About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಪಾಕ್‌ಗೆ 1.66 ಶತಕೋಟಿ ಡಾಲರ್‌ ನೆರವು ಸ್ಥಗಿತಪಡಿಸಿದ ಅಮೆರಿಕ

ವಾಷಿಂಗ್ಟನ್‌: ಪಾಕಿಸ್ತಾನದ ವಿರುದ್ಧ ಕಠಿಣ ನಿಲುವೆ ತಳೆದಿರುವ ಅಧ್ಯಕ್ಷ ಡಿನಾಲ್ಡ್‌ ಟ್ರಂಪ್‌ ನೇತೃತ್ವದ ಅಮೆರಿಕ ಸರಕಾರ, ಇಸ್ಲಾಮಾಬಾದ್‌ಗೆ ನೀಡಬೇಕಿದ್ದ ಮತ್ತೊಂದು ಆರ್ಥಿಕ ನೆರವನ್ನು ಕಡಿತಗೊಳಿಸಿದೆ.

1.66 ಶತಕೋಟಿ ಡಾಲರ್‌ನಷ್ಟು ಭದ್ರತಾ ನೆರವೆಂದು ಇಸ್ಲಾಮಾಬಾದ್‌ಗೆ ಕೊಡಬೇಕಿದ್ದ ನೆರವನ್ನು ವಾಷಿಂಗ್ಟನ್‌ ತಡೆಹಿಡಿದಿದೆ.

ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಸದಾ ಬೆನ್ನಿಗೆ ಚೂರಿ ಹಾಕುತ್ತಲೇ ಬಂದಿರುವ ಪಾಕಿಸ್ತಾನದ ವಿಚಾರದಲ್ಲಿ ಅಮೆರಿಕದ ಹತಾಶೆಯನ್ನು ಈ ನಡೆ ತೋರುತ್ತಿದೆ ಎಂದು ವಾಷಿಂಗ್ಟನ್‌ ಹಿರಿಯ ಭದ್ರತಾ ಅಧಿಕಾರಿ ಡೇವಿಡ್‌ ಸಿಡ್ನಿ  ತಿಳಿಸಿದ್ದಾರೆ.

“ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಸಹಕಾರ ನೀಡುವುದಾಗಿ ಪಾಕಿಸ್ತಾನದ ನಾಯಕತ್ವ ಹೇಳುತ್ತಲೇ ಇದೆ. ಆದರೆ ಮಾತುಗಳಿಂದ ಆಚೆಗೆ ಯಾವುದೇ ಕೆಲಸ ಮಾಡುತ್ತಿಲ್ಲ. ಹಾಗಾಗಿ ಅಧ್ಯಕ್ಷ ಟ್ರಂಪ್‌ ಮಾತ್ರವಲ್ಲದೇ ಅನೇಕ ಅಮೆರಿಕನ್ನರು ಅಸಮಾಧಾನಗೊಂಡಿದ್ದಾರೆ” ಎಂದು ಸಿಡ್ನಿ ತಿಳಿಸಿದ್ದಾರೆ.

ಒಸಾಮಾ ಬಿನ್‌ ಲಾಡೆನ್‌ನನ್ನು ಹೊಡೆದುರುಳಿಸಿದ ಸಂದರ್ಭ ಪೆಂಟಗನ್‌ನ ಹಿರಿಯ ಅಧಿಕಾರಿಯಾಗಿದ್ದ ಸಿಡ್ನಿ, ಪಾತಕಿಯು ತಮ್ಮ ನೆಲೆಯಲ್ಲಿ ಇರುವುದು ಪಾಕಿಸ್ತಾನೀಯರಿಗೆ ತಿಳಿದಿತ್ತು ಎಂದಿದ್ದಾರೆ.

ಪಾಕಿಸ್ತಾನ ಮಿಲಿಟರಿಯ ಉನ್ನತಾಧಿಕಾರಿಗಳ ಮಟ್ಟದ ಕೆಲವೇ ಮಂದಿಯ ಗುಂಪಿಗೆ ಒಸಾಮಾ ಅಬ್ಬೋಟಾಬಾದ್‌ನಲ್ಲಿ ಅಡಗಿದ್ದ ವಿಷಯ ತಿಳಿದಿತ್ತು ಎಂದು ಸಿಡ್ನಿ ತಿಳಿಸಿದ್ದಾರೆ.

“ಪಾಕಿಸ್ತಾನದ ಮೂಲಕ ತನ್ನ ಶಸ್ತ್ರಗಳು, ಹಣ ಹಾಗು ಮಂದಿಯನ್ನು ತಾಲೆಬಾನ್ ಸಾಗಾಟ ಮಾಡುತ್ತಿದೆ. ತಾಲಿಬಾನ್‌ ಕಮಾಂಡರ್‌ಗಳು ತಮ್ಮ ಕುಟುಂಬಗಳೊಂದಿಗೆ ಪಾಕ್‌ನಲ್ಲಿ ಆಶ್ರಯ ಪಡೆಯುತ್ತಿರುವ ವಿಷಯವನ್ನು ನಾವು ನೋಡಿದ್ದೇವೆ. ಪಾಕಿಸ್ತಾನ ಹಾಗು ಅಫ್ಘಾನಿಸ್ತಾನಗಳ ನಡುವೆ ಅವರ ಚಲನವಲನಗಳನ್ನೆಲ್ಲಾ ಗಮನಿಸುತ್ತಿದ್ದೇವೆ” ಎಂದು ಸಿಡ್ನಿ ತಿಳಿಸಿದ್ದಾರೆ.

“ಭಾರತದ ವಿರುದ್ಧ ಭಯೋತ್ಪಾದಕರನ್ನು ಎತ್ತಿ ಕಟ್ಟುವುದನ್ನು ಪಾಕಿಸ್ತಾನ ನಿಲ್ಲಿಸಿದಲ್ಲಿ, ಭಾರತದ ಜತೆ ಸೇರಿ ದೊಡ್ಡ ಮಟ್ಟದ ಆರ್ಥಿಕ ಫಲವನ್ನು ಇಸ್ಲಾಮಾಬಾದ್‌ ಪಡೆದುಕೊಳ್ಳಬಹುದಾಗಿದೆ” ಎಂದು ಸಿಡ್ನಿ ಇದೇ ಸಂದರ್ಭ ತಿಳಿಸಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close