರು. ಅವರ ಮನೆ ಕಷ್ಟಕ್ಕೆ ಸದಾ ಸ್ಪಂದಿಸುತ್ತಿದ್ದರು. ಹೀಗಾಗಿ ಅವರು ಕರ್ಣನೇ. ಆಪ್ತ ಡಾ. ವಿಷ್ಣುವರ್ಧನ್‌ರನ್ನು ಕಾಣುವಂತೆ ಎಲ್ಲರನ್ನೂ ಕಾಣುತ್ತಿದ್ದರು. ನಿರ್ದೇಶಕ ಎಸ್.ಪಿ. ರಾಜೇಂದ್ರ ಸಿಂಗ್‌ಬಾಬು ಮತ್ತು ಅಂಬರೀಶ್ ಉತ್ತಮ ಸ್ನೇಹಿತರಾಗಿದ್ದರು.

ಮಗ ಅಭಿಷೇಕ್ ಗೌಡ ಅವರು ಚಿತ್ರರಂಗಕ್ಕೆ ಆಗಮಿಸಿದ್ದು, ತಂದೆಗೆ ಸಿಕ್ಕ ‘ಅಂತ, ರಂಗನಾಯಕಿ’ಯಂತಹ ಪಾತ್ರಗಳೇ ಸಿಕ್ಕು ಉತ್ತುಂಗಕ್ಕೇರಿ, ಖ್ಯಾತಿ ಮತ್ತು ಜನಪ್ರೀಯತೆ ಗಳಿಸಲಿ. ಅಗಲಿದ ಆತ್ಮಕ್ಕೆ ಶಾಂತಿ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ.

Tags

Related Articles

Leave a Reply

Your email address will not be published. Required fields are marked *

Language
Close