About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಅಮೇಥಿಯಲ್ಲಿ ಶಿವನಿಗೆ ರಾಹುಲ್ ಗಾಂಧಿ ವಿಶೇಷ ಪೂಜೆ ಸಲ್ಲಿಕೆ (ವಿಡಿಯೊ)

ಅಮೇಥಿ: ಲೋಕಸಭಾ ಕ್ಷೇತ್ರ ಅಮೇಥಿಗೆ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಶಿವನ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಶಿವನ ದೇಗುಲಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿಗೆ ಕನ್ವಾರಿಯಾ ಸಾಧುಗಳು ಸ್ವಾಗತ ಕೋರಿದರು. ಈ ವೇಳೆ ಸ್ಥಳದಲ್ಲಿ ನೆರೆದಿದ್ದ ಜನರು ಭಮ್ ಭಮ್ ಭೋಲೇ ಎಂದು ಕೂಗಿದರು. ಶಿವ ದೇವಸ್ಥಾನದಲ್ಲಿ ರಾಹುಲ್ ಗಾಂಧಿ ಪ್ರಾರ್ಥನೆ ಮಾಡಿದ ಬಳಿಕ ಅವರನ್ನು ಕನ್ವಾರಿಯಾ ಸಾಧುಗಳು ಸನ್ಮಾನಿಸಿದರು.

ಅಮೇಥಿ ಕ್ಷೇತ್ರಕ್ಕೆ ಎರಡು ದಿನಗಳ ಭೇಟಿಗೆ ತೆರಳಿರುವ ರಾಹುಲ್ ಗಾಂಧಿ ಶಿವನ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದುದು ವಿಶೇಷವಾಗಿದ್ದು, ಇನ್ನು ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ಪ್ರಚಾರಕ್ಕೆ ತೆರಳಿದ್ದ ರಾಹುಲ್ ತಾವು ರೋಡ್ ಶೋ ನಡೆಸುವ ಮಾರ್ಗದುದ್ದಕ್ಕೂ ಅವರು ಶಿವ ಲಿಂಗಕ್ಕೆ ನೀರು ಹಾಕುತ್ತಿರುವ ಫ್ಲೆಕ್ಸ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದವು.

Tags

Related Articles

Leave a Reply

Your email address will not be published. Required fields are marked *

Language
Close