About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಸಮಯಕ್ಕೆ ಸರಿಯಾಗಿ ಬರದ ಆಂಬ್ಯುಲೆನ್ಸ್‌; ಕುರಿ ಸಾಗಿಸುವ ವಾಹನದಲ್ಲಿ ಗರ್ಭಿಣಿ ಜಿಲ್ಲಾಸ್ಪತ್ರೆಗೆ…

ಚಿತ್ರದುರ್ಗ: ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್‌ ಸಿಗದ ಕಾರಣ ಪ್ರಸವ ವೇದನೆಯಲ್ಲಿದ್ದ ತುಂಬು ಗರ್ಭಿಣಿಯನ್ನು ಕುರಿ ಸಾಗಿಸುವ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಕರೆತಂದಿರುವ ಘಟನೆ ನಡೆದಿದೆ.

ಜಿಲ್ಲೆಯ ಹಿರಿಯೂರು ತಾಲೂಕಿನ ಮಾರಿಕಣಿವೆ ಗರ್ಭಿಣಿ ಲಕ್ಷ್ಮಿಯನ್ನು ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡಾಗ ಸಮೀಪದ ಮಾಡದಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಇಂದು ಮಧ್ಯಾಹ್ನದ ತನಕ ಸುಮ್ಮನಿದ್ದ ವೈದ್ಯರು ಕೊನೆ ಗಳಿಗೆಯಲ್ಲಿ ಇಲ್ಲಿ ಹೆರಿಗೆ ಮಾಡಿಸುವುದು ಕಷ್ಟ, ಹೀಗಾಗಿ ಕೂಡಲೇ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದರು.

ಈ ವೇಳೆ ಗರ್ಭಿಣಿ ಮಹಿಳೆಯ ಪೋಷಕರು ಆಂಬ್ಯುಲೆನ್ಸ್‌ ಗಾಗಿ ಹುಡುಕಾಡಿದ್ದಾರೆ. ಆದ್ರೆ ಆಂಬ್ಯುಲೆನ್ಸ್‌ ಸಿಗುವುದು ಒಂದೂವರೆ ತಾಸು ತಡವಾಗುತ್ತದೆ ಎಂದಿದ್ದಾರೆ. ಇದರಿಂದ ಪೋಷಕರು ಗರ್ಭಿಣಿ ಮಹಿಳೆಯನ್ನ ಕುರಿಗಳನ್ನು ಸಾಗಿಸುವ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಕರೆತಂದಿದ್ದು, ತಕ್ಷಣಕ್ಕೆ ಸ್ಪಂದಿಸದ ಆಂಬ್ಯುಲೆನ್ಸ್‌ ಸಿಬ್ಬಂದಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close