About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

‘ಅಮರ’ನಾಥ ಅಂತಿಮ ಯಾತ್ರೆ

"

ಬೆಂಗಳೂರು: ರೆಬೆಲ್ ಸ್ಟಾರ್, ಮಾಜಿ ಸಚಿವ ಅಂಬರೀಷ್‌ ಅವರ ಅಗಲಿಕೆಗೆ ಇಡೀ ಕನ್ನಡನಾಡು ಕಂಬನಿ ಮಿಡಿದಿದೆ. ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದೆ.

ನಿನ್ನೆ ರಾತ್ರಿಯಿಡೀ ಮಂಡ್ಯದ ಗಂಡು ಅಂಬರೀಶ್‌ರ ಅಂತಿಮ ದರ್ಶನ ಪಡೆಯೋಕೆ ಅಭಿಮಾನಿಗಳು ಮುಗಿಬಿದ್ದಿದ್ದರು. ತಡರಾತ್ರಿಯವರೆಗೂ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅಂತಿಮದರ್ಶನ ಮುಂದುವರಿದಿತ್ತು. ಬೇರೆ ಬೇರೆ ಜಿಲ್ಲೆಗಳಿಂದ ಅಭಿಮಾನಿಗಳು ಆಗಮಿಸಿ ಚಳಿಯನ್ನೂ ಲೆಕ್ಕಿಸದೇ ಅಂಬರೀಶ್‌ರ ಅಂತಿಮ ದರ್ಶನ ಪಡೆದ್ರು. ಅಭಿಮಾನಿಗಳನ್ನ ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ನಿನ್ನೆ ಅಂಬರೀಶ್‌ ಹುಟ್ಟೂರಾದ ಮಂಡ್ಯಕ್ಕೆ ಪಾರ್ಥಿವ ಶರೀರವನ್ನು ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಕಂಠೀರವ ಸ್ಟುಡಿಯೋದಲ್ಲಿ ವರನಟ ಡಾ. ರಾಜ್​ಕುಮಾರ್ ಸಮಾಧಿ ಪಕ್ಕದಲ್ಲೇ ಅಂಬರೀಷ್ ಅಂತ್ಯಕ್ರಿಯೆ ನಡೆಸಲು ಕುಟುಂಬ ಸದಸ್ಯರು ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ, ಒಕ್ಕಲಿಗ ಸಂಪ್ರದಾಯದಂತೆ ಸೋಮವಾರ ಮಧ್ಯಾಹ್ನ 2 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಲಿದೆ.

ಮಂಡ್ಯದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಸುಮಾರು ಎರಡೂವರೆ ಲಕ್ಷ ಜನರು ಅಂತಿಮ ದರ್ಶನ ಪಡೆದಿದ್ದಾರೆ. ಅಂಬಿ ಮೇಲಿನ ಅಭಿಮಾನಕ್ಕೆ ಮಂಡ್ಯ ಜನರು ಶಾಂತಿಯಿಂದ ವರ್ತಿಸಿದ್ದಾರೆ. ಸರ್ಕಾರದ ವತಿಯಿಂದ ನಿಮ್ಮ ಆಸೆ ಈಡೇರಿಸಿದ್ದೇವೆ. ಮಂಡ್ಯಕ್ಕೆ ಪಾರ್ಥಿವ ಶರೀರವನ್ನು ತರುವುದೇ ಸವಾಲಾಗಿತ್ತು. ಯಾವುದೇ ಉದ್ವೇಗಕ್ಕೆ ಒಳಗಾಗದೇ ಶಾಂತ ರೀತಿಯಲ್ಲಿ ವರ್ತಿಸಿ ಸಹಕಾರ ನೀಡಿದ ನಿಮಗೆ ಧನ್ಯವಾದಗಳು ಎಂದು ಸಿಎಂ ಪ್ರತಿಕ್ರಿಯೆ ನೀಡಿದರು.

ಇನ್ನು ಅಪ್ಪಾಜಿ ಅಂತಿಮ ದರ್ಶನಕ್ಕೆ ಸ್ವೀಡನ್ ನಿಂದ ದರ್ಶನ್ ಓಡೋಡಿ ಬಂದಿದ್ದಾರೆ. ಅಂಬರೀಷ್ ಅಂದರೆ ನಟ ದರ್ಶನ್‍ಗೆ ಅಭಿಮಾನ, ಅಪಾರ ಗೌರವವಿತ್ತು. ಅಲ್ಲದೆ ದರ್ಶನ್ ಅಂಬಿ ಅವರನ್ನು ಅತಿ ಹೆಚ್ಚು ಪ್ರೀತಿಸುತ್ತಿದ್ದರು. ತಮ್ಮ ಶೂಟಿಂಗ್ ಮೊಟಕುಗೊಳಿಸಿ ಇಂದು ಬೆಂಗಳೂರಿಗೆ ದರ್ಶನ್ ಆಗಮಿಸಿದ್ದು, ಅಂಬರೀಷ್ ಅಂತಿಮದರ್ಶನ ಪಡೆಯಲಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close