About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್ ಹರ್ಬರ್ಟ್ ವಾಕರ್ ಬುಶ್ ಇನ್ನಿಲ್ಲ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಹರ್ಬರ್ಟ್ ವಾಕರ್ ಬುಶ್(94) ಹೂಸ್ಟನ್‍ನಲ್ಲಿ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಪಾರ್ಕಿನ್ಸನ್‌ ಕಾಯಿಲೆಯಿಂದ ಬಳಲುತ್ತಿದ್ದ ಅವರು ಗಾಲಿಚಕ್ರವನ್ನು ಅವಲಂಬಿಸಿಕೊಂಡಿದ್ದರು ಎನ್ನಲಾಗಿದೆ. ರಿಪಬ್ಲಿಕ್‌ ಪಕ್ಷದ ನಾಯಕರಾಗಿದ್ದ ಜಾರ್ಜ್‌ ವಾಕರ್‌ ಬುಷ್‌ ಅಮೆರಿಕದ 41 ನೇ ಅಧ್ಯಕ್ಷರಾಗಿ ಆಳ್ವಿಕೆ ನಡೆಸಿದ್ದರು. ತಂದೆಯ ನಿಧನದ ಸುದ್ದಿಯನ್ನು ಪ್ರಕಟಣೆಯಲ್ಲಿ ತಿಳಿಸಿದ ಅವರ ಪುತ್ರ ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್, “94 ವರ್ಷಗಳ ಮರೆಯಲಾಗದ ಕ್ಷಣಗಳನ್ನು ನನ್ನ ತಂದೆ ಬಿಟ್ಟು ಹೋಗಿದ್ದಾರೆ, ಈ ವಿಷಯವನ್ನು ತಿಳಿಸಲು ಅತೀವ ದುಃಖವಾಗಿದೆ” ಎಂದು ತಿಳಿಸಿದ್ದಾರೆ.

ಅಮೆರಿಕ-ರಷ್ಯಾ ಶೀತಲ ಸಮರದ ಸಂದರ್ಭದಲ್ಲಿ ದೇಶವನ್ನು ವ್ಯವಸ್ಥಿತವಾಗಿ ಮುನ್ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 1991ರ ಗಲ್ಫ್​ ಯುದ್ಧದಲ್ಲೂ ಯುಎಸ್​ ಯಶಸ್ಸು ಕಾಣಲು ಬುಷ್​​ ಕಾರಣ. ಅಲ್ಲದೆ ಎರಡನೇ ಮಹಾಯುದ್ಧದ ಹೀರೋ ಎಂದೇ ಕರೆಯಲ್ಪಡುತ್ತಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close