About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಪಾಕಿಸ್ತಾನ ವಿರುದ್ದ ‘ದೊಡ್ಡಣ್ಣ’ ಗುಡುಗು

ವಾಷಿಂಗ್ಟನ್: ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಪರಿಣಾಮಕಾರಿಯಾಗಿ ಹೋರಾಡಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ಹೊರಹಾಕಿದ್ದಾರೆ.

ಪಾಕಿಸ್ತಾನಕ್ಕೆ ಅಮೆರಿಕ 1.3 ಶತಕೋಟಿ ಡಾಲರ್ ನೆರವು ನೀಡಿದೆ. ಆದರೆ ಪಾಕ್ ಮಾತ್ರ ತನ್ನ ಪ್ರದೇಶದೊಳಗಿನ ಭಯೋತ್ಪಾದಕರ ದಮನ ಮಾಡಿಲ್ಲ. ಹೀಗಾಗಿ ಪಾಕ್‍ಗೆ ಆರ್ಥಿಕ ಸಹಕಾರ ನೀಡುವ ವಿಚಾರದಲ್ಲಿ ಅಮೆರಿಕ ಕಠಿಣ ನಿಲುವು ತೆಗೆದುಕೊಂಡಿದೆ.

“ಪಾಕಿಸ್ತಾನಕ್ಕೆ ಅಮೆರಿಕ ಬಿಲಿಯನ್ ಗಟ್ಟಲೆ ಆರ್ಥಿಕ ಸಹಕಾರ ನೀಡಿತ್ತು. ಆದರೆ ಪಾಕಿಸ್ತಾನ ಮಾತ್ರ ಒಸಾಮ ಬಿನ್ ಲಾಡೆನ್ ತನ್ನ ಆಶ್ರಯದಲ್ಲಿದ್ದಾನೆ ಎಂಬ ಸುಳಿವನ್ನೂ ನೀಡಲಿಲ್ಲ” ಎಂದು ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ಸೇನಾ ಸಹಕಾರಕ್ಕಾಗಿ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ಮಿಲಿಯನ್ ಗಟ್ಟಲೆ ಆರ್ಥಿಕ ನೆರವನ್ನು ನಿಲ್ಲಿಸುವುದಕ್ಕೆ ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಣಯ ತೆಗೆದುಕೊಂಡಿದ್ದು, ತಮ್ಮ ಆಡಳಿತದ ನಿರ್ಧಾರವನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್, “ಅಮೆರಿಕದಿಂದ ಬಿಲಿಯನ್ ಡಾಲರ್ ಗಟ್ಟಲೆ ಹಣ ಪಡೆಯುವ ಪಾಕಿಸ್ತಾನದವರು ನಮಗಾಗಿ ಏನನ್ನೂ ಮಾಡುವುದಿಲ್ಲ. ಬಿನ್ ಲಾಡೆನ್ ಹಾಗೂ ಅಫ್ಘಾನಿಸ್ತಾನದ ವಿಷಯದಲ್ಲಿ ಇದು ಸಾಬೀತಾಗಿದೆ” ಎಂದು ಟ್ರಂಪ್ ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close